ಅಪರಿಚಿತ ವ್ಯಕ್ತಿ ಶವ ಪತ್ತೆ
ಮೈಸೂರು: ಮೈಸೂರು ರೈಲು ನಿಲ್ದಾಣದ ಬುಕ್ಕಿಂಗ್ ಕಚೇರಿ ಬಳಿ 55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರ ವಾರಸುದಾರರು ಪತ್ತೆಯಾಗಿಲ್ಲ. 5.6 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ, ದಪ್ಪ ಮೂಗು, ತಲೆಯಲ್ಲಿ ಬಿಳಿ ಕೂದಲು, ಬಲಗೈಯಲ್ಲಿ ಶಕುಂತಲ ಬಸವರಾಜು ಎಂಬ ಹಚ್ಚೆ ಗುರುತು ಇದೆ. ಆಸ್ಪತ್ರೆಯ ಬಿಳಿ ಬಣ್ಣದ ಬಟ್ಟೆ ಇದೆ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೇಲ್ವೆ ಪೊಲೀಸ್ ಠಾಣೆ ದೂ. 0821-2516579.
ವ್ಯಕ್ತಿ ನಾಪತ್ತೆ
ಮೈಸೂರು: ಮಾನಸಿಕ ಅಸ್ವಸ್ಥರಾಗಿದ್ದ ವ್ಯಕ್ತಿಯೊಬ್ಬರು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದಾರೆ. ಕುಮಾರ್(42) ನಾಪತ್ತೆಯಾದ ವ್ಯಕ್ತಿ. ಮಳವಳ್ಳಿಯ ತನ್ನ ಪತ್ನಿಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾರೆ. 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುವ ಇವರು ಬುದ್ಧಿಮಾಂಧ್ಯರು. ಉದಯಗಿರಿ ಪೊಲೀಸ್ ಠಾಣೆ ದೂ. 2418309 ಸಂಪರ್ಕಿಸಬಹುದು.
ಅಮಲಿನಲ್ಲಿ ಸ್ನೇಹಿತನ ಕೊಲೆ
ಶ್ರೀರಂಗಪಟ್ಟಣ: ಪ್ರವಾಸಕ್ಕಾಗಿ ಸ್ನೇಹಿತನನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಕುಡಿದ ಅಮಲಿನಲ್ಲಿ ಸ್ನೇಹಿತನ ತಲೆ ಮೇಲೆ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ಬಲಮುರಿ ಕಲ್ಯಾಣ ಮಂಟಪದ ಬಳಿ ಗುರುವಾರ ಸಂಭವಿಸಿದೆ. ಮೈಸೂರಿನ ಮಂಡಿ ಮೊಹಲ್ಲಾ 3 ನೇ ಕ್ರಾಸ್ ನಿವಾಸಿ ಕಾರ್ತಿಕ್ (25) ಎಂಬಾತನೇ ಕೊಲೆಯಾದ ಯುವಕ. ದೇವೇಂದ್ರ ಮಗ ಸಂತೋಷ ಎಂಬಾತನೇ ಕೊಲೆ ಮಾಡಿದ ವ್ಯಕ್ತಿ.