ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಕಾಲದಲ್ಲಿ ಹಣ ಬಿಡುಗಡೆಯಾದರೆ ಯೋಜನೆ ಯಶಸ್ವಿ: ಕವಿತಾ ರವಿ

Srinivasa Murthy VN
Updated On : 30 Jun 2013, 11:44 am

ಕ.ಪ್ರ.ವಾರ್ತೆ ಕೆ.ಆರ್. ನಗರ ಜೂ. 30
ಸರ್ಕಾರದಿಂದ ನಿರುದ್ಯೋಗಿಗಳಿಗೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸಾಲ ಸೌಲಭ್ಯ ನೀಡಲು ಸಂಬಂಧಿತ ಇಲಾಖೆಗಳು ಫಲಾನುಭವಿಗಳನ್ನು ಆಯ್ಕೆ ಮಾಡಿದಾಗ ಬ್ಯಾಂಕುಗಳು ಸಕಾಲದಲ್ಲಿ ಹಣ ಬಿಡುಗಡೆ ಮಾಡಿ ಸಹಕಾರ ನೀಡಿದರೆ ಸರ್ಕಾರದ ಜನಪರ ಕಾರ್ಯಗಳು ಯಶಸ್ವಿಯಾಗಲಿವೆ ಎಂದು ತಾಪಂ ಅಧ್ಯಕ್ಷೆ ಕವಿತಾ ರವಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಸರ್ಕಾರ ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಸದೃಢಗೊಳಿಸಲು ವಿವಿಧ ಸಾಲ ಸವಲತ್ತು ನೀಡಲು ಫಲಾನೂಭವಿಗಳನ್ನು ಆಯ್ಕೆ ಮಾಡಿ ಬ್ಯಾಂಕುಗಳಿಗೆ ಶಿಫಾರಸು ಮಾಡಿದರೆ ಅಂಥವರಿಗೆ ಸಾಲ ನೀಡಲು ಹಿಂಜರಿಯುವ ಬ್ಯಾಂಕುಗಳು, ಮನೆ ನಿರ್ಮಾಣ ಮತ್ತು ವಾಹನ ಖರೀದಿ ಹಾಗೂ ಆಸ್ತಿ ಅಡಮಾನ ಸಾಲ ನೀಡಲು ಆಸಕ್ತಿ ತೋರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಾ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಸುರೇಂದ್ರ ಹೆಗ್ಗಡೆ ಮಾತನಾಡಿ, ಜನರಿಗೆ ಉತ್ತಮ ಜ್ಞಾನ ಮತ್ತು ಅರ್ಥಿಕ ಸಾಕ್ಷರತೆ ನೀಡುವ ಸದುದ್ದೇಶದಿಂದ ಆರ್ಥಿಕ ಸಾಕ್ಷರತಾ ಕೇಂದ್ರ ಆರಂಭಿಸಿದ್ದು, ರಾಜ್ಯದಲ್ಲಿ ಈವರೆಗೆ 18 ಕೇಂದ್ರ ತೆರೆಯಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಸಾಲ ಸವಲತ್ತುಗಳನ್ನು ನೀಡುವುದರ ಜತೆಗೆ ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ಗುಡಿ ಕೈಗಾರಿಕೆ ಸೇರಿದಂತೆ ಇನ್ನಿತರ ಕಿರು ಉತ್ಪನ್ನ ತಯಾರಿಸಲು ಆದ್ಯತೆ ನೀಡಲಾಗುತ್ತದೆ ಎಂದರು.
ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಸಾಲದ ಸವಲತ್ತು ಒದಗಿಸಲಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದ ಅವರು, ತಾಲೂಕಿನ ನಾಗರಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರಲ್ಲದೆ ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರ ವತಿಯಿಂದ 9675 ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ನಡೆಸಲಾಗಿದ್ದು, 5.45 ಲಕ್ಷ ಜನರು ಅನುಕೂಲ ಪಡೆದುಕೊಂಡಿದ್ದಾರೆ ಎಂದು ತಿಳಿದಸಿದರು.
ತಾಪಂ ಉಪಾಧ್ಯಕ್ಷೆ ಶಂಕುತಲಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಧಿಕ್‌ಖಾನ್, ಸಿಂಡಿಕೆಟ್ ಬ್ಯಾಂಕಿನ ಮಾಧುರ್ ಭೂತೇಶ್ವರನ್, ಬಿ.ಆರ್. ಸತ್ಯಮೂರ್ತಿ, ಗೋವಿಂದೇಗೌಡ, ಎ.ಟಿ. ಹೆಗಡೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement