ಆರೋಗ್ಯ ಕೇಂದ್ರ ಪರಿಶೀಲನೆ
ಹುಣಸೂರು: ತಾಲೂಕು ಆರೋಗ್ಯ ಮತ್ತು ಮೇಲ್ವಿಚಾರಣಾ ಸಮಿತಿಯು ತಾಲೂಕಿನ ರತ್ನಪುರಿ, ಧರ್ಮಾಪುರ ಹಾಗೂ ಕರೀಮುದ್ದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಕ್ರಮಗಳ ಅನುಷ್ಠಾನ, ಅನುದಾನ ಬಳಕೆ ಹಾಗೂ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಸಮಿತಿಯು ಪರಿಶೀಲಿಸಿ, ಸೌಲಭ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮೂಲ ಸೌಕರ್ಯಗಳನ್ನು ಒದಗಿಸುವಂತೆ ತಾಕೀತು ಮಾಡಿದರು. ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯ್ಕರ ನೇತೃತ್ವದಲ್ಲಿ ಸಮಿತಿ ಸದಸ್ಯರು ಹಾಗೂ ಆರೋಗ್ಯ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ, ಪರಮಾರ್ಶೆ ನಡೆಸಿ ಮೂರು ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ವಿವಿಧ ಕಾರಣದಿಂದ ಒಟ್ಟು 8 ಶಿಶುಗಳು ಮರಣ ಹೊಂದಿದ್ದರೆ, 11 ಕ್ಷಯರೋಗಿಗಳು ಹಾಗೂ ಎಚ್ಐವಿ ಪೀಡಿತರ ಬಗ್ಗೆ ಮಾಹಿತಿ ಪಡೆದು ಕೊಂಡರು. ಸಮಿತಿ ಸದಸ್ಯರಾದ ಚಂದ್ರಕಲಾ ಮಂಚನಾಯ್ಕ, ಹನಗೋಡು ನಟರಾಜ್, ಗಣಪತಿ, ಪರಮೇಶ್ವರಿ, ಸತ್ಯಪ್ಪ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಅನಂತ ಸುಬ್ರಮಣ್ಯ, ಎನ್ಆರ್ಎಚ್ಎಂನ ಹರೀಶ್, ವಿವೇಕಾನಂದ ಯೂತ್ ಮೂವ್ಮೆಂಟ್ನ ಶಿವಪ್ಪ, ವೀಣಾ ಇದ್ದರು.
ನಾಳೆ ಇಂಗ್ಲಿಷ್ ಚರ್ಚಾ ಸ್ಪರ್ಧೆ
ರೋಟರಿ ಮೈಸೂರು ಮಿಡ್ಟೌನ್ ಹಾಗೂ ಎಸ್ಡಿಎಂ ಐಎಂಡಿ ವತಿಯಿಂದ ಅ.19ರ ಬೆಳಗ್ಗೆ 9.30ಕ್ಕೆ ಎಸ್ಡಿಎಂ ಐಎಂಡಿಯಲ್ಲಿ ವೈ. ಭಗವಾನ್ ಸ್ಮರಣಾರ್ಥ ಅಂತರ ಕಾಲೇಜು ಇಂಗ್ಲಿಷ್ ಚರ್ಚಾ ಸ್ಪರ್ಧೆ ಏರ್ಪಡಿಸಿದ್ದು, ಹಿರಿಯ ವಕೀಲ ಎಲ್. ಗೋವಿಂದರಾಜು, ಎನ್.ಆರ್. ಪರಶುರಾಮನ್, ಎಸ್. ಭಾನುಚಂದ್ರನ್ ಅತಿಥಿಗಳಾಗಿ ಭಾಗವಹಿಸುವರು.
ವಿವಿಧ ಕೋರ್ಸ್ಗೆ ಪ್ರವೇಶ
ಕುವೆಂಪುನಗರದಲ್ಲಿರುವ ಎಜುಕೇರ್ ಟೆಕ್ನಾಲಜಿಸ್ ಸಂಸ್ಥೆಯಲ್ಲಿ ಡಿಐಟಿ, ಪಿಜಿ ಡಿಐಟಿ, ಸಿಐಟಿ, ಡಿಎಸ್ಟಿ, ಡಿಎಚ್ಎನ್, ಪಿಜಿಡಿಸಿಎ ಕೋರ್ಸಿಗೆ ಪ್ರವೇಶಾತಿ ಆರಂಭಿಸಿದ್ದು, ಎಸ್ಸೆಸ್ಸೆಲ್ಸಿ ಪಾಸಾದವರು ಪ್ರವೇಶಾತಿ ಪಡೆಯಬಹುದು. 6 ತಿಂಗಳಿನಿಂದ 1 ವರ್ಷದ ಅವಧಿ. ಮೊದಲ 20 ವಿದ್ಯಾರ್ಥಿಗಳಿಗೆ ಶೇ.40ರಷ್ಟು ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಮೊ. 99455 00027 ಸಂಪರ್ಕಿಸಬಹುದು.
ವಿದ್ಯಾರ್ಥಿ ವೇತನ
ಮೈಸೂರು: ಬೆಂಗಳೂರಿನ ಶ್ರೀಮತಿ ವಿಜಯಲಕ್ಷ್ಮಿ ಆರ್.ಎಲ್. ಜಾಲಪ್ಪ ಎಜುಕೇಷನ್ ಫೌಂಡೇಷನ್ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ಅ.18ರ ಮಧ್ಯಾಹ್ನ 3ಕ್ಕೆ ನಜರ್ಬಾದ್ನ ಜೆ.ಪಿ. ಫಾರ್ಚೂನ್ ಹೋಟೆಲ್ನಲ್ಲಿ ಬಡಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಲಿದೆ. ಮಾಜಿ ಸಚಿವ ಆರ್.ಎಲ್. ಜಾಲಪ್ಪ ವಿದ್ಯಾರ್ಥಿ ವೇತನ ವಿತರಿಸುವರು. ಜೆ.ಪಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸುವರು. ಎಂ.ಕೆ. ಪೋತರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ನೇಮಕ
ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರ ಶಾಖೆಯ ಎನ್.ಆರ್. ಕ್ಷೇತ್ರದ ಅಧ್ಯಕ್ಷರಾಗಿ ಮುರುಗನ್, ಉಪಾಧ್ಯಕ್ಷರಾಗಿ ಕೆ. ಸುರೇಶ್ಕುಮಾರ್, ಎಸ್. ಮಣಿ, ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ಕುಮಾರ್, ಸಹ ಕಾರ್ಯದರ್ಶಿಯಾಗಿ ಮುರಳಿ, ಖಜಾಂಚಿಯಾಗಿ ಎನ್. ಮಹದೇವ, ಸಂಘಟನಾ ಕಾರ್ಯದರ್ಶಿಯಾಗಿ ರಾಮಚಂದ್ರ, ಪಿ. ಮಹದೇವ, ಸಹ ಖಜಾಂಚಿಯಾಗಿ ಎಲ್. ರಾಮಚಂದ್ರ ನೇಮಕವಾಗಿದ್ದಾರೆ.
ಅವಿರೋಧ ಆಯ್ಕೆ
ರಾಜು ಕ್ಷತ್ರೀಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ವಿ. ಪಾರ್ಥರಾಜು, ಉಪಾಧ್ಯಕ್ಷರಾಗಿ ಎಂ.ಎನ್. ಬಾಲಕೃಷ್ಣರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಿಂಗಳ ಉಪನ್ಯಾಸ
ಮೈಸೂರು: ಮೈಸೂರು ಸೈನ್ಸ್ ಫೌಂಡೇಷನ್ನಿಂದ ಅ.19ರ ಸಂಜೆ 5.30ಕ್ಕೆ ಕಲಾಮಂದಿರದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಹೊರಹೊಮ್ಮುತ್ತಿರುವ ವಸ್ತುಗಳು ವಿಷಯ ಕುರಿತು ತಿಂಗಳ ಉಪನ್ಯಾಸ ಏರ್ಪಡಿಸಿದ್ದು, ಡಿಆರ್ಡಿಒ ವಿಜ್ಞಾನಿ ಡಾ. ಪಿ. ರಘೋತ್ತಮರಾವ್ ಉಪನ್ಯಾಸ ಮಾಡುವರು.
ಉಚಿತ ತರಬೇತಿ
ಮೈಸೂರು: ವನಿತಾ ಸದನ ಸಂಸ್ಥೆಯು ಬೆಂಗಳೂರಿನ ಸ್ವಸ್ತಿಕ್ ಸೊಸೈಟಿ ಆಫ್ ಕರ್ನಾಟಕ ಸಹಯೋಗದೊಂದಿಗೆ ಟೈಲರಿಂಗ್, ಬ್ಲಾಕ್ ಪ್ರಿಂಟಿಂಗ್ ಮತ್ತು ಕೈಕೆಲಸ ಸೇರಿದಂತೆ ಇನ್ನಿತರ ಕೌಶಲ್ಯಾಧಾರಿತ ತರಬೇತಿ ನೀಡಲಿದ್ದು, 15ರಿಂದ 25 ವರ್ಷದೊಳಗಿನ ಮಹಿಳೆಯರು ತರಬೇತಿ ಪಡೆಯಬಹುದು. ಆಸಕ್ತರು ಅ.21ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ದೂ. 0821- 2332124 ಸಂಪರ್ಕಿಸಬಹುದು.
