ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ಕಾಡಿಗೆ ಹೊರಡಲಿರುವ ಗಜಪಡೆ

Srinivasa Murthy VN
Updated On : 16 Oct 2013, 11:33 am

ಮೈಸೂರು: ವಿಶ್ವವಿಖ್ಯಾತ 403ನೇ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿದ್ದ ಗಜಪಡೆಯು ಈಗ ನಾಡಿನಿಂದ ಕಾಡಿಗೆ ಹೋಗುವ ಸಮಯ ಕೂಡಿ ಬಂದಿದೆ.
ಎರಡು ತಂಡಗಳಲ್ಲಿ ಆಗಮಿಸಿ ಮೈಸೂರು ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ 14 ದಸರಾ ಆನೆಗಳು, ಅವುಗಳ ಮಾವುತರು, ಕಾವಾಡಿಗಳು ಮತ್ತು ಕುಟುಂಬ ವರ್ಗದವರು ಕಾಡಿಗೆ ಹೋಗಲು ಸಜ್ಜಾಗಿದ್ದಾರೆ. ಅ.17ರ ಬೆಳಗ್ಗೆ 9.30ಕ್ಕೆ ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ 14 ಲಾರಿಗಳಲ್ಲಿ ಆಯಾ ಆನೆ ಶಿಬಿರಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಎಫ್ ಎಸ್.ಎನ್. ದೇವರಾಜ್ ತಿಳಿಸಿದ್ದಾರೆ.
ಬಳ್ಳೆ ಆನೆ ಶಿಬಿರಕ್ಕೆ ಅಂಬಾರಿ ಆನೆ ಅರ್ಜುನ, ಸರಳ, ವರಲಕ್ಷ್ಮಿ, ತಿತಿಮತಿ ಆನೆ ಶಿಬಿರಕ್ಕೆ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ದುಬಾರೆ ಆನೆ ಶಿಬಿರಕ್ಕೆ ವಿಜಯ, ವಿಕ್ರಮ, ಹರ್ಷ, ಗೋಪಿ, ಪ್ರಶಾಂತ ಹಾಗೂ ಚಾಮರಾಜನಗರ ಜಿಲ್ಲೆ ಕೆ. ಗುಡಿ ಆನೆ ಶಿಬಿರಕ್ಕೆ ಗಜೇಂದ್ರ, ಶ್ರೀರಾಮ ಮತ್ತು ದುರ್ಗಾಪರಮೇಶ್ವರಿ ಆನೆಗಳು ತೆರಳಲಿವೆ ಎಂದು ಆನೆ ವೈದ್ಯ ಡಾ. ನಾಗರಾಜ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement