ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವಸಹಾಯ ಸಂಘಗಳ ಒಕ್ಕೂಟ ಉದ್ಘಾಟನೆ

Srinivasa Murthy VN
Updated On : 20 Oct 2013, 11:57 am

ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಅ. 20
ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನೂತನ ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಘಾಟನಾ ಸಮಾರಂಭವು ಭಾನುವಾರ ಜರುಗಿತು.
ಸರಗೂರು ವಿರಕ್ತ ಮಠಾಧ್ಯಕ್ಷ ಮಹದೇವ ಸ್ವಾಮೀಜಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಶ್ರೀಕ್ಷೇತ್ರದ ಕಾರ್ಯಕ್ರಮದಿಂದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಸಮಾನತೆ, ಶಿಸ್ತು, ಸಂಯಮದಿಂದ ಸಂಘಗಳನ್ನು ನಡೆಸುವಂತೆ ಸಲಹೆ ನೀಡಿದರು.
ಮೈಸೂರು ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಗಂಗಾಧರ್ ಮಾತನಾಡಿ, ಒಕ್ಕೂಟದ ಪದಗ್ರಹಣ, ಪದಾಧಿಕಾರಿಗಳ ಜವಾಬ್ದಾರಿ, ಸಂಘದ ಸದಸ್ಯರು ಪಡೆದ ಪ್ರಗತಿ ನಿಧಿ ಸಾಲವನ್ನು ಸದ್ವಿನಿಯೋಗ ಮಾಡಬೇಕು. ಯೋಜನೆಯ ಕಾರ್ಯಕ್ರಮ ಅನುಷ್ಠಾನ ಮಾಡುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ, ಬಾಲ್