ಭಾರಿ ಮಳೆ: ಮನೆ ಕುಸಿತ
ಬೈಲುಕುಪ್ಪೆ: ಭಾರಿ ಮಳೆಯಿಂದ ಮನೆಗಳು ಕುಸಿದಿರುವ ಘಟನೆ ತಾಲೂಕಿನ ಹಾರನಹಳ್ಳಿ ಹೋಬಳಿ, ಹೊನ್ನಾಪುರ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.
ಹೊನ್ನಾಪುರ ಗ್ರಾಮದ ರೈತ ರಮೇಶ ಎಂಬವರಿಗೆ ಸೇರಿದ ಮನೆ ಮತ್ತು ಬೇರನ್ನ ಒಂದು ಭಾಗ ಸಂಪೂರ್ಣ ಕುಸಿದಿದ್ದು, ಇದರಿಂದ ಮನೆಯ ಮಾಲೀಕರಾದ ರಮೇಶ ಮತ್ತು ಅವರ ಪತ್ನಿ ರೂಪಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಸಂಸ ಜಿಲ್ಲಾ ಸಂಚಾಲಕ ಜಗದೀಶ್ ಮಾತನಾಡಿ, ಗುರುವಾರ ಬಿದ್ದ ಭಾರಿ ಮಳೆಗೆ ರಮೇಶ್ ಅವರಿಗೆ ಸೇರಿದ ವಾಸದ ಮನೆ ಕುಸಿದಿದ್ದು, ತಹಸೀಲ್ದಾರ್ ಅವರಿಗೆ ವಿಷಯ ತಿಳಿದರೂ ಗ್ರಾಮಕ್ಕೆ ಭೇಟಿ ನೀಡದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ.
ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ನೀಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ದಸಂಸ ಸದಸ್ಯತ್ವ ಅಭಿಯಾನ
ಹುಣಸೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಘಟಕವು ಮೂರನೇ ಹಂತದ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ. ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ಗ್ರಾಮ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಸದಸ್ಯರ ನೋಂದಣಿ ಅಭಿಯಾನ ಏರ್ಪಡಿಸಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಶಿವರಾಜ್ ತಿಳಿಸಿದ್ದಾರೆ. ದಲಿತ ಹಾಗೂ ಹಿಂದುಳಿದ ಸಮುದಾಯದ ಆಸಕ್ತ ಯುವಕರು ಮೊ. 9901651145 ಸಂಪರ್ಕಿಸಿ.