ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರತಿಯೊಬ್ಬರಿಗೂ ಯೋಗ ಅಗತ್ಯ: ಕೃಷ್ಣಮೂರ್ತಿ

Srinivasa Murthy VN
Updated On : 18 Oct 2013, 12:31 pm

ಕ.ಪ್ರ.ವಾರ್ತೆ ಸಾಲಿಗ್ರಾಮ ಅ. 17
ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಹೊಂದಲು ಪ್ರಾಣಯಾಮ ಮತ್ತು ಯೋಗ ಮಾಡುವುದು ಅತ್ಯಗತ್ಯವೆಂದು ಮೈಸೂರಿನ ಪತಂಜಲಿ ಸಮಿತಿಯ ಎಸ್. ಕೃಷ್ಣಮೂರ್ತಿ ಹೇಳಿದರು.
ತ್ಯಾಗಿ ಭವನದ ಡಾ. ವೀರೇಂದ್ರ ಹೆಗ್ಗಡೆ ಸಭಾಂಗಣದಲ್ಲಿ ಜೈನ್ ಮಿಲನ್ ಆಯೋಜಿಸಿದ್ದ ಪ್ರಾಣಯಾಮ ಮತ್ತು ಯೋಗ ವಿಜ್ಞಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂತಹ ಶಿಬಿರಗಳು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುವುದರ ಮೂಲಕ, ಪಟ್ಟಣದ ಜನತೆಗೆ ಹೆಚ್ಚು ಹೆಚ್ಚು ಅವಕಾಶಗಳೊಂದಿಗೆ ಸಕಲ ಸೌಲಭ್ಯಗಳು ದೊರಕುವಂತಹ ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನತೆಯು ಇಂತಹ ಶಿಬಿರಗಳಿಂದ ವಂಚಿತವಾಗುತ್ತಿದ್ದಾರೆಂದು ಅವರು ವಿಷಾದಿಸಿದರು.
ಸ್ಥಳೀಯ ಜೈನ್ ಮಿಲನ್ ಸಮಿತಿಯು ಇದನ್ನು ಮನಗಂಡು ಗ್ರಾಮಾಂತರದಲ್ಲಿ ಈ ಶಿಬಿರಗಳನ್ನು ಆಯೋಜನೆ ಮಾಡಿ, ಸ್ಥಳೀಯರಿಗೆ ಇದರ ಅರಿವನ್ನು ಮೂಡಿಸುತ್ತಿರುವ ಕಾರ್ಯವು ಶ್ಲಾಘನೀಯವಾಗಿದ್ದು, ಇದೇ ಹಾದಿಯಲ್ಲಿ ವಿವಿಧ ಇತರ ಸಂಘ- ಸಂಸ್ಥೆಗಳು ಸಾಗಲಿ ಎಂದು ಹೇಳಿದರು.
ಶಿಬಿರದ ಸಂಘಟಕ ಅಮರ್ಜಿತ್ ಜೈನ್, ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಜಯಪದ್ಮ, ಕಾರ್ಯದರ್ಶಿ ಸುಜಾತ, ಉಷಾ ಸುರೇಶ್, ಎಸ್.ವಿ. ಸವಿತಾ ಅಮರ್ಜಿತ್, ಪ್ರದೀಪ್, ರಾಜಣ್ಣ, ನೀರಾಜ ಸತೀಶ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement