ನಿರಾಶೆಗೊಳಿಸಿದ ದಸರೆ
ಮೈಸೂರು: ಈ ಬಾರಿ ದಸರಾ ಕೆಲವರಿಗೆ ನಿರಾಶೆಗೊಳಿಸಿದೆ ಎಂದು ನಾಗರಿಕ ಅಂಟೋನಿ ಮೊಸೆಸ್ ಹೇಳಿದ್ದಾರೆ. ಪ್ರತಿಸಲದಂತೆ ದಸರಾ ಅದ್ದೂರಿಯಿಂದ 9 ದಿನಗಳ ಕಾಲ ಯಾವುದೇ ರೀತಿಯ ಅಡಚಣೆಗಳು ಉಂಟಾಗದೆ ಹಿಂದಿನ ವರ್ಷಕ್ಕಿಂತ ವಿದ್ಯುತ್ ಅಲಂಕಾರದ ವ್ಯವಸ್ಥೆ ಚೆನ್ನಾಗಿತ್ತು. ಇದೆ ರೀತಿ ಜಂಬೂಸವಾರಿಯು ಮೆರವಣಿಗೆಯು ಈ ಬಾರಿ ಅದ್ದೂರಿಯಾಗಿ ನೆರವೇರಿಸಿರುತ್ತಾರೆ ಎಂಬ ಭಾವನೆ ಜನರಲ್ಲಿ ಮೂಡಿತ್ತು. ಬನ್ನಿಮಂಟಪದ ಅರ್ಧ ಕಿ.ಮೀ. ಹಿಂದಿನ ಹನುಮಂತ ನಗರಕ್ಕೆ ಹೋಗುವ ಅಡ್ಡ ದಾರಿಯಲ್ಲಿ ಮೆರವಣಿಗೆಯು ಸಾಗಿತು. ಬೆಳಗ್ಗೆ 11ರಿಂದ ಸಾವಿರಾರು ಜನ ಬನ್ನಿಮಂಟಪದ ಬಾಲಭವನದ ಮುಂದೆ ಜಂಬೂಸವಾರಿ ವೀಕ್ಷಿಸಲು ಕಾತರದಿಂದ ಸರ್ಕಾರ ಮಾಡಿಕೊಡಲಾಗಿದ್ದ ಬ್ಯಾರಿಕೆಡ್‌ನ ಅಕ್ಕಪಕ್ಕದಲ್ಲಿ ಜನರುಗಳು ಬಿಸಿಲೆನ್ನದೆ ಕಾದು ಕುಳಿತ್ತಿದ್ದ ಸಾವಿರಾರು ಜನ ಜಂಬೂಸವಾರಿ ಮೆರವಣಿಗೆ ನೋಡಲು ನಿರಾಶೆಯನ್ನು ಉಂಟು ಮಾಡಿರುವುದು ಎಷ್ಟು ಸರಿ ಹಾಗೂ ಎಂಥ ವ್ಯವಸ್ಥೆ ಇದು ಎಂದು ಪ್ರಶ್ನಿಸಿದ್ದಾರೆ. ಅರ್ಧ ಕಿ.ಮೀ. ಹಿಂದಿನ ಹನುಮಂತ ನಗರಕ್ಕೆ ಹೋಗುವ ಅಡ್ಡ ದಾರಿಯಲ್ಲಿ ಮೆರವಣಿಗೆ ತಿರುಗುತ್ತದೆ ಎಂಬ ವಿಷಯವನ್ನು ಜನರಿಗೇಕೆ ಅಲ್ಲಿರುವ ಪೊಲೀಸರು ತಿಳಿಸಲಿಲ್ಲ ಮತ್ತು ಬಾಲಭವನದ ಮುಂಭಾಗದ ಜಾಗದಲ್ಲಿ ಬ್ಯಾರಿಕೆಡ್ ರಚಿಸಿದ್ದೇಕೆ ಮತ್ತು ಜನರನ್ನು ಬೆಳಗ್ಗೆಯಿಂದ ಬಿಸಿಲಿನಲ್ಲಿ ಆ ಜಾಗದಲ್ಲಿ ಕುರಿಸಿರುವುದು ಎಷ್ಟು ಸರಿ ಮತ್ತು ಎಂಥ ಬೇಜವಾಬ್ದಾರಿ ವ್ಯವಸ್ಥೆ ಎಂದು ಟೀಕಿಸಿದ್ದಾರೆ.