ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಸೆರೆ

Srinivasa Murthy VN
Updated On : 27 Jul 2013, 12:26 pm

ಮೈಸೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ನಿವಾಸಿ ಸೈಯದ್ ನಯಾಜ್ ಬಂಧಿತ ಆರೋಪಿ. ಅಜೀಜ್ ಸೇಠ್ ನಗರ ಬಳಿ ಜು.1 ರಂದು ಸೈಯದ್ ಖಾದರ್ ಎಂಬವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೊಲೀಸರು ಗೌಸಿಯಾನಗರದ ಶಕೀಲ್ ಅಹಮ್ಮದ್ ಮತ್ತು ಗೌಸ್ ಮೊಯಿನುದ್ದೀನ್ ಎಂಬವರನ್ನು ಬಂಧಿಸಿದ್ದರು. ಶುಕ್ರವಾರ ಉದಯಗಿರಿ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದಾರೆ. ಪ್ರಕರಣದ 14 ಮಂದಿ ಆರೋಪಿಗಳ ಪೈಕಿ ಈಗ 3 ಮಂದಿ ಪೊಲೀಸರ ವಶದಲ್ಲಿದ್ದು, ಉಳಿದ 11 ಮಂದಿಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

ವಂಚಕ ಪ್ರೇಮಿಗೆ 6 ತಿಂಗಳ ಶಿಕ್ಷೆ
ಮೈಸೂರು: ಮದುವೆ ಆಗುವುದಾಗಿ ನಂಬಿಸಿ, ಬಲವಂತವಾಗಿ ಅತ್ಯಾಚಾರ ನಡೆಸಿದ ಆರೋಪಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 6 ತಿಂಗಳ ಶಿಕ್ಷೆ ವಿಧಿಸಿದೆ. ಬನ್ನೂರು ಠಾಣೆ ವ್ಯಾಪ್ತಿಯ ಹನುಮನಳ್ಳಿ ಗ್ರಾಮದ ದಯಾನಂದ ಅ. ದಯಾನಂದ ಕುಮಾರ ಶಿಕ್ಷೆಗೆ ಗುರಿಯಾದವನು. ಈತ ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ, ತಂದೆ, ತಾಯಿ ಇಲ್ಲದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಅಲ್ಲದೆ ಆಕೆ ಗರ್ಭವತಿ ಆದ ಬಳಿಕ ಗರ್ಭಪಾತ ಮಾಡಿಸಿ, ಮದುವೆಯಾಗಲು ನಿರಾಕರಿಸಿದ್ದ. ಈ ಸಂಬಂಧ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾ.ಶ್ರೀದೇವಿ ಅವರು ಆರೋಪಿಗೆ 6 ತಿಂಗಳ ಶಿಕ್ಷೆ, 15 ಸಾವಿರ ದಂಡ ವಿಧಿಸಿದ್ದಾರೆ.

ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ
ಮೈಸೂರು: ನಗರದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಜು.27 ಮತ್ತು 28 ರಂದು ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಈ ಸಂಬಂಧ ಕೇಂದ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.

ಗುರುಪೂರ್ಣಿಮೆ ಆಚರಣೆ
ಸತ್ಯಸಾಯಿ ಸಂಸ್ಥೆಯಿಂದ ಜು.28ರ ಬೆಳಗ್ಗೆ 10.30ಕ್ಕೆ ಬನ್ನಿಮಂಟಪದ ಸಾಯಿ ವೈಭವ ಕೇಂದ್ರದಲ್ಲಿ ಗುರುಪೂರ್ಣಿಮೆ ಆಚರಣೆ ಮತ್ತು ಸಾಯಿ ವೈಭವ ಕೇಂದ್ರದ ನವೀಕೃತ ಪೂಜಾ ವೇದಿಕೆಯ ಉದ್ಘಾಟನಾ ಸಮಾರಂಭ ಏರ್ಪಡಿಸಿದ್ದು, ವಾಣಿ ಸಂತೋಷ್ ಭಾಗವಹಿಸುವರು.

ರಾಜ್ಯ ರಾಣಿಗೆ  ಹೆಚ್ಚುವರಿ ಕೋಚ್
ಬೆಂಗಳೂರು: ಬೆಂಗಳೂರು ಸಿಟಿ-ಮೈಸೂರು-ಬೆಂಗಳೂರು ಸಿಟಿ ನಡುವೆ ಸಂಚರಿಸುವ ರಾಜ್ಯ ರಾಣಿ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿಯಾಗಿ 2 “¦Ê~¾Úß ದರ್ಜೆ ಚೇರ್ OÛÁé’ ಕೋಚ್‌ಗಳನ್ನು ಅಳವಡಿಸಲಾಗಿದೆ. ರಾಜ್ಯ ರಾಣಿ ರೈಲಿನಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಾಗಿ ಕೋಚ್‌ಗಳ ಹೆಚ್ಚಳಕ್ಕೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ರಾಜ್ಯ ರಾಣಿ ಎಕ್ಸ್‌ಪ್ರೆಸ್‌ನಕೋಚ್‌ಗಳ ಸಂಖ್ಯೆ 20 ಆಗಿದೆ ಎಂದು ನೈರುತ್ಯ ರೇಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement