ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದಿನಚರಿ ಪಾಲಿಸದ ವಿದ್ಯಾರ್ಥಿಗಳು: ಪ್ರಭಾಕರ್

Srinivasa Murthy VN
Updated On : 27 Jul 2013, 12:25 pm

ಕ.ಪ್ರ.ವಾರ್ತೆ ಮೈಸೂರು ಜು. 26
ವಿದ್ಯಾರ್ಥಿಗಳು ದಿನಚರಿ ಪಾಲಿಸುವುದನ್ನು ಮರೆತಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಟಿ.ಎನ್. ಪ್ರಭಾಕರ್ ಹೇಳಿದರು.
ಶುಕ್ರವಾರ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿದ ಬಿ.ಕಾಂ. ಮತ್ತು ಬಿ.ಬಿ.ಎಂ. ಕೋರ್ಸುಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವ ವಿದ್ಯಾರ್ಥಿ ದಿನಚರಿ ಪಾಲಿಸುತ್ತಾನೋ ಅವನಿಗೆ ಯಶಸ್ಸು ಶತಃಸಿದ್ಧ. ದಿನಚರಿ ಜೀವನದಲ್ಲಿ ಶಿಸ್ತನ್ನು ಕಲಿಸುತ್ತದೆ ಎಂದರು.
ಅತ್ಯಂತ ಹಳೆಯದಾದ ಶಾರದಾ ವಿಲಾಸ ಕಾಲೇಜು ಇದೀಗ ಮತ್ತೆರಡು ಗರಿಯನ್ನು ಮುಡಿಗೇರಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಪ್ರಾಮಾಣಿಕ ವಿದ್ಯಾರ್ಥಿ ಎಂದರೆ ಆತನಲ್ಲಿ ಮೂರು ಅಂಶಗಳು ಅಡಗಿರಬೇಕು. ಪರ ಸ್ತ್ರೀಯನ್ನು ಕಂಡರೆ ನಮಿಸುವ, ಇತರರ ವಸ್ತುವನ್ನು ಕಂಡರೆ ಮಣ್ಣಿನ ಎಂಟೆಯಂತೆ ಕಾಣುವ, ಪರರನ್ನು ಪ್ರೀತಿಯಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿಶ್ರಾಂತ ಕುಲಸಚಿವ ಪ್ರೊ.ವಿ.ಕೆ. ನಟರಾಜ್ ಮಾತನಾಡಿ, ಆಧುನಿಕ ಯುಗದಲ್ಲಿ ಅವಕಾಶಗಳ ಜತೆಗೆ ಸಮಸ್ಯೆಗಳೂ ಉದ್ಬವಿಸುತ್ತವೆ. ನಮ್ಮ ವ್ಯಕ್ತಿತ್ವವನ್ನು ಎಲ್ಲಾ ಕ್ಷೇತ್ರದಲ್ಲೂ ವೃದ್ಧಿಸಿಕೊಂಡರೆ ಸಮಸ್ಯೆಯನ್ನು ಸ್ವತಃ ನಿವಾರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಶಾರದಾ ವಿಲಾಸ ಸಂಸ್ಥೆಯ ವಿಶ್ರಾಂತ ಮುಖ್ಯೋಪಾಧ್ಯಾಯ ಎನ್.ಎಸ್. ಸೀತಾರಾಮು, ಸಂಸ್ಥೆ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಗೌರವ ಕಾರ್ಯದರ್ಶಿ ಎಸ್. ರವಿಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement