ಲೇಬರ್ನೆಟ್ನಿಂದ ಸಾಮಾಜಿಕ ಕಾರ್ಯಕ್ರಮ
ಚಾಮರಾಜನಗರ: ಲೇಬರ್ನೆಟ್ ಸಂಸ್ಥೆಯು ಕೆಲಸಗಾರರಿಗೆ ಅವರ ಕೆಲಸದ ಮತ್ತು ವೈಯಕ್ತಿಕ ಬದುಕಿನ ಗುಣಮಟ್ಟ ವೃದ್ಧಿಸಲು ಹಲವಾರು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಿದೆ ಎಂದು ಸಂಸ್ಥೆಯ ಜಿಲ್ಲಾ ತರಬೇತಿ ಅಧಿಕಾರಿ ಆರೋಗ್ಯರಾಜು ಹೇಳಿದರು.
ಕೊಳ್ಳೇಗಾಲದ ಶ್ರೀ ಮಹದೇಶ್ವರ, ವಿವೇಕಾನಂದ, ಗುರುಕುಲ ಐಟಿಐ ಕಾಲೇಜು ಮತ್ತು ಸ್ನೈಡಲ್ ಎಲೆಕ್ಟ್ರಿಕಲ್ ಫೌಂಡೆಶನ್ನ ಸಂಯುಕ್ತ ಆಶ್ರಯದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ 2 ತಿಂಗಳ ಎಲೆಕ್ಟ್ರಿಕಲ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೇಬರ್ನೆಟ್ ಒಂದು ಸಾಮಾಜಿಕ ಉದ್ಯಮವಾಗಿದ್ದು, ಅಸಂಘಟಿತ ವಲಯದ ಕೆಲಸಗಾರರಿಗೆ ಆರೋಗ್ಯ, ತರಬೇತಿ ಮತ್ತು ಉದ್ಯೋಗಕ್ಕೆ ಸಹಾಯದಂತಹ ಸುಸ್ಥಿರ ಅನುಕೂಲ ಪಡೆಯಲು ವೇದಿಕೆ ಹುಟ್ಟು ಹಾಕುವುದರ ಮೇಲೆ ಕೇಂದ್ರಿಕರಿಸಿದೆ ಎಂದು ತಿಳಿಸಿದರು. ತರಬೇತುದಾರ ಸಿ.ಮಹೇಶ್ ಮಾತನಾಡಿ, ಲೇಬರ್ನೆಟ್ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಕಾರ್ಯಕ್ರಮವನ್ನು ಕೊಳ್ಳೇಗಾಲದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಹದೇವ್ ಉದ್ಘಾಟಿಸಿದರು. ಮಹದೇಶ್ವರ ಐಟಿಐ ಕಾಲೇಜಿನ ಪ್ರಾಂಶುಪಾಲ ಮಹೇಶ್, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ಮಹದೇವ ಪ್ರಸಾದ್ ಇದ್ದರು.
ಸೇವಾಭಾರತಿ ವಿದ್ಯಾರ್ಥಿಗಳಿಂದ ಶ್ರಮದಾನ
ಚಾಮರಾಜನಗರ: ನಗರದ ಹೃದಯ ಭಾಗದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣವನ್ನು ಸೇವಾಭಾರತಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು.
ನಗರದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಶಾಖಾ ವತಿಯಿಂದ ಆಷಾಢ ಶುಕ್ರವಾರದಂದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ, ವರುಣನ ಕೃಪೆಗಾಗಿ ಸಹಸ್ರಾರು ಮಹಿಳೆಯರಿಂದ ಹಮ್ಮಿಕೊಂಡಿರುವ ಶ್ರೀ ಲಲಿತ ಸಹಸ್ರನಾಮ ಪೂಜೆ ಪ್ರಯುಕ್ತ ವಿದ್ಯಾರ್ಥಿಗಳು ಶ್ರಮದಾನ ಮಾಡಿ ದೇವಸ್ಥಾನದ ಸುತ್ತಮುತ್ತ ಸ್ವಚ್ಛಗೊಳಿಸಿದರು.
ಪ್ರಾಂಶುಪಾಲ ಟಿ.ಎ.ಮಂಜುನಾಥ್, ವಕೀಲ ಕೆ.ಬಾಲಸುಬ್ರಮಣ್ಯಂ, ಸಂಸ್ಥೆಯ ಹೇಮಂತ್ಕುಮಾರ್, ದೈಹಿಕ ಶಿಕ್ಷಕ ರಾಮಚಂದ್ರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.