ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಮುಕ್ತ ಅವಕಾಶ

Srinivasa Murthy VN
Updated On : 16 Oct 2013, 12:17 pm

ಕ.ಪ್ರ.ವಾರ್ತೆ ಮೈಸೂರು ಅ. 15
ಬುದ್ಧಭೂಮಿ ಬಳಗ ಮತ್ತು ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ಸಂಸ್ಕೃತಿ- ಪರಂಪರೆ ಮತ್ತು ಆಧುನಿಕತೆಯ ಅನುಸಂಧಾನ ಕುರಿತು ಅ.23ರಂದು ಸಂಸ್ಥೆಯ ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಈ ವಿಚಾರ ಸಂಕಿರಣದಲ್ಲಿ ನಾಡಿನ ಸಂಸ್ಕೃತಿ ಚಿಂತಕರು, ಸಾಹಿತಿಗಳು ಭಾಗವಹಿಸಲಿದ್ದು, ಅಧ್ಯಯನಶೀಲ ಪ್ರಬಂಧಗಳನ್ನು ಮಂಡಿಸಲು ಸ್ನಾತಕ ವಿದ್ಯಾರ್ಥಿಗಳು, ಪದವೀಧರರು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಮುಕ್ತ ಅವಕಾಶವಿದೆ. ಈ ವಿಚಾರ ಸಂಕಿರಣದ ಪ್ರಬಂಧಗಳು ಪುಸ್ತಕ ರೂಪದಲ್ಲಿ ಪ್ರಕಟಣೆ ಆಗಲಿದೆ.
ಆದ್ದರಿಂದ ಸಮಾವೇಶದಲ್ಲಿ ಪ್ರಬಂಧವನ್ನು ಬರಹ ರೂಪದಲ್ಲಿ ಕಡ್ಡಾಯವಾಗಿ ನೀಡಬೇಕು.
ಪ್ರಬಂಧವನ್ನು ಆಧರಿಸಿ ಮಾತಾಡಬೇಕೆ ಹೊರತು, ಓದುವಂತಿಲ್ಲ. ಪ್ರಬಂಧದ ವಿಷಯಗಳನ್ನಾಧರಿಸಿ ಸಂವಾದಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ಪ್ರಬಂಧ ಮಂಡಿಸುವ ಪ್ರತಿನಿಧಿಗಳು ಶುಲ್ಕ ನೀಡಿ ಅ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ವಿವರಕ್ಕೆ ಹೊಂಬಯ್ಯ ಹೊನ್ನಲಗೆರೆ- ಮೊ. 99640 18112, ಪ್ರಸನ್ನ ನಂಜಾಪುರ- 80509 86844 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement