ಸಮಾನ ಹಕ್ಕಿಗಾಗಿ ಯತ್ನಿಸಿದ್ದ ರಾಜೀವ್‌ಗಾಂಧಿ: ಪರಮೇಶ್ವರ್
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 21
ದೇಶ ಅಧುನಿಕತೆಗೆ ತೆರೆದುಕೊಳ್ಳಲು ಹಾಗೂ ಹೊಸ ದಿಕ್ಕಿನತ್ತ ಸಾಗಲು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಶ್ರಮಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ರಾಜೀವ್‌ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಬಡತನದಿಂದ ನರಳುತ್ತಿರುವ ಸಮುದಾಯಗಳಿಗೆ ಸಮಾನ ಅವಕಾಶ ಸಿಗುವಂತೆ ಪ್ರಯತ್ನಿಸಿದ ರಾಜೀವ್‌ಗಾಂಧಿ ಯುವ ಸಮುದಾಯವನ್ನು ಆಕರ್ಷಿಸಿ ಯುವಕರು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕು ಸಿಗುವಂತೆ ಮಾಡಿ ಯುವ ಜನರಿಗೆ ಹೆಚ್ಚಿನ ಪ್ರಾಧ್ಯಾನತೆ ಸಿಗಲು ಕಾರಣಕರ್ತರಾದರು ಎಂದು ತಿಳಿಸಿದರು.
ದೇಶ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಪ್ರಪಂಚದ ದೃಷ್ಟಿಯಲ್ಲಿ ಹಿಂದುಳಿದಿದ್ದೇವೆ ಎಂದು ವಿಷಾದಿಸಿದ ಅವರು, ರಾಜೀವ್‌ಗಾಂಧಿಯವರ ಅಧುನಿಕ ತತ್ವ ಮೈಗೂಡಿಸಿಕೊಂಡು ಅವರು ನೀಡಿದ ಯೋಜನೆಗಳನ್ನು ನೆನೆಸಿಕೊಂಡು ಮುಂದುವರಿಯವಂತೆ ಅವರು ಸಲಹೆ ನೀಡಿದರು.
ಸಂಸದ ಎಚ್. ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೋಸರಾಜ್, ಕಾರ್ಯದರ್ಶಿ ಉಪೇಂದ್ರ, ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾಧ್ಯಕ್ಷ ಆರ್. ಧರ್ಮಸೇನ, ಮೈಸೂರು ಉಸ್ತುವಾರಿ ರಮೇಶ್, ಮಾನ್ಸೂನ್‌ಚಂದ್ರು, ಡಾ.ಬಿ.ಜೆ. ವಿಜಯಕುಮಾರ್, ಬಿ.ಜೆ. ಬಸವರಾಜ್, ಕುಮಾರ್, ಬಿ.ವಿ. ಅನಿತಾ, ವೆಂಕಟಯ್ಯ, ವಿಷಕಂಠಯ್ಯ, ಪಿ. ಮಹದೇವ್, ಶಫಿ ಇದ್ದರು.