ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಲ್ವರಿಗೆ ಡಾಕ್ಟರೇಟ್

Srinivasa Murthy VN
Updated On : 28 Jun 2013, 11:29 am

ಮೈಸೂರು: ಪ್ರೊ. ಅಂಬಲಿಕೆ ಹಿರಿಯಣ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎ. ಅಂಥೋಣಿ ಸ್ವಾಮಿ ಅವರು ಮಂಡಿಸಿದ ಮಹಾಪ್ರಬಂಧವನ್ನು ಜಾನಪದ ಅಧ್ಯಯನ ವಿಷಯದಲ್ಲಿ, ಡಾ.ಎಚ್.ಎಸ್. ಯತಿರಾಜನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಬಿ.ಪಿ. ಸಿದ್ದರಾಜು ಅವರು ಮಂಡಿಸಿದ ಮಹಾಪ್ರಬಂಧವನ್ನು ರಸಾಯನಶಾಸ್ತ್ರ ವಿಷಯದಲ್ಲಿ, ಡಾ.ಎ.ಆರ್. ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎನ್. ನಾಗರಾಜು ಅವರು ಮಂಡಿಸಿದ ಮಹಾಪ್ರಬಂಧವನ್ನು ಸಹಕಾರ ವಿಷಯದಲ್ಲಿ ಹಾಗೂ ಡಾ.ಎಸ್. ಶ್ರೀಕಂಠಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಡಿ. ಶಿವಕುಮಾರ್ ಅವರು ಮಂಡಿಸಿದ ಮಹಾಪ್ರಬಂಧವನ್ನು ಪರಸರ ವಿಜ್ಞಾನ ವಿಷಯದಲ್ಲಿ ಮೈಸೂರು ವಿವಿ ಅಂಗೀಕರಿಸಿ ಪಿಎಚ್.ಡಿ ಪದವಿ ನೀಡಿದೆ.

ಎನ್‌ಸಿಸಿ ವಾರ್ಷಿಕ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು:
ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ 2013- 14ನೇ ಸಾಲಿನ ಎನ್‌ಸಿಸಿ ವಾರ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಮೈಸೂರು ವಿಭಾಗದ ಬಾಲಕಿಯರ ಘಟಕದ ತರಬೇತುಗಾರ್ತಿ ಸಿ.ಜಿ. ಬಬಿತ ಅವರು ಕೆಡೆಟ್‌ಗಳಿಗೆ ಸಮಯ ಪಾಲನೆ, ನಾಯಕತ್ವ, ರಾಷ್ಟ್ರಪ್ರೇಮ ಮೈಗೂಡಿಸಿಕೊಂಡು ದೇಶಸೇವೆಗೆ ಸದಾ ಸಿದ್ಧರಿರಬೇಕು. ವೃತ್ತಿಪರ ಕಾಲೇಜುಗಳಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು, ಅವುಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು. ಮುಖ್ಯೋಪಾಧ್ಯಾಯ ಕೆ.ಎಸ್. ಗೌರಿಶಂಕರಸ್ವಾಮಿ, ಎನ್‌ಸಿಸಿ ಅಧಿಕಾರಿ ಅಪ್ಪಾಸಾಬ್ ಇದ್ದರು.

ನಾಳೆ ಚಿತ್ರಕಲಾ ಪ್ರದರ್ಶನ
ಮೈಸೂರು:
ರವಿವರ್ಮ ಚಿತ್ರಕಲಾ ಶಾಲೆಯು ಜೂ. 30ರ ಬೆಳಗ್ಗೆ 11ಕ್ಕೆ ಕಲಾಮಂದಿರದ ಸುಚಿತ್ರ ಆರ್ಟ್ಸ್ ಗ್ಯಾಲರಿಯಲ್ಲಿ ಸೃಜನಶೀಲ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದೆ. ಪಾಲಿಕೆ ಸದಸ್ಯೆ ಮಂಜುಳಾ ಮಾನಸ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಚಿತ್ರಕಲಾ ಪ್ರದರ್ಶನವು ಜೂ. 30 ರಿಂದ ಜುಲೈ 2ರವರೆಗೆ ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ನಡೆಯಲಿದೆ.

ಉಪಹಾರ ವಿತರಣೆ
ಮೈಸೂರು:
ಪೀಪಲ್ ಫಾರ್ ಪೀಪಲ್ ಸಂಸ್ಥೆಯು ಜೂ. 30ರ ಬೆಳಗ್ಗೆ 9ಕ್ಕೆ ಕೆಆರ್‌ಎಸ್ ರಸ್ತೆಯ ಇಎಸ್‌ಐ ಆಸ್ಪತ್ರೆಯ ರೋಗಿಗಳಿಗೆ ಉಪಹಾರ ಮತ್ತು ಹಣ್ಣು ವಿತರಣೆ ಕಾರ್ಯಕ್ರಮ ಏರ್ಪಡಿಸಿದೆ. ಇದು ಸಂಸ್ಥೆಯ 801ನೇ ಸೇವಾ ಚಟುವಟಿಕೆಯಾಗಿದ್ದು, ಸೇವಾ ಮನೋಭಾವಿಗಳು ಭಾಗವಹಿಸಬೇಕು ಎಂದು ಸಂಸ್ಥೆಯ ಎನ್. ವಿಠ್‌ಠಲ್ ಮನವಿ ಮಾಡಿದ್ದಾರೆ.

