ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುರುಹಿನಶೆಟ್ಟಿ ಸಮಾಜದಬಡ ವಿದ್ಯಾರ್ಥಿಗಳಿಗೆ ನೆರವು

Srinivasa Murthy VN
Updated On : 25 Jun 2013, 11:55 am

ಮೈಸೂರು: ಸಾಚವಿ  ಚಾರಿಟಬಲ್ ಟ್ರಸ್ಟ್ ವತಿಯಿಂದ ಕುರುಹಿನಶೆಟ್ಟಿ ಸಮಾಜದ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಅನುಕೂಲವಾಗುವಂತೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯಾದ್ಯಂತ ಪಿಯುಸಿ ಹಾಗೂ ಮೇಲ್ಪಟ್ಟು ವ್ಯಾಸಂಗ ಮಾಡುತ್ತಿರುವ ಕುರುಹೀನಶೆಟ್ಟಿ ಸಮಾಜದ ವಿದ್ಯಾರ್ಥಿಗಳು ತಮ್ಮ ಹೆಸರು, ತಂದೆ, ಹೆಸರು, ವಿಳಾಸ, ಜನ್ಮ ದಿನಾಂಕ, ವಾರ್ಷಿಕ ಆದಾಯ, ಕೋರ್ಸಿನ ಹೆಸರು, ದೂರವಾಣಿ ಹಾಗೂ ಇ- ಮೇಲ್ ವಿವರಗಳನ್ನೊಳಗೊಂಡ ಅರ್ಜಿಯನ್ನು ಸಾಚವಿ ಚಾರಿಟಬಲ್ ಟ್ರಸ್ಟ್, ಮಂತ್ರಿ ಪ್ರೈಡ್ ಅಪಾರ್ಟ್‌ಮೆಂಟ್, ನಂ.701, ಮಾಧವನ್ ಪಾರ್ಕ್, ಜಯನಗರ, 1ನೇ ಬ್ಲಾಕ್, ಬೆಂಗಳೂರು- 560 011. ಈ ವಿಳಾಸಕ್ಕೆ ಜು.25 ರೊಳಗೆ ಸಲ್ಲಿಸುವಂತೆ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರ್ ತಿಳಿಸಿದ್ದಾರೆ. ದೂ. 080- 41213073, ಮೊ. 98454 78457 ಸಂಪರ್ಕಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಿಚ್ಛಿಸುವವರು www.sachavimatrimonials.com link www, www.sachvicharitabletrust.com ಸಂಪರ್ಕಿಸಿ.

ಬಿಸಿಎಂ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ
ಎಚ್.ಡಿ. ಕೋಟೆ: ಇಲ್ಲಿನ ಬಿಸಿಎಂ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ 2013-14ನೇ ಸಾಲಿನ ಪ್ರವೇಶಕ್ಕಾಗಿ ಹಿಂದುಳಿದ ವರ್ಗ-1, 2ಎ, 2ಬಿ, 3ಎ, 3ಬಿ, ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಪಡೆಯಲು ಪಿಯುಸಿ, ಡಿಪ್ಲೋಮಾ, ಐಟಿಐ, ಪದವಿ ಮುಂತಾದ ಮೆಟ್ರಿಕ್ ನಂತರದ ಕೋರ್ಸ್‌ಗಳ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಅರ್ಜಿಯನ್ನು ಈ ವಿದ್ಯಾರ್ಥಿ ನಿಲಯದಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಈ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಿಗೆ ಜು.5ರೊಳಗೆ ಸಲ್ಲಿಸಬೇಕು. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಉಚಿತ ಊಟೋಪಹಾರ, ವಸತಿ ಮತ್ತು ಗ್ರಂಥಾಲಯ ಪುಸ್ತಕ ಮುಂತಾದ ಸೌಲಭ್ಯ ಒದಗಿಸಲಾಗುವುದು. ಮಾಹಿತಿಗಾಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಎಚ್.ಡಿ. ಕೋಟೆ ಕಚೇರಿ ಸಂಪರ್ಕಿಸಲು ಕೋರಲಾಗಿದೆ.
ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ: ಟಿ. ನರಸೀಪುರ ತಾಲೂಕಿನಲ್ಲಿರುವ ಬಿಸಿಎಂ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ  2013-14ನೇ ಸಾಲಿನ ಪ್ರವೇಶಕ್ಕಾಗಿ ಹಿಂದುಳಿದ ವರ್ಗ-1, 2ಎ, 2ಬಿ, 3ಎ, 3ಬಿ, ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಪಡೆಯಲು ಪಿಯುಸಿ, ಪದವಿ ಮುಂತಾದ ಮೆಟ್ರಿಕ್ ನಂತರದ ಕೋರ್ಸ್‌ಗಳ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಈ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಿಗೆ ಜು.20ರ ಸಂಜೆ 4ರೊಳಗೆ ಭರ್ತಿ ಮಾಡಿದ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ ಸಂಪರ್ಕಿಸಲು ಕೋರಿದೆ.

ನಾಳೆ ವಿದ್ಯುತ್ ನಿಲುಗಡೆ
ಮೈಸೂರು: 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11 ಕೆ.ವಿ ವಿದ್ಯುತ್ ಮಾರ್ಗದಲ್ಲಿ ತುರ್ತು ಕೆಲಸ ನಿಮಿತ್ತ ಈ ಕೆಳಕಂಡ ಪ್ರದೇಶಗಳಿಗೆ ಜೂ.27ರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ. ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು- ಯಾದವಗಿರಿ, ವಿಜಯನಗರ, ಒಂಟಿಕೊಪ್ಪಲು, ವಿ.ವಿ ಮೊಹಲ್ಲ, ಕಾಳಿದಾಸ ರಸ್ತೆ, ವಾಟರ್ ವರ್ಕ್ಸ್, ಜಯಲಕ್ಷ್ಮೀಪುರಂ, ಗೋಕುಲಂ ಮತ್ತು ಪಡುವಾರಹಳ್ಳಿ.

ನಾಳೆ ಕ್ಯಾನ್ಸರ್ ಉಚಿತ ತಪಾಸಣೆ
ವಾಣಿವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್‌ನಲ್ಲಿ ಜೂ.27 ರಂದು ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದ್ದು, ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದು. ದೂ.4259259 ಸಂಪರ್ಕಸಬಹುದು.

ಸ್ಯಾಂಡಲ್ ಉರುಸ್ ಷರೀಫ್
ಕೃಷ್ಣವಿಲಾಸ ರಸ್ತೆಯಲ್ಲಿರುವ ಹಜರತ್ ಇಮಾಮ್ ಷಾ ವಲಿ ಆರ್‌ಎ ವತಿಯಿಂದ ಜೂ.29ರ ರಾತ್ರಿ 8.30ಕ್ಕೆ ಇಮಾಮ್ ಷಾ ವಲಿ ಅವರ ಸ್ಯಾಂಡಲ್ ಉರುಸ್ ಷರೀಫ್ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಂಸ್ಥಾಪನಾ ದಿನಾಚರಣೆ
ಕಾಮಾಕ್ಷಿ ಆಸ್ಪತ್ರೆಯ ಸಂಸ್ಥಾಪನಾ ದಿನಾಚರಣೆಯು ಜೂ.29ರ ಸಂಜೆ 5ಕ್ಕೆ ಆಸ್ಪತ್ರೆ ಆವರಣದಲ್ಲಿ ನಡೆಯಲಿದ್ದು, ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್, ಡಿಸಿಪಿ ಬಸವರಾಜ ವೈ. ಮಾಲಗತ್ತಿ, ಟ್ರಸ್ಟಿ ಎಂ. ವಿನೋದ್‌ರಾವ್ ಭಾಗವಹಿಸುವರು.

ಆಯುರ್ವೇದ ತಪಾಸಣೆ
ಪದ್ಮಶ್ರೀ ಜೈನ ಮಹಿಳಾ ಸಮಾಜದಿಂದ ಜೂ.30ರ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಚಂದ್ರಗುಪ್ತ ರಸ್ತೆಯಲ್ಲಿರುವ ಎಂ.ಎಲ್. ಜೈನ್ ಬೋರ್ಡಿಂಗ್ ಹೋಂನಲ್ಲಿ ಆಯುರ್ವೇದ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement