ಕಬ್ಬಿಣ ಸರಳು ಚುಚ್ಚಿ ಯುವತಿಗೆ ಗಾಯ
ಮೈಸೂರು: ಕಬ್ಬಿಣದ ಚೂಪಾದ ಗ್ರಿಲ್ ಯುವತಿ ಕೈಗೆ ಚುಚ್ಚಿ ಗಾಯಗೊಂಡಿರುವ ಘಟನೆ ನ್ಯಾಯಾಲಯದ ಎದುರಿನ ಪಾರ್ಕ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಬೆಂಗಳೂರು ಕೆಂಗೇರಿ ನಿವಾಸಿ ಪ್ರಿಯಾ ಎಂಬವರು ಕಾರ್ಯ ನಿಮಿತ್ತ ಮೈಸೂರಿಗೆ ಬಂದಿದ್ದರು. ನ್ಯಾಯಾಲಯದ ಎದುರಿನ ಪಾರ್ಕ್ಗೆ ಅಳವಡಿಸಲಾಗಿರುವ ಕಬ್ಬಿಣದ ಸರಳನ್ನು ತಾಗಿ ನಿಂತಿದ್ದಾಗ ಕಾಲು ಜಾರಿದೆ. ಈ ವೇಳೆ ಪ್ರಿಯಾ ಬಲಗೈ ಚೂಪಾದ ಕಬ್ಬಿಣಕ್ಕೆ ಚುಚ್ಚಿಕೊಂಡಿದೆ. ಸ್ಥಳದಲ್ಲಿದ್ದವರು ತಕ್ಷಣ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದು, ಆ್ಯಂಬುಲೆನ್ಸ್ ಸಿಬ್ಬಂದಿ ಕಬ್ಬಿಣದ ಸರಳನ್ನು ಮುರಿದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಪೂಜಾ ಭರತನಾಟ್ಯ ಪ್ರದರ್ಶನ
ಮೈಸೂರು: ನಗರದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನ ಲಲಿತ ಕಲಾ ಸಂಘವು ಸಿ.ಎಸ್. ಪೂಜಾ ಅವರ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿತ್ತು. ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿಯಾದ ಸಿ.ಎಸ್.ಪೂಜಾ ಅವರು ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪೂಜಾ ನೃತ್ಯ ಪ್ರದರ್ಶನವನ್ನು ಶ್ರೀರಂಜನಿರಾಗ, ಆದಿತಾಳದಲ್ಲಿ ಸಂಯೋಜನೆ ಹೊಂದಿರುವ ಗಜವದನ ಕರುಣಾಸದನ ಎಂಬ ಪಾಪನಾಶಂಶಿವಂ ಅವರ ರಚನೆಯ ಕೀರ್ತನೆಯೊಂದಿಗೆ ಪ್ರಾರಂಭಿಸಿದರು. ಉತ್ತಮ ಅಡವು, ಅಭಿನಯಗಳೊಂದಿಗೆ ವಿನಾಯಕನ ವರ್ಣನೆ, ಕರುಣೆ, ದಯೆ ಮುಂತಾದ ಗುಣಗಳು ಹಾಗೂ ವರಸಿದ್ಧಿಪ್ರದಾಯಕ ಗಣೇಶನ ಸ್ವರೂಪವನ್ನು ಪ್ರಸ್ತುತಪಡಿಸಿ ಮನಸೂರೆಗೊಂಡರು.
ಇಂದು ಫ್ರೆಂಚ್ ಚಿತ್ರ ಪ್ರದರ್ಶನ
ಮೈಸೂರು: ಮಾನಸ ಗಂಗೋತ್ರಿಯ ಸಿಪಿಡಿಪಿಎಸ್ನಲ್ಲಿ ನಡೆಯುತ್ತಿರುವ ರಸಗ್ರಹಣ ಶಿಬಿರ ಅಂಗವಾಗಿ ಜು.30 ರಂದು ಸಂಜೆ 5.30ಕ್ಕೆ ಅಲೆರೆನ್ನ ನಿರ್ದೇಶನದ ಹಿರೋಶಿಮಾ- ಮಾ- ಅಮೂರ್ ಚಿತ್ರದ ಪ್ರದರ್ಶನ ಇರುತ್ತದೆ. ಆಸಕ್ತರು ವೀಕ್ಷಿಸಬಹುದು ಎಂದು ಕೇಂದ್ರದ ನಿರ್ದೇಶಕ ಪ್ರೊ.ನಿರಂಜನ ವಾನಳ್ಳಿ ತಿಳಿಸಿದ್ದಾರೆ.
ಇಂದು ಜನಸ್ಪಂದನಾ ಸಭೆ
ಮೈಸೂರು: ಚಾಮುಂಡೇಶ್ವರಿ ವಿದ್ಯುಚ್ಚಕ್ತಿ ಸರಬರಾಜು ನಿಗಮವು ಜು.30ರ ಬೆಳಗ್ಗೆ 10.30ಕ್ಕೆ ಕುವೆಂಪುನಗರ ಉಪವಿಭಾಗ ವ್ಯಾಪ್ತಿಯ ಜನಸ್ಪಂದನಾ ಸಭೆಯನ್ನು ಕುವೆಂಪುನಗರ ಉಪ ವಿಭಾಗ ಕಚೇರಿಯಲ್ಲಿ ಏರ್ಪಡಿಸಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಪ್ರತಿಭಾ ಪುರಸ್ಕಾರ: ನಾಳೆ ಕೊನೆ ದಿನ
ಮೈಸೂರು: ಅಖಿಲ ನಾಮಧಾರಿಗೌಡರ ಸಂಘವು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ, ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿಯಲ್ಲಿ ಚಿನ್ನದ ಪದಕ ಪಡೆದ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದು, ಅರ್ಹ ನಗರವಾಸಿಗಳು ಜು.31 ರೊಳಗೆ ಅರ್ಜಿ ಸಲ್ಲಿಸಬೇಕು. ವಿವರಗಳಿಗೆ ಮೊ.99800 81550 ಸಂಪರ್ಕಿಸಬಹುದು.
ಹೊಸ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮ
ಮೈಸೂರು: ಜೆಎಸ್ಎಸ್ ವೈದ್ಯಕೀಯ ಕಾಲೇಜು ಎಂಬಿಬಿಎಸ್ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸೇರ್ಪಡೆ ಕಾರ್ಯಕ್ರಮವನ್ನು ಆ.1ರ ಬೆಳಗ್ಗೆ 10.30ಕ್ಕೆ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದೆ. ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಸತ್ಯೇಶಾನಂದಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಡಾ.ಎಚ್. ಬಸವನಗೌಡಪ್ಪ, ಡಾ. ಬಿ. ಮಂಜುನಾಥ್, ಡಾ.ಬಿ.ಎಂ. ಬಾಲರಾಜ್ ಆಗಮಿಸುವರು.