ಉಪನ್ಯಾಸ
ಮೈಸೂರು:
ನೀಲಗಂಗಾ ಮಹಿಳಾ ಬಳಗವು ಜು. 7ರ ಸಂಜೆ 4.30ಕ್ಕೆ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ನಿವೃತ್ತ  ಶಿಕ್ಷಕ ವೈ.ಎಸ್. ಸುಬ್ರಹ್ಮಣ್ಯ ಅವರು ವಿದೇಶದಲ್ಲಿ ಪ್ರವಾಸದ ಅನುಭವಗಳು ಕುರಿತು ಮಾತನಾಡುವರು.

ರಸ್ತೆಗೆ ಹಂದಿ ಬಿಡದಂತೆ ಸೂಚನೆ
ಮೈಸೂರು:
ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಹಾಗೂ ತಿರುವುಗಳಲ್ಲಿ, ಎಲ್ಲೆಂದರಲ್ಲಿ ಹಂದಿಗಳು ಅಡ್ಡಾದಿಡ್ಡಿ ಓಡಾಡುವುದರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಹಂದಿ ಸಾಕಾಣಿಕೆದಾರರು ಹಂದಿಗಳನ್ನು ರಸ್ತೆಗೆ ಬಿಡಬಾರದು ಎಂದು ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಸೂಚಿಸಿದ್ದಾರೆ. ಹಂದಿಗಳು ಕಸದ ತೊಟ್ಟಿಯಲ್ಲಿನ ಆಹಾರ ಸೇವಿಸುವುದಕ್ಕಾಗಿ ತೊಟ್ಟಿಯ ಕಸವನ್ನು ರಸ್ತೆಗಳಲ್ಲಿ ಚೆಲ್ಲಾಡಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಸ್ವಚ್ಛತೆಯ ನಿರ್ವಹಣೆಗಾಗಿ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ರಿಯಾಯಿತಿ
ಮೈಸೂರು:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸರ್ಕಾರಿ ನೌಕರರು, ಖಾಸಗಿ ಕಂಪನಿಗಳ ನೌಕರರು ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳು ನಿಗಮದ ಬಸ್ಸುಗಳಲ್ಲಿ ಪ್ರವಾಸ ಕೈಗೊಂಡಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಿದ್ದು, ಸಂಬಂಧಪಟ್ಟವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೆಎಸ್‌ಟಿಡಿಸಿ ಹೋಟೆಲ್ ಮತ್ತು ಸಾರಿಗೆ ವಿಭಾಗದ ಹಿರಿಯ ವ್ಯವಸ್ಥಾಪಕ ಎಂ.ಪಿ. ಬೆಳ್ಳಿಯಪ್ಪ ತಿಳಿಸಿದ್ದಾರೆ. ದೂ. 0821- 2423652, 2423492, ಮೊ. 89705650017 ಸಂಪರ್ಕಿಸಬಹುದು.

ಡಾ. ಬಸವರಾಜು ನೇಮಕಕ್ಕೆ ಸ್ವಾಗತ
ಮೈಸೂರು:
ಮೈಸೂರು ವಿವಿ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಸಂಘದ ಕಾನೂನು ಸಲಹೆಗಾರ ಡಾ.ಸಿ. ಬಸವರಾಜು ಹಾಗೂ ಇವರ ನೇಮಕಕ್ಕೆ ಕಾರಣಕರ್ತರಾದ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಅವರನ್ನು ಅಂಬೇಡ್ಕರ್ ಪದವೀಧರರ ಸಂಘದ ಅಧ್ಯಕ್ಷ ಎನ್. ಸಿದ್ದರಾಜು ಅಭಿನಂದಿಸಿದ್ದಾರೆ. ಕಾನೂನು ವಿಭಾಗದ ಪ್ರಾಧ್ಯಾಪಕ, ಡೀನ್ ಆಗಿ ಕಾರ್ಯನಿರ್ವಹಿಸಿರುವ ದಲಿತರಾದ ಡಾ. ಬಸವರಾಜು ಅವರನ್ನು ನೇಮಿಸುವ ಮೂಲಕ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಿದೆ ಎಂದು ಹೇಳಿದ್ದಾರೆ.

ಉಪನ್ಯಾಸ
ಮೈಸೂರು:
ಹಿರಿಯ ನಾಗರಿಕರ ಮಂಡಳಿ ವತಿಯಿಂದ ಜು. 1ರ ಸಂಜೆ 5.30ಕ್ಕೆ ಮಂಡಳಿಯಲ್ಲಿ ಡಾ.ಟಿ.ಎಸ್. ಸತ್ಯನಾರಾಯಣರಾವ್ ಅವರು ವಯಸ್ಕರಲ್ಲಿ ಲೈಂಗಿಕ ಜೀವನ ಕುರಿತು ಮಾತನಾಡುವರು. ಡಾ.ಎಚ್.ಎಂ. ನಾಗರಾಜು ಅಧ್ಯಕ್ಷತೆ ವಹಿಸುವರು.

ಜು. 1 ರಂದು ವಿದ್ಯುತ್ ವ್ಯತ್ಯಯ
ಟಿ. ನರಸೀಪುರ:
ಟಿ. ನರಸೀಪುರ ವ್ಯಾಪ್ತಿಗೆ ಬರುವ ಮೂಗೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಜು. 1ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ತ್ರಿಪುರ ಸುಂದರಿ, ಹ್ಯಾಕನೂರು ಹಾಗೂ ಕುರುಬೂರು ಕೆ.ವಿ. ಫೀಡರ್ ಈ ವ್ಯಾಪ್ತಿಗೆ ಒಳಪಡುವ ಮೂಗೂರು, ಕುರುಬೂರು, ಹ್ಯಾಕನೂರು, ಮಾಡ್ರಳ್ಳಿ  ಹಾಗೂ ಕೊತ್ತೆಗಾಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ನಂಜನಗೂಡು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಎನ್‌ಎನ್‌ಎಂಎಸ್‌ಪರೀಕ್ಷೆ ತೇರ್ಗಡೆ
ಕೆ.ಆರ್. ನಗರ:
ಕಳೆದ ನವೆಂಬರ್‌ನಲ್ಲಿ ನಡೆದ ಎನ್‌ಎನ್‌ಎಂಎಸ್ ಪ್ರತಿಭಾ ಪರೀಕ್ಷೆಯಲ್ಲಿ ಇಲ್ಲಿನ ಆದರ್ಶ ವಿದ್ಯಾಲಯದ 9ನೇ ತರಗತಿಯ 6 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಸಿ.ಜೆ. ವರ್ಷಿತ, ಕೆ. ಪ್ರಗತಿ, ಡಿ. ಸಂಜನಾ, ಡಿ. ಕೃತಿ, ಎಚ್.ಎಸ್. ಗಗನ್‌ಗೌಡ, ಪಿ. ಗಗನ್ ಪ್ರತಿಭಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದರಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಥಿವೇತನ ಪಡೆಯುವ ಅರ್ಹತೆ ಪಡೆದಿದ್ದಾರೆ ಎಂದು ಪ್ರಾಂಶುಪಾಲ ನಾರಾಯಣಪ್ರಸಾದ್ ತಿಳಿಸಿದ್ದಾರೆ.

ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ಆಯ್ಕೆ
ಕೆ.ಆರ್. ನಗರ:
ತಾಲೂಕಿನ  ಚುಂಚನಕಟ್ಟೆ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸಿ.ಎಸ್. ಲೋಕೇಶ್ ಆಯ್ಕೆಯಾಗಿದ್ದಾರೆ. ಮುಖ್ಯ ಶಿಕ್ಷಕ ಜಿ.ಟಿ. ರಾಮೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೋಕೇಶ್ ಅವರನ್ನು ಸದಸ್ಯರು ಆಯ್ಕೆ ಮಾಡಿದರು.  ಸದಸ್ಯರಾಗಿ ಗಣೇಶ್, ಶೋಭಾ, ನಾಗರಾಜು ಅವರನ್ನು ಆಯ್ಕೆ ಮಾಡಲಾಯಿತು. ಪೋಷಕ ಸದಸ್ಯರಾದ ಕಲಾವತಿ, ಭಾಗ್ಯಮ್ಮ, ಸೋಮಚಾರ್, ಹೇಮಂತಕುಮಾರ್ ಇದ್ದರು.

ಇಂದು ಸಾಕ್ಷರತಾ ಕೇಂದ್ರ ಉದ್ಘಾಟನೆ
ಕೆ.ಆರ್. ನಗರ:
ಇಲ್ಲಿನ ತಾಪಂ ಸಭಾಂಗಣದಲ್ಲಿ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರವನ್ನು ಜೂ. 29ರ ಬೆಳಗ್ಗೆ 10ಕ್ಕೆ ಶಾಸಕ ಸಾ.ರಾ. ಮಹೇಶ್ ಉದ್ಘಾಟಿಸುವರು. ಎನ್.ಟಿ. ಹೆಗ್ಡೆ ಅಧ್ಯಕ್ಷತೆ ವಹಿಸುವರು. ವಿಜಯ ಬ್ಯಾಂಕಿನ ಮಹಾಪ್ರಬಂಧಕ ಕೆ. ಸುರೇಂದ್ರ ಹೆಗಡೆ, ಸಿಂಡಿಕೇಟ್ ಬ್ಯಾಂಕಿನ ಉಪ ಮಹಾಪ್ರಬಂಧಕ ಮಾಧುರ್ ಭೂತೇಶ್ವರನ್, ತಾಪಂ ಅಧ್ಯಕ್ಷೆ ಕವಿತಾ ರವಿ, ಉಪಾಧ್ಯಕ್ಷೆ ಶಕುಂತಲ ರಮೇಶ್ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement