ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮತದಾರರಿಂದ ಸಿದ್ದರಾಮಯ್ಯಗೆ ನೈತಿಕ ಬೆಂಬಲ: ವಿಶ್ವನಾಥ್

Srinivasa Murthy VN
Updated On : 28 Jun 2013, 11:26 am

ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 28
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ. ವೆಂಕಟೇಶ್ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತಾಲೂಕಿನ ಮತದಾರರು ನೈತಿಕ ಬೆಂಬಲ ನೀಡಿದಂತಾಗಿದೆ ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಮತದಾರರು ಹಾಗೂ ಕಾರ್ಯಕರ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯದ ಜನರಲ್ಲಿ ಹಲವು ನಿರೀಕ್ಷೆಗಳಿದ್ದು, ಇದಕ್ಕೆ ತಕ್ಕಂತೆ ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸುತ್ತಿದೆ.
ಮಾಜಿ ಶಾಸಕ ಎಚ್.ಸಿ. ಬಸವರಾಜು ಹಾಗೂ ವಿ.ಜಿ. ಅಪ್ಪಾಜಿಗೌಡ ಅವರಂತಹ ನಾಯಕರು ಚುನಾವಣಾ ಪೂರ್ವದಲ್ಲಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ಅನುಕೂಲ ತಂದುಕೊಟ್ಟಿತು ಎಂದು ತಿಳಿಸಿದರು. ಶಾಸಕ ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿಯ ಚುನಾವಣೆ ಬಹಳ ಮಹತ್ವಪೂರ್ಣವಾಗಿದ್ದು, ಇದು ತಮ್ಮ 7ನೇ ಚುನಾವಣೆಯಾಗಿದ್ದು, ಹಿಂದಿನ ಚುನಾವಣೆಗಳಿಗಿಂತ ಈ ಚುನಾವಣೆ ತಮಗೆ ಹೆಚ್ಚು ಅನುಭವ ನೀಡಿತು.
ತಮ್ಮ ವಿರುದ್ಧ ಅಪಪ್ರಚಾರ ಮಾಡಿದವರಿಗೆ ಹಾಗೂ ತಾವು ತಾಲೂಕಿಗೆ ಏನೂ ಮಾಡಿಲ್ಲ ಎಂದು ಹೇಳುತ್ತಿದ್ದವರಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದರು.
ಜಿಪಂ ಸದಸ್ಯೆ ಮಂಜುಳಾರಾಜ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಸೇನ, ತಾಪಂ ಮಾಜಿ ಸದಸ್ಯ ರಾಮು, ಪಪಂ ಮಾಜಿ ಅಧ್ಯಕ್ಷ ವಿಷಕಂಠಯ್ಯ, ಜಿಪಂ ಮಾಜಿ ಉಪಾಧ್ಯಕ್ಷ ವಿ.ಜಿ. ಅಪ್ಪಾಜಿಗೌಡ ಮಾತನಾಡಿದರು.
ಯುವ ಕಾಂಗ್ರೆಸ್ ಘಟಕ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಜಿಪಂ ಸದಸ್ಯೆ ಕಾವೇರಿಶೇಖರ್,  ಜಿಪಂ ಮಾಜಿ ಸದಸ್ಯರಾದ ಜವರಪ್ಪ, ಕೆ.ಸಿ. ಕೃಷ್ಣಪ್ಪ, ಎಸ್.ಟಿ. ರಾಜಶೇಖರ್, ರಾಜಶೇಖರಯ್ಯ, ಜಯಲಕ್ಷ್ಮಿ, ಗೋಪಾಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಪುಟ್ಟರಾಜು, ಎಪಿಎಂಸಿ ಅಧ್ಯಕ್ಷ ಹೊಲದಪ್ಪ, ಮೈಸೂರು ನಗರಪಾಲಿಕೆ ಸದಸ್ಯ ಪಿ. ಪ್ರಶಾಂತ್‌ಗೌಡ, ತಾಪಂ ಸದಸ್ಯರಾದ ಬಿ.ವಿ. ಅನಿತಾ, ಸರಸ್ವತಿ, ಆರ್.ಸಿ. ಚಂದ್ರು, ನವಿಲೂರು ಮಹದೇವ್, ಪಪಂ ಸದಸ್ಯರಾದ ಅನಿತಾಶೇಖರ್, ರತ್ನ, ಸುವರ್ಣ, ಸೌಭಾಗ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement