ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ
ಮೈಸೂರು: ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮೈಸೂರು ಮೃಗಾಲಯದ ವಿವಿಧ ಪ್ರಾಣಿ ಹಾಗೂ ಪಕ್ಷಿಗಳನ್ನು ಒಂದು ವರ್ಷದ ಅವಧಿಗೆ ಸಾರ್ವಜನಿಕರು ದತ್ತು ಸ್ವೀಕರಿಸಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ. ಕೋಲ್ಕತ್ತದ ಎಸ್. ಪ್ರೇಶಿತ್ ಅವರು 7500 ಪಾವತಿಸಿ ರೆಡ್ ಬಿಲ್ಡ್ ಟೋಕನ್, ಮೈಸೂರಿನ ಆರ್. ದೀಪಕ್ ಅಲನ್ ಅವರು 3500 ಪಾವತಿಸಿ ಕಿಂಗ್ ಕ್ರೋಬಾ, ಬೆಂಗಳೂರಿನ ಮಾನಸ್ ಪಾಲ್ ಅವರು 3500 ಪಾವತಿಸಿ ಬಿಳಿ ನವಿಲು ಹಾಗೂ ಮೈಸೂರಿನ ಎಸ್. ರಂಜನ್ ಅವರು 13 ಸಾವಿರ ಪಾವತಿಸಿ ಲವ್ ಬರ್ಡ್, ಸ್ಟಾರ್ ಟಾರ್ಟೈಸ್ ಹಾಗೂ ಕ್ಯಾಸೊವರಿ ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದು, ಇವರೆಲ್ಲರಿಗೂ ಮೃಗಾಲಯ ಅಭಿನಂದಿಸಿದೆ ಎಂದಿದ್ದಾರೆ.
ಬಾಗೇಪಲ್ಲಿ ಶಾಸಕರಿಂದ ಆನೆ ದತ್ತು ಸ್ವೀಕಾರ
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ 45 ಸಾವಿರ ಪಾವತಿಸಿ, ಅಭಿಷೇಕ್ ಆನೆಯನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಅವರು ಶಾಸಕರನ್ನು ಅಭಿನಂದಿಸಿದ್ದಾರೆ.