ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಫ್ಕೋ ಸಂಸ್ಥೆಯಿಂದ ಉಚಿತ ಬೆಳೆ ವಿಮೆ

Srinivasa Murthy VN
Updated On : 27 Jul 2013, 12:23 pm

ಕ.ಪ್ರ.ವಾರ್ತೆ ಸುತ್ತೂರು ಜು. 26
ಇಫ್ಕೋ, ಮೈಸೂರಿನ ಕೃಷಿ ಇಲಾಖೆ ಹಾಗೂ ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಇಲ್ಲಿನ ಮಂಗಳ ಮಂಟಪದಲ್ಲಿ ಶುಕ್ರವಾರ ನಡೆದ ಬತ್ತ ಬೆಳೆಯ ಸಮಗ್ರ ನಿರ್ವಹಣೆ - ವಿಚಾರ ಸಂಕಿರಣವನ್ನು ಇಫ್ಕೋ ಸಂಸ್ಥೆಯ ದಕ್ಷಿಣ ರಾಜ್ಯಗಳ ವಲಯ ವ್ಯವಸ್ಥಾಪಕ ಕೆ.ಟಿ. ಮಂಜುನಾಥ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಸರಿಯಾದ ಸಮಯದಲ್ಲಿ ರಸಗೊಬ್ಬರಗಳನ್ನು ಬೆಳೆಗಳಿಗೆ ಉಪಯೋಗಿಸಬೇಕು ಹಾಗೂ ಇಫ್ಕೋ ಸಂಸ್ಥೆ ವತಿಯಿಂದ ಬೆಳೆ ವಿಮೆಯನ್ನು ಉಚಿತವಾಗಿ ಮಾಡಿಸಿಕೊಡಲಾಗುವುದು ಎಂದು ತಿಳಿಸಿದರು.
ಕೆವಿಕೆಯ ಕಾರ್ಯಕ್ರಮ ಸಂಯೋಜಕ ಡಾ.ಅರುಣ್ ಬಳಮಟ್ಟಿ ಮಾತನಾಡಿ, ನಾಲೆಯಲ್ಲಿ ನೀರು ಸಕಾಲದಲ್ಲಿ ಬಾರದಿರುವ ಕಾರಣ ಅಲ್ಪಾವಧಿ ಬತ್ತ ತಳಿಗಳನ್ನು ಬಳಸಲು ರೈತರಿಗೆ ಕರೆ ನೀಡಿದರು.
ಕೆವಿಕೆಯಲ್ಲಿ ಜ್ಯೋತಿ ತಳಿಯ ಬಿತ್ತನೆ ಬೀಜ ಮಾರಾಟಕ್ಕೆ ಲಭ್ಯವಿದೆ ಹಾಗೂ ಯಂತ್ರದ ಮುಖಾಂತರ ನಾಟಿ ಮಾಡಲು ಯುವ ರೈತರ ಕಾರ್ಯಪಡೆ ಸಿದ್ಧವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕೆವಿಕೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಕೆ.ಆರ್. ಕೃಷ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಘು ಪೋಷಕಾಂಶಗಳ ಕುರಿತು ರೈತರಿಗೆ ಮಾಹಿತಿ ನೀಡಿ ಹಾಗೂ ಬತ್ತದ ಬೆಳೆಯಲ್ಲಿ ಯಾಂತ್ರೀಕರಣವನ್ನು ಅಳವಡಿಸಿಕೊಳ್ಳಲು ರೈತರಿಗೆ ಕರೆ ನೀಡಿದರು.
ಮಂಡ್ಯದ ವಿ.ಸಿ. ಫಾರಂನ ಹಿರಿಯ ವಿಜ್ಞಾನಿ ಡಾ.ಎಂ.ಪಿ. ರಾಜಣ್ಣ, ಬತ್ತದ ತಳಿಗಳ ಕುರಿತು ರೈತರಿಗೆ ಸವಿಸ್ತಾರವಾಗಿ ತಿಳಿಸಿದರು.
ಬೇಸಾಯ ತಜ್ಞ ಡಾ.ರಾಮಚಂದ್ರ ಬತ್ತದ ಬೇಸಾಯದಲ್ಲಿ ಶ್ರೀ ಪದ್ಧತಿ ಅಳವಡಿಕೆ, ಏರೋಬಿಕ್ ಬತ್ತದ ಬೇಸಾಯ, ನೀರು ನಿರ್ವಹಣೆ, ಬೇಸಾಯದ ಸುಸ್ಥಿರತೆಯ ಕುರಿತು ಮಾಹಿತಿ ನೀಡಿದರು. ಇಫ್ಕೋ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಸಿ.ಎಸ್. ಪಾಟೀಲ್ ರವರು ಬತ್ತದಲ್ಲಿ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಜೆಎಸ್‌ಎಸ್ ಕೆವಿಕೆಯ ವಿಷಯ ತಜ್ಞ ಎಸ್. ಸತೀಶ್ ಬತ್ತದಲ್ಲಿ ಸಮಗ್ರ ಪೀಡೆ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಟಿ.ಎಲ್. ರಘು ಸ್ವಾಗತಿಸಿದರು. ಶ್ರೀನಿವಾಸ್ ಮಂಕಣಿ ವಂದಿಸಿದರು. ಚಂದ್ರಶೇಖರ ಎಸ್. ಕಳ್ಳಿಮನಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement