ಇಬ್ಬರು ಅಪರಿಚಿತರ ಸಾವು
ಮೈಸೂರು: ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಇಬ್ಬರು ಅಪರಿಚಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಕೆ.ಆರ್. ಆಸ್ಪತ್ರೆ ಆವರಣದಲ್ಲಿ 40 ವರ್ಷದ ಅಪರಿಚಿತ ವ್ಯಕ್ತಿ ಯಾವುದೋ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಚಹರೆ- 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗುಂಡು ಮುಖ, ಗೋದಿ ಮೈಬಣ್ಣ ಹೊಂದಿದ್ದಾರೆ. ಚೆಲುವಾಂಬ ಆಸ್ಪತ್ರೆ ಗೇಟ್ ಬಳಿಯ ಫುಟ್‌ಪಾತ್‌ನಲ್ಲಿ(ಇರ್ವಿನ್ ರಸ್ತೆ) 50 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಚಹರೆ- 5.6 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಣಕಲು ದೇಹ, ಹಣೆಯ ಬಲಭಾಗದಲ್ಲಿ ಕಪ್ಪು ಕಾರೆ ಹರಳಿದೆ. ನಶ್ಯ ಬಣ್ಣದ ಚೆಕ್ಸ್ ಶರ್ಟ್, ಕಪ್ಪು ಗೆರೆಯುಳ್ಳ ಪ್ಯಾಂಟ್ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಿ.
ವ್ಯಕ್ತಿ ನಾಪತ್ತೆ
ಮೈಸೂರು: ವಿಜಯನಗರ ಠಾಣೆ ವ್ಯಾಪ್ತಿ ನಿವಾಸಿ ಸೋಮಾಚಾರಿ ಎಂಬವರ ಪುತ್ರ ವಸಂತಕುಮಾರ(38) ನಾಪತ್ತೆಯಾಗಿದ್ದಾರೆ. ಇವರು ಸೆ.1 ರಂದು ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದರು. ಚಹರೆ- 5.9 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418117, 317 ಸಂಪರ್ಕಿಸಬಹುದು.
ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಚಾಲನೆ
ಮೈಸೂರು: ಮೈಸೂರು ಹ್ಯಾಂಡ್‌ಬಾಲ್ ಸಂಘವು ಹಲವು ಸಂಸ್ಥೆಗಳ ಜತೆಗೂಡಿ ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾ ಸಮುಚ್ಛಯದಲ್ಲಿ ಏರ್ಪಡಿಸಿರುವ ಎರಡು ದಿನಗಳ ಎಟಿಎಂಇ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್ ಪಂದ್ಯಾವಳಿಗೆ ಶಾಸಕ ಎಂ.ಕೆ. ಸೋಮಶೇಖರ್ ಚಾಲನೆ ನೀಡಿದರು. ನಂತರ ಮಾತನಾಡಿದರು. ನಂತರ ನಡೆದ ಪಂದ್ಯಾವಳಿಯಲ್ಲಿ ಎಟಿಎಂಇ ಎ ತಂಡವು ರಾಮಕೃಷ್ಣ ಆಶ್ರಮ ತಂಡದ ವಿರುದ್ಧ 18-13 ಗೋಲುಗಳನ್ನು ಬಾರಿ 5 ಗೋಲುಗಳ ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ಉಪಾಧ್ಯಕ್ಷ ಕೆ. ಶಿವಶಂಕರ್, ಟ್ರಸ್ಟಿ ಆರ್. ವೀರೇಶ್, ಆಯೋಜಕ ಅಯ್ಯಣ್ಣ, ಸೇಂದಿಲ್‌ಕುಮಾರ್ ಟೆಕ್ಸ್‌ಟೈಲ್ಸ್ ಸಂಸ್ಥೆಯ ಪಿ. ಕುಮಾರಸನ್, ಪಾಲಿಕೆ ಸದಸ್ಯ ಬಿ.ಎಲ್. ಭೈರಪ್ಪ, ವೀರೇಂದ್ರಕುಮಾರ್, ನವೀನ್ ಸ್ವಾಮಿ ಇದ್ದರು.