ತರಬೇತಿ
ಮೈಸೂರು: ನೇತಾಜಿ ಎಜುಕೇಷನ್ ಫೌಂಡೇಷನ್ನಿಂದ ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದು, ಆಸಕ್ತರು ಮೊ. 9980639953 ಸಂಪರ್ಕಿಸಿರಿ.
ರಸಪ್ರಶ್ನೆ
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯವು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನ.12ರ ಬೆಳಗ್ಗೆ 10ಕ್ಕೆ ಮೃಗಾಲಯ ಸಭಾಂಗಣದಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ. ಮೃಗಾಲಯ ಮತ್ತು ವನ್ಯಪ್ರಾಣಿಗಳು ಕುರಿತ ಆ ಸ್ಪರ್ಧೆಗೆ ಒಂದು ಶಾಲೆಯಿಂದ ನಾಲ್ಕು ಮಂದಿ ವಿದ್ಯಾರ್ಥಿಗಳು ಮಾತ್ರ ಶಾಲೆಯ ಮೂಲಕವೆ ನ.8ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ದೂ. 2520302, 2440752 ಸಂಪರ್ಕಿಸಿರಿ.
ಒಳಾಂಗಣ ವಿನ್ಯಾಸ ಡಿಪ್ಲೋಮಾ
ಮೈಸೂರು: ಮೈಸೂರು ಇಂಟೀರಿಯರ್ಸ್ ಅಂಡ್ ಡಿಸೈನ್ಸ್ ಅಕಾಡೆಮಿ- ಇನ್ಸ್ಟಿಟ್ಯೂಟ್ ಆಫ್ ಇಂಟೀರಿಯರ್ ಡಿಸೈನ್ ಸಂಸ್ಥೆ, ವಿದ್ಯಾಕೇಂದ್ರ, ರಾಜ್ಯ ಮುಕ್ತ ವಿವಿ ವತಿಯಿಂದ ಗೃಹಿಣಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅ.29ರಿಂದ ಒಂದು ವರ್ಷದ ಒಳಾಂಗಣ ವಿನ್ಯಾಸದ ಡಿಪ್ಲೋಮಾ ತರಗತಿಯನ್ನು ಆರಂಭಿಸಲಿದೆ. ಪ್ರವೇಶ ಮತ್ತು ಅರ್ಜಿಗಳಿಗಾಗಿ ಕಾವೇರಿ ವಿದ್ಯಾಸಂಸ್ಥೆ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು ಇಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಅ.25 ಕೊನೆ ದಿನ. ದೂ. 256549, ಮೊ. 94488 50502 ಸಂಪರ್ಕಿಸಬಹುದು.
ಕುರುಬರ ಸಂಘಕ್ಕೆ ಆಯ್ಕೆ
ಮೈಸೂರು: ತಾಲೂಕು ಕುರುಬರ ಸಂಘದ ಗೌರವಾಧ್ಯಕ್ಷರಾಗಿ ಮೆಣಸೇಗೌಡ, ಅಧ್ಯಕ್ಷರಾಗಿ ಹಿನಕಲ್ ರಮೇಶ್, ಉಪಾಧ್ಯಕ್ಷರಾಗಿ ರವಿ ಆಯ್ಕೆಯಾಗಿದ್ದಾರೆ. ಸಿದ್ದಾರ್ಥನಗರದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ಮೈಸೂರು ಶಾಖೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಯ್ಯ, ಬಸವರಾಜು, ಖಜಾಂಚಿಯಾಗಿ ಶಿವಸ್ವಾಮಿ, ಸಂಘಟನಾ ಕಾರ್ಯದರ್ಶಿಯಾಗಿ ಡಿ. ಶಿವಕುಮಾರ್, ಕಾರ್ಯದರ್ಶಿಯಾಗಿ ಶ್ರೀಕಂಠು, ಸಹ ಕಾರ್ಯದರ್ಶಿಯಾಗಿ ಎಚ್.ಜೆ. ರಾಘವೇಂದ್ರ ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ರಮೇಶ್ ತಿಳಿಸಿದ್ದಾರೆ.
ನೇಮಕ
ಮೈಸೂರು: ನಗರ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ನಿವಾಸಿ ಕೆ. ಚೇತನ್ ಅವರನ್ನು ನೇಮಿಸಲಾಗಿದೆ.