ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಷ್ಟಾಚಾರ ಮರೆತರೆ ಜಿಲ್ಲಾ ಮಂತ್ರಿ?

Srinivasa Murthy VN
Updated On : 15 Oct 2013, 1:35 am

ಮೈಸೂರು: ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೆರವಣಿಗೆಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತಾದರೂ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಪ್ಪಾರ್ಚನೆ ಮಾಡುವಾಗ ವಿಶೇಷ ವೇದಿಕೆ ಏರಲಿಲ್ಲ.
ಹಿಂದೆಲ್ಲಾ ಜಂಬೂಸವಾರಿಗೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾದವರು ವೇದಿಕೆ ಹತ್ತಿರುವ ನಿದರ್ಶನಗಳಿವೆ.
ಜಂಬೂಸವಾರಿಯ ಕಾಲಕ್ಕೆ ಅಂಬಾರಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲು ಅರಮನೆ ಆವರಣದಲ್ಲಿ ನಿರ್ಮಿಸುವ ವಿಶೇಷ ವೇದಿಕೆಗೆ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ, ಅವರ ಪತ್ನಿ, ರಾಜ ವಂಶಸ್ಥರು, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾತ್ರ ಏರಬೇಕು.
ಇದೇ ಪ್ರಕಾರ ಯಾವತ್ತೂ ನಡೆದುಕೊಂಡು ಬಂದಿಲ್ಲ. ಕೆಲವೊಮ್ಮೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಹತ್ತಿದ್ದರು.
ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪಿ. ಮಣಿವಣ್ಣನ್, ಪೊಲೀಸ್ ಆಯುಕ್ತರಾಗಿದ್ದ ಡಾ.ಪರಶಿವಮೂರ್ತಿ ಅವರು ವೇದಿಕೆ ಏರಿರಲಿಲ್ಲ. ನಂತರ ಜಿಲ್ಲಾಧಿಕಾರಿ ಹರ್ಷ ಗುಪ್ತ ಕೂಡ ಹೋಗಿರಲಿಲ್ಲ. ಒಮ್ಮೆ ಜಿಪಂ ಸಿಇಒ ಜಿ. ಸತ್ಯವತಿ ವೇದಿಕೆ ಏರಿದ್ದರು. ಆದರೆ ಕಳೆದ ಬಾರಿ ಸಿಇಒ ಡಾ. ಅಜಯ್ ನಾಗಭೂಷಣ್ ಅತ್ತ ಸುಳಿಯಲಿಲ್ಲ. ಈ ಬಾರಿ ಜಿಪಂ ಸಿಇಒ ಪಿ.ಎ. ಗೋಪಾಲ್ ಕೂಡ ಹೋಗಲಿಲ್ಲ.
ಈ ಬಾರಿ ಕೂಡ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಂದಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಮೇಯರ್ ಎನ್. ಎಂ. ರಾಜೇಶ್ವರಿ ಅವರ ಮಾತ್ರವಲ್ಲದೇ ಶಿಷ್ಟಾಚಾರದ ಪ್ರಕಾರ ಬಾರದ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ, ಜಿಲ್ಲಾಧಿಕಾರಿ ಸಿ. ಸಿಖಾ, ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಕೂಡ ವಿಶೇಷ ವೇದಿಕೆ ಹತ್ತಿದರು. ಆದರೆ ಮುಖ್ಯ ಅತಿಥಿಯಾಗಿ ಜಂಬೂಸವಾರಿಗೆ ಬಂದಿದ್ದ ಡಾ. ಮಹದೇವಪ್ಪ ಮಾತ್ರ ವೇದಿಕೆ ಹತ್ತಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement