ಅಮೂಲ್ಯ ಹುಲಿಯನ್ನು 5ನೇ ಬಾರಿಗೆ ದತ್ತು ಪಡೆದ ಯಡಿಯೂರಪ್ಪ
ಕ.ಪ್ರ.ವಾರ್ತೆ ಮೈಸೂರು ಅ. 14
ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮೈಸೂರು ಮೃಗಾಲಯದ ಅಮ್ಯೂಲ ಹುಲಿಯನ್ನು 5ನೇ ಬಾರಿಗೆ ಭಾನುವಾರ ದತ್ತು ಸ್ವೀಕರಿಸಿದ್ದಾರೆ. ಮೃಗಾಲಯ ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಅಮೂಲ್ಯ ಹುಲಿಯನ್ನು ಕಳೆದ ನಾಲ್ಕು ವರ್ಷಗಳಿಂದ ಯಡಿಯೂರಪ್ಪ ದತ್ತು ಸ್ವೀಕರಿಸಿದರು. ಈಗ ಮತ್ತೊಂದು ಅಧಿಗೆ ಅಂದರೆ 2014ರ ಅ.11ವರೆಗೆ ದತ್ತು ಸ್ವೀಕರಿಸಿದ್ದಾರೆ. ಸತತ 5ನೇ ಬಾರಿಗೆ ಅಮೂಲ್ಯ ಹುಲಿಯನ್ನು ಯಡಿಯೂರಪ್ಪ ದತ್ತು ಸ್ವೀಕರಿಸಿರುವುದಕ್ಕೆ ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ವಂದಿಸಿದ್ದಾರೆ. ಮಾಜಿ ಸಚಿವ ಶೋಭಾ ಕರಂದ್ಲಾಜೆ ಇದ್ದರು.
ದಸರಾ ಸ್ಮರಣ ಸಂಚಿಕೆ ಬಿಡುಗಡೆ
ಕ.ಪ್ರ.ವಾರ್ತೆ ಮೈಸೂರು ಅ. 14
ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯು ದಸರಾ ಮಹೋತ್ಸವದ ಅಂಗವಾಗಿ ಹೊರ ತಂದಿರುವ ಸ್ಮರಣ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಬಿಡುಗಡೆಗೊಳಿಸಿದರು. ಅರಮನೆ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಉಪಸಮಿತಿಯು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ವಿಸ್ಮೃತಿಯಿಂದ ಅಸ್ಮಿತೆಗೆ' ಎಂಬ ವಿಶೇಷ ಸಂಚಿಕೆಯನ್ನು ಅವರು ಬಿಡುಗಡೆಗೊಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಸಂಸದ ಎಚ್. ವಿಶ್ವನಾಥ್, ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಗೋ. ಮಧುಸೂದನ್, ಸಾಂಸ್ಕೃತಿಕ ಉಪಸಮಿತಿ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಜಿಲ್ಲಾಧಿಕಾರಿ ಸಿ. ಶಿಖಾ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಇದ್ದರು.