ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಿರಿಯಾಪಟ್ಟಣ ಸಮಗ್ರ ಅಭಿವೃದ್ಧಿಗೆ ಕ್ರಮ: ಶಾಸಕ ವೆಂಕಟೇಶ್

Srinivasa Murthy VN
Updated On : 19 Oct 2013, 11:59 am

ಪಿರಿಯಾಪಟ್ಟಣ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ನೀಲಿನಕ್ಷೆ ತಯಾರಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಲಿವೆ ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು. ತಾಲೂಕಿನ ಬೆಟ್ಟದಪುರ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಜನ ಸಂದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಜನ ಸಂಪರ್ಕ ಸಭೆಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿಯಲಾಗುತ್ತಿದ್ದು ಮತ್ತು ಅಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ತಿಳಿದುಕೊಳ್ಳಲಾಗುತ್ತಿದೆ. ಪ್ರಸ್ತುತ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು, ತಾಲೂಕಿಗೆ ಅಗತ್ಯವಾಗಿ ಬೇಕಿರುವ ಕಾಮಗಾರಿಗಳನ್ನು ಯೋಜನೆಗಳನ್ನು ತರುವುದಾಗಿ ತಿಳಿಸಿದರು.
ತಹಸೀಲ್ದಾರ್ ಎಂ.ಕೆ. ಸವಿತಾ ಮಾತನಾಡಿ, ಅಟಲ್‌ಜೀ ಜನಸ್ನೇಹಿ ಕೇಂದ್ರಗಳನ್ನು ತಾಲೂಕಿನ 4 ಕಡೆಗಳಲ್ಲಿ ತೆರೆಯಲಾಗಿದ್ದು, ಆಯಾ ಭಾಗದ ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಸಲ್ಲಿಸುವಂತೆ ತಿಳಿಸಿದರು. ತಾಪಂ ಸದಸ್ಯೆ ಬಿ.ವಿ. ಅನಿತಾ, ಉಪ ತಹಸೀಲ್ದಾರ್ ಸಣ್ಣರಾಯಪ್ಪ ಮುಖಂಡ ಮುನಾವರ್ ಪಾಷಾ ಮಾತನಾಡಿದರು.
ಇದೇ ವೇಳೆ ಶಾಸಕ ಬೆಟ್ಟದಪುರ ಗ್ರಾಮದಲ್ಲಿ ಎಪಿಎಂಸಿ ವತಿಂದ ನೂತನವಾಗಿ ನಿರ್ಮಿಸಿರುವ 25 ಲಕ್ಷ ವೆಚ್ಚದ ಕಚೇರಿ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣವನ್ನು ಶಾಸಕ ಕೆ. ವೆಂಕಟೇಶ್ ಉದ್ಘಾಟಿಸಿದರು. ಮಂಜುಳಾ ರಾಜ್, ಸುನಂದಮ್ಮ, ಕೆ. ಹೊಲದಪ್ಪ, ಉಪಾಧ್ಯಕ್ಷ ಲಿಂಗರಾಜ್, ನಾಗರಾಜ್, ಸುರೇಶ್, ದಶರಥ, ರವಿಗೌಡ, ಸ್ವಾಮೇಗೌಡ, ಜಿ ಪಂ ಮಾಜಿ ಸದಸ್ಯ ರಾಜಶೇಖರ್, ತಾಪಂ ಮಾಜಿ ಅಧ್ಯಕ್ಷ ನೀಲಯ್ಯ, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಂಜಣ್ಣ ಕಾರ್ನಾಡ್ ಇದ್ದರು.

ಆರೋಪಕ್ಕೆ ಖಂಡನೆ
ಸಾಲಿಗ್ರಾಮ:
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮೇಲೆ ಆರೋಪ ಮಾಡುತ್ತಿರುವುದನ್ನು ಡಾ. ರಾಜ್‌ಕುಮಾರ್ ವೇದಿಕೆಯ ಸಂಚಾಲಕ ಎಸ್.ಬಿ. ಗುಣಚಂದ್ರಕುಮಾರ್ ಖಂಡಿಸಿದ್ದಾರೆ. ಪಟ್ಟಣದ ಮಹಾವೀರ ರಸ್ತೆಯಲ್ಲಿರುವ ತ್ಯಾಗಿ ಭವನದ ರಾಜಋಷಿ ಡಾ. ವೀರೇಂದ್ರ ಹೆಗ್ಗಡೆ ಅವರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕ್ಷುಲ್ಲಕ ಕಾರಣಕ್ಕೆ ಕೆಲವರು ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವುದಕ್ಕೆ ಟೀಕಿಸಿದರು.
ನಿಜವಾದ ಅಪರಾಧಿಯ ಅನ್ವೇಷಣೆಯಾಗಬೇಕು. ನಾವು ನಿರಪರಾಧಿಯನ್ನೆ ಅಪರಾಧಿ ಎಂದು ತೀರ್ಮಾನಿಸಿದಾಗ ನಿಜವಾದ ಅಪರಾಧಿಯ ಅನ್ವೇಷಣೆ ನಿಂತು ಹೋಗುತ್ತದೆ. ಯಾವುದೇ ತನಿಖೆ ಮಾಡಿ ನಿಜವಾದ ಅಪರಾಧಿಯನ್ನು ಬಂಧಿಸುವುದು ಸೂಕ್ತ. ಆದರೆ ಸಂಬಂಧಪಡದೇ ಇರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ವರ್ಚಸ್ಸಿಗೆ ಕಳಂಕ ಬರುವ ಕೆಲಸವನ್ನು ಯಾರೂ ಸಹ ಮಾಡಬಾರದು ಎಂದು ಅವರು ಹೇಳಿದರು. ಭಾರತ ಸ್ವಾಭಿಮಾನಿ ಅಭಿಯಾನದ ಯೋಗ ಶಿಕ್ಷಕ ಕೃಷ್ಣಮೂರ್ತಿ, ಜೈನ್ ಮಿಲನ್ ಹೆಲ್ತ್‌ಕೇರ್ ಫೌಂಡೇಶನ್‌ನ ಎಸ್.ಜಿ. ಅಮರ್‌ಜಿತ್ ಜೈನ್, ಎಸ್.ಬಿ. ಸುರೇಶ್ ಜೈನ್, ಜೈನ್ ಪರಿಷತ್‌ನ ಕಾಂತರಾಜು, ಎಸ್.ಸಿ. ಜಿನರಾಜಯ್ಯ, ದಿಗಂಬರ ಜೈನ್ ಸಮಾಜದ ರಾಜೇಂದ್ರಪ್ರಸಾದ್, ಗುಣಪಾಲ್ ಜೈನ್, ಭರತ ಬಾಹುಬಲಿ ಯುವಕ ಸಂಘದ ಸುನೀಲ್‌ಕುಮಾರ್ ಜೈನ್, ಜೈಭಾರತಿ ಮಹಿಳಾ ಸಮಾಜದ ಜಯಪದ್ಮ, ಸುಜಾತ, ಸಾಲಿಗ್ರಾಮ ಜೈನ್ ಮಿಲನ್‌ನ ಉಷಾ ಸುರೇಶ್‌ಕುಮಾರ್, ಮಣಿಮಾಲಾ ಜೈನ್, ಶೀತಲ್ ಪ್ರಸಾದ್, ಜೈನ ವಿಚಾರ ವೇದಿಕೆಯ ರಾಜೇಂದ್ರಪ್ರಸಾದ್ ಈ ಆರೋಪವನ್ನು ಖಂಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement