ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೀರಿನ ಸಮಗ್ರ ಪೂರೈಕೆಗೆ ಎಸ್‌ಡಿಪಿಐ ಆಗ್ರಹ

Srinivasa Murthy VN
Updated On : 20 Oct 2013, 11:56 am

ಕ.ಪ್ರ.ವಾರ್ತೆ ಮೈಸೂರು ಅ. 20
ನಗರ ವ್ಯಾಪ್ತಿಯ ವಿದ್ಯಾನಗರ, ಜೆಎಸ್‌ಎಸ್ ಬಡಾವಣೆ, ಗುರುರಾಜ ಬಡಾವಣೆ, ಸಿದ್ದಾರ್ಥನಗರ, ರಾಘವೇಂದ್ರನಗರ, ಕುರುಬಾರಹಳ್ಳಿ, ಯರಗನಹಳ್ಳಿ, ಆಲನಹಳ್ಳಿ, ಕಲ್ಯಾಣಗಿರಿ, ಗಿರಿಯ ಭೋವಿಪಾಳ್ಯ ಸೇರಿದಂತೆ ವಿವಿಧೆಡೆ ವಾಸಿಸುತ್ತಿರುವ ನಾಗರಿಕರಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ. ಈ ಎಲ್ಲಾ ನಾಗಕರಿಕರು ಕಳೆದ ಆರು ತಿಂಗಳಿನಿಂದ ನೀರಿಲ್ಲದೆ ಪರದಾಡುವಂತಾಗಿದೆ. ನಾಗರಿಕರು ನಿರಂತರ ಹೋರಾಟ ನಡೆಸುತ್ತಿದ್ದರೂ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಾಗಲೀ ಅಥವಾ ಶಾಸಕರಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಶಾಸಕ ತನ್ವೀರ್ ಸೇಠ್ ನೀರು ಒದಗಿಸುವ ಬದಲಾಗಿ ವೈನ್ ಮೇಳ ಉದ್ಘಾಟಿಸಲು ಉತ್ಸುಕರಾಗಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಟೀಕಿಸಿದ್ದಾರೆ. ಒಂದು ವಾರದೊಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸದಿದ್ದಲ್ಲಿ ನೀರು ಸರಬರಾಜು ಮಂಡಳಿ, ಶಾಸಕರ ಕಚೇರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಸಿದ್ದಾರೆ.

ಕೃತ ಕಾಲಿಗೆ ಅಳತೆ ನೀಡಲು ಮನವಿ
ಕ.ಪ್ರ.ವಾರ್ತೆ ಮೈಸೂರು ಅ. 20
ಜೈನ್ ಶ್ವೇತಾಂಬರ್ ತೇರಾಪಂತ್ ಮಹಿಳಾ ಮಂಡಲ್ ತುಲಸಿಜೀ ಜನ್ಮ ಶತಾಬ್ದಿಯ ಅಂಗವಾಗಿ ಅಂಗವಿಕಲರಿಗೆ ಕೃತಕ ಕಾಲುಗಳನ್ನು ನ.6ರಂದು ವಿತರಿಸಲು ನಿರ್ಧರಿಸಿದ್ದು, ಅರ್ಹರು ತಮ್ಮ ಕೃತಕ ಕಾಲಿನ ಅಳತೆಯನ್ನು ನೀಡುವಂತೆ ಕೋರಲಾಗಿದೆ. ಅರ್ಹ ಫಲಾನುಭವಿಗಳು ಅ.24ರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಜೈನ್ ಶ್ವೇತಾಂಬರ್ ತೆರಾಪಂತ್ ಮಹಿಳಾ ಮಂಡಲ್, ತೆರಾಪಂತ್ ಸಭಾ ಭವನ್, ಎಂ.ಜಿ. ರಸ್ತೆ, ಕೆ.ಆರ್. ಮೊಹಲ್ಲಾ, ಮೈಸೂರು- 570 004. ಇಲ್ಲಿಗೆ ಬಂದು ಅಳತೆ ನೀಡಬಹುದು. ವಿವರಕ್ಕೆ ದೂ. 0821- 2525600, 2525218, ಮೊ. 77607 58861 ಸಂಪರ್ಕಿಸಬಹುದು ಎಂದು ಅಧ್ಯಕ್ಷೆ ಸಂತೋಷ್ ಕೋಠಾರಿ, ಮಂತ್ರಿ ಅನಿತಾ ಕಠಾರಿ ತಿಳಿಸಿದ್ದಾರೆ.

50ಕ್ಕೂ ಹೆಚ್ಚು ಮಂದಿ ರಕ್ತದಾನ
ಮೈಸೂರು: ಸಿಂಡಿಕೇಟ್ ಬ್ಯಾಂಕ್ 88ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬ್ಯಾಂಕಿನ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎನ್. ಮಧುರ್ ಭೂತೇಶ್ವರನ್ ಸ್ವಯಂಪ್ರೇರಿತ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ವಿವಿಧ ಶಾಖೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಗ್ರಾಹಕರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ನಂತರ ನಡೆದ ಗ್ರಾಹಕರ ಸಭೆಯಲ್ಲಿ ಮಧುರ್ ಭೂತೇಶ್ವರನ್ ಬ್ಯಾಂಕಿನ ಯೋಜನೆಗಳನ್ನು ತಿಳಿಸಿದರು. ಮಂಡ್ಯದ ಹೇಮನಹಳ್ಳಿ ಹಾಗೂ ಹಾಸನದ ಶಂಕರನಹಳ್ಳಿಯಲ್ಲಿ ಹೊಸ ಶಾಖೆ ತೆರೆಯುತ್ತಿರುವ ಬಗ್ಗೆ ಸಂತಸ ಹಂಚಿಕೊಂಡರು.

ಇಂದು ಅಂಗವಿಕಲರ ಧರಣಿ
ಮೈಸೂರು: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ವೇದಿಕೆಯಿಂದ ಅ.21ರ ಬೆಳಗ್ಗೆ 11.30ಕ್ಕೆ ನಗರದ ಡಿ. ಸುಬ್ಬಯ್ಯ ರಸ್ತೆಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಎದುರು ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಸಂಚಾಲಕ ವಾಟಾಳ್ ಬಸವರಾಜ್ ತಿಳಿಸಿದ್ದಾರೆ. ಮೊ. 74111 46205 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement