ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮನುಷ್ಯನ ಕಾರ್ಯದ ಬಗ್ಗೆ ವಿಮರ್ಶೆಯಾಗಲಿ: ಸಾಹಿತಿ ಆಲೂರು ನಾಗಪ್ಪ

Srinivasa Murthy VN
Updated On : 29 Jul 2013, 12:21 pm

ಕ.ಪ್ರ.ವಾರ್ತೆ ಹುಣಸೂರು ಜು. 28
ಸಮಾಜದಲ್ಲಿ ಪ್ರತಿಯೊಬ್ಬರ ಹುಟ್ಟುವುದು ಆಕಸ್ಮಿಕ ಹಾಗೂ ಸಾವು ಮಾತ್ರ ಖಚಿತವಾಗಿರುತ್ತದೆ. ಈ ನಡುವೆ ಮನುಷ್ಯ ಮಾಡುವ ಒಳ್ಳೆಯ ಮತ್ತು ಕೆಟ್ಟ ವಿಚಾರದ ಬಗ್ಗೆ ವಿಮರ್ಶೆಯಾಗಬೇಕು ಎಂದು ಸಾಹಿತಿ ಆಲೂರು ನಾಗಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ಶಾಸ್ತ್ರೀ ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾಭಾರತಿ ಕೂಟದ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹುಟ್ಟಿದಾಗಿನಿಂದಲೇ ಕನಸುಗಳು ಹುಟ್ಟುತ್ತೇವೆ. ಅವುಗಳನ್ನು ನನಸು ಮಾಡಿಕೊಳ್ಳುವ ತರಾತುರಿಯಲ್ಲಿ ಕೆಟ್ಟ ಆಲೋಚನೆಗಳ ಕಡೆ ಗಮನಹರಿಸದೆ, ಒಳ್ಳೆಯ ಆಚಾರ- ವಿಚಾರ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಂತೆ ಕರೆ ನೀಡಿದರು. ಕೆ.ಆರ್. ಆಸ್ಪತ್ರೆಯ ಡಾ. ಮಣಿಕರ್ಣಿಕಾ ಮಾತನಾಡಿ, ಮನುಷ್ಯನ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು. ಶಾಸ್ತ್ರೀ ವಿದ್ಯಾ ಸಂಸ್ಥೆ ಮುಖ್ಯಸ್ಥ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಎಂ.ಎಲ್.ರವಿಶಂಕರ್, ನಿರ್ದೇಶಕ ಎಚ್.ಎಸ್. ಸಚ್ಚಿತ್, ಪ್ರಜಾವೇದಿಕೆ ರಾಜ್ಯಾಧ್ಯಕ್ಷ ಲಕ್ಷ್ಮಿ ನಾರಾಯಣ್, ಜಿಲ್ಲಾಧ್ಯಕ್ಷ ಪಾಂಡುಕುಮಾರ್, ವಿದ್ಯಾಭಾರತಿ ವಿಭಾಗ ಪ್ರಮುಖ್ ರಘವೀರ್‌ಜೀ, ಜಿಲ್ಲಾ ಪ್ರಮುಖ್ ಶ್ರೀಪತಿ, ವೆಂಕಟರಮಣಜೀ, ರಂಗನಾಥ್ ಇದ್ದರು.

ದೊಡ್ಡಮ್ಮತಾಯಿಗೆ ಪೂಜೆ
ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದೇವತೆ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಚಾಮುಂಡೇಶ್ವರಿ ಪ್ರತಿರೂಪವೆಂದೆ ಭಾವಿಸಲಾಗುವ ದೊಡ್ಡಮ್ಮ ತಾಯಿಯ ದೇವಾಲಯದಲ್ಲಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಅಂಗವಾಗಿ ವಿಶೇಷ ಹೋಮ ಹವನಗಳು, ಪೂಜಾ ಕೈಂಕರ್ಯ ನಡೆದವು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement