ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

23ರಂದು ಸಭೆ

Srinivasa Murthy VN
Updated On : 20 Oct 2013, 11:58 am

ಕೆ.ಆರ್.ನಗರ: ಕನ್ನಡ ರಾಜ್ಯೋತ್ಸವ ಆಚರಣೆಯ ಸಂಬಂಧ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಅ.23ರ ಮಧ್ಯಾಹ್ನ 3ಕ್ಕೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕರೆಯಲಾಗಿದೆ. ಶಾಸಕ ಸಾ.ರಾ. ಮಹೇಶ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಜನಪ್ರತಿಧಿಗಳು, ವಿವಿದ ಸಂಘ- ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಬೇಕು ಎಂದು ಕೋರಲಾಗಿದೆ.

ಪದಾಧಿಕಾರಿಗಳ ಆಯ್ಕೆ
ಪಿರಿಯಾಪಟ್ಟಣ: ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಹೆಮ್ಮಿಗೆ ಚಂದ್ರಶೆಟ್ಟಿ ಹಾಗೂ ಹಳೇಪೇಟೆ ಕಂಠಾಪುರದ ಅಣ್ಣಯ್ಯಪ್ಪ ಅವರನ್ನು ನೇಮಿಸಲಾಗಿದೆ ಎಂದು ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ತಾ. ಅಧ್ಯಕ್ಷ ಎ.ಸಿ. ಪ್ರಸನ್ನ ತಿಳಿಸಿದ್ದಾರೆ. ಸೋಹನ್‌ಕುಮಾರ್ ಪಿರಿಯಾಪಟ್ಟಣ(ಪ್ರ. ಕಾರ್ಯದರ್ಶಿ), ಜಯರಾಮೇಗೌಡ ರಾಜನ ಬಿಳುಗೂಲಿ, ಅಶ್ವತ್ ಮುತ್ತೂರು, ಸತ್ಯನಾರಾಯಣ ಚೌಡನಹಳ್ಳಿ, ಹರೀಶ್ ಹಿಟ್ನನಹಳ್ಳಿ(ಕಾರ್ಯದರ್ಶಿಗಳು), ಎಂ.ಕೆ. ಕುಮಾರ ಮೂಡಲಕೊಪ್ಪಲು(ಖಜಾಂಚಿ), ಕೆಪರಾಜ ಅರಸ್ ಬೆಳತೂರು, ದಶರಥ ವಡ್ಡರಹಳ್ಳಿ, ಕುಮಾರ್ ಆಲನಹಳ್ಳಿ, ಹರೀಶ ಹಿಟ್ಟನಹಳ್ಳಿ, ಗಣೇಶ ಗೊರಳ್ಳಿ, ಪವಿ ಆಯತನಹಳ್ಳಿ, ರಾಜು ಬಿಲ್ಲಳ್ಳಿ, ರವಿಗೌಡ ಬಾರಸೆಕೊಪ್ಪಲು, ಹನುಮಂತ ಪಿರಿಯಾಪಟ್ಟಣ, ಅಶೋಕ ಸೋಳೆಕೋಟೆ(ಕಾರ್ಯಕಾರಣಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.

ನಾಳೆ ವಾಲ್ಮೀಕಿ ಜಯಂತಿ
ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಅ.22ರ ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟಿಸುವರು. ಕುಲಪತಿ ಡಾ. ಹನುಮಣ್ಣ ನಾಯಕ ದೊರೆ ಅಧ್ಯಕ್ಷತೆ ವಹಿಸಲಿದ್ದು, ಪ್ರೊ. ಕಾಳೇಗೌಡ ನಾಗವಾರ, ವೈ.ಎಂ. ಪುಟ್ಟಣ್ಣಯ್ಯ ಭಾಗವಹಿಸುವರು.

ಲಾನ್ ಟೆನ್ನಿಸ್ ಪಂದ್ಯಾವಳಿ
ಮೈಸೂರು: ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ವಿಭಾಗವು ಅ.23ರಿಂದ 25ರವರೆಗೆ ಚಾಮರಾಜಪುರಂನಲ್ಲಿರುವ ಮೈಸೂರು ಟೆನಿಸ್ ಕ್ಲಬ್‌ನಲ್ಲಿ ರಾಜ್ಯ ಮಟ್ಟದ ಲಾನ್ ಟೆನ್ನಿಸ್ ಪಂದ್ಯಾವಳಿ ಆಯೋಜಿಸಿದ್ದು, ಅ.23ರ ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸುವರು. ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದು, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಮೇಯರ್ ಎನ್.ಎಂ. ರಾಜೇಶ್ವರಿ ಭಾಗವಹಿಸುವರು.

ಜೀವನ ಗಂಗಾ ಅಧ್ಯಯನ ವ್ರತ
ಮೈಸೂರು: ರಾಮಕೃಷ್ಣನಗರದಲ್ಲಿರುವ ಶಾರದಾದೇವಿ ವಿಶ್ವ ಭಾವೈಕ್ಯ ಆಶ್ರಮದಲ್ಲಿ ಅ.25ರ ಸಂಜೆ 5.30ಕ್ಕೆ ಶಾರದಾದೇವಿ ಜೀವನ ಗಂಗಾ ಅಧ್ಯಯನ ವ್ರತ ಪೂಜಾ ಕಾರ್ಯಕ್ರಮ ಏರ್ಪಡಿಸಿದ್ದು, ಆಸಕ್ತರು ಅ.23ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 94837 84398 ಸಂಪರ್ಕಿಸಬಹುದು.

ತರಬೇತಿ
ಮೈಸೂರು: ನವೋದಯ ಫೌಂಡೇಶನ್ ವತಿಯಿಂದ ಐಬಿಪಿಎಸ್, ರಾಷ್ಟ್ರೀಕೃತ ಬ್ಯಾಂಕುಗಳ ಪ್ರೋಬೇಷನರಿ ಮತ್ತು ಕ್ಲರ್ಕ್ ಹುದ್ದೆಗೆ 45 ದಿನಗಳ ತರಬೇತಿ ಆಯೋಜಿಸಿದೆ. ಆಸಕ್ತರು ಅ.22ರೊಳಗೆ ಪ್ರತಿದಿನ ಸಂಜೆ 6ರಿಂದ 8ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ವಿವರಕ್ಕೆ ಮೊ. 97418 69722 ಸಂಪರ್ಕಿಸಬಹುದು.

ಅಧ್ಯಯನ ಶಿಬಿರ
ಮೈಸೂರು: ಗೋಕುಲಂ 3ನೇ ಹಂತದಲ್ಲಿರುವ ಸುರಭಿ ಗಾನ ಕಲಾಮಂದಿರದ ಚಾರಿಟಬಲ್ ಟ್ರಸ್ಟ್‌ನಲ್ಲಿ ಅ.21ರಿಂದ 27ರವರೆಗೆ ಮುತ್ತುಸ್ವಾಮಿ ದೀಕ್ಷಿತರ ಸರಳ, ಸುಂದರ ಕೃತಿಗಳ ಶಿಬಿರ ನಡೆಯಲಿದ್ದು, ಆಸಕ್ತರು ಮೊ. 94806 38815 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement