ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಊಟದ ವಿಚಾರ: ಸಚಿವರ ಎದುರೇ ಕಾಂಗ್ರೆಸ್ ಕಾರ್ಯಕರ್ತರ ಕಚ್ಚಾಟ

Srinivasa Murthy VN
Updated On : 26 Jun 2013, 11:00 am

ಕ.ಪ್ರ.ವಾರ್ತೆ ಟಿ. ನರಸೀಪುರ ಜೂ. 26
ಊಟದ ವಿಚಾರಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿ, ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಎದುರೆ ಕಿತ್ತಾಡಿಕೊಂಡ ಘಟನೆ ತಾಲೂಕಿನ ಮೂಗೂರಿನಲ್ಲಿ ಬುಧವಾರ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಜರುಗಿತು.
ಮೂಗೂರು ಗ್ರಾಮದ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಬೂದಿ ಮುಚ್ಚಿದ ಕೆಂಡಂತಿರುವುದು ಸಚಿವರ ಎದುರು ಸ್ಫೋಟಗೊಂಡಿತು. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿರುಕು ಇರುವುದು ಮಹದೇವಪ್ಪ ಅವರಿಗೆ ದರ್ಶನವಾಯಿತು. ಗ್ರಾಮದಲ್ಲಿ ಸರ್ಕಾರಿ ಸಮಾರಂಭ ಮುಗಿದ ಬಳಿಕ ಕಾಂಗ್ರೆಸ್ ಕೃತಜ್ಞತಾ ಸಭೆ ಆಯೋಜಿಸಿತ್ತು. ಅದಾಲತ್ ಕಾರ್ಯಕ್ರಮದಲ್ಲಿದ್ದ ಜನರು ಮಾಜಿ ಪ್ರಧಾನರೊಬ್ಬರ ಮನೆಯಲ್ಲಿ ಊಟ ಮಾಡಿಕೊಂಡು ಬಂದು ಮಂಜೂರಾತಿ ಪತ್ರ ಸ್ವೀಕರಿಸಬೇಕು ಎಂದು ಕಂದಾಯಾಧಿಕಾರಿ ಆರಾಧ್ಯ ಪ್ರಕಟಿಸಿದರು. ಜಿಪಂ ಮಾಜಿ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಚಿವರ ಕೈಗೆ ಏಟು: ಇದಕ್ಕೆ ಮಾಜಿ ಪ್ರಧಾನರೊಬ್ಬರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿ, ಜಿಪಂ ಮಾಜಿ ಸದಸ್ಯರೊಂದಿಗೆ ತಗಾದೆ ತೆಗೆದರು. ಇದರಿಂದ ಆಕ್ರೋಶಗೊಂಡ ಇವರ ಸಹೋದರ ಕಾಳಗಕ್ಕಿಳಿದರು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಿದರು. ಪೊಲೀಸರು ಬೀಸಿದ ಲಾಟಿ ಏಟಿನಿಂದ ಸಚಿವರ ಕೈಗೆ ಪೆಟ್ಟು ಬಿದ್ದಿತು. ಇಬ್ಬರು ಮುಖಂಡರ ಬೆಂಬಲಿಗರು ಕೆರಳಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement