ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಿರಿಯ ಅಥ್ಲೆಟಿಕ್ಸ್ ಪಟುಗಳಿಗೆ ಅಭಿನಂದನೆ

Srinivasa Murthy VN
Updated On : 18 Oct 2013, 12:29 pm

ಕ.ಪ್ರ.ವಾರ್ತೆ ಮೈಸೂರು ಅ. 17
ಬ್ರೆಜಿಲ್ನಲ್ಲಿ ನಡೆಯುವ 20ನೇ ವಿಶ್ವ ಅಥ್ಲೆಟಿಕ್ಸ್ ಕೂಟಕ್ಕೆ ತೆರಳುವ ಹಿರಿಯ ಕ್ರೀಡಾಪಟುಗಳಿಗೆ ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕ್ರೀಡಾ ಕಿಟ್ ನೀಡಿ ಸನ್ಮಾನಿಸಲಾಯಿತು.
ಭಾರತದಿಂದ ಆಯ್ಕೆಯಾದ 50 ವಯೋವುತಿಯ ಎಂ. ಯೋಗೇಂದ್ರ, ಕೆ.ಪಿ. ಶಾಂತಕುಮಾರ್, ಎಚ್.ಆರ್. ರಾಮಸ್ವಾಮಿ ಅವರೊಂದಿಗೆ ತಂಡದ ವ್ಯವಸ್ಥಾಪಕ ಸಿ.ಕೆ. ಮುರಳೀಧರನ್ ಅವರನ್ನು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜೀ ಸನ್ಮಾನಿಸಿದರು.
ಮೈಸೂರು ವಿವಿ ಮತ್ತು ದಸರಾ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ಕಿರಿಯ ಕ್ರೀಡಾಪಟುಗಳಾದ ಕೆ.ಆರ್. ಮೇಘನಾ, ರೀನಾ ಜಾರ್ಜ್, ಎಂ.ಸಿ. ಮೋಹನ್ಕುಮಾರ್, ಎನ್. ಪ್ರವೀಣ್ ಅವರನ್ನು ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಸುಮನ ನರಸಿಂಹಮೂರ್ತಿ, ಉಪಾಧ್ಯಕ್ಷ ಎಂ.ಎನ್. ಶ್ರೀಕಾಂತ ರಾಜೇ ಅರಸ್, ಡಿ.ಕೆ. ದೇವರಾಜ ಅರಸ್, ಕೆ.ಎಸ್. ಸೀತಮ್ಮ, ಕಾರ್ಯದರ್ಶಿ ಪಿ.ಜಿ. ಸತ್ಯನಾರಾಯಣ ಇದ್ದರು.

ಪಾರಂಪರಿಕ ಕಟ್ಟಡದ ದುಸ್ಥಿತಿ
ಮೈಸೂರು: ಮೈಸೂರು ವಿವಿಯು ಮಹಾರಾಜ ಕಾಲೇಜು ಆವರಣದಲ್ಲಿ ಒಂದು ಚಿಕ್ಕ ಕಟ್ಟಡದಲ್ಲಿ 1916ರಲ್ಲಿ ಆರಂಭವಾಯಿತು. ಸೋಜಿಗವೆಂದರೆ ಈ ಪಾರಂಪರಿಕ ಕಟ್ಟಡವು ಇಂದು ದುರಾವಸ್ಥೆಗೆ ಒಳಗಾಗಿದೆ. ಈ ಕಟ್ಟಡದ ನವೀಕರಣಕ್ಕೆ ವಿವಿಯಾಗಲಿ ಅಥವಾ ಸರ್ಕಾರವಾಗಲಿ ಕಿಂಚಿತ್ತು ತಲೆಕೆಡಿಸಿಕೊಳ್ಳದ ಪರಿಣಾಮ ಪಾರಂಪರಿಕ ಕಟ್ಟಡವೊಂದು ಬಿದ್ದು ಹೋಗುವ ದುಸ್ಥಿತಿ ತಲುಪಿದೆ. ಅಲ್ಲದೇ ಕನ್ನಡ ಜಾನಪದ ಸಂಘಕ್ಕೆ ಕಾಲೇಜಿನಲ್ಲಿ ಒಂದು ನಿಯಮಿತವಾದ ಒಂದು ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಇಲ್ಲ. ಈಗಲಾದರೂ ಸಂಬಂಧಪಟ್ಟ ಇಲಾಖೆ ಈ ಸಮಸ್ಯೆಗಳನ್ನು ಪರಿಹರಿಸುವಂತೆ ಕಾಲೇಜು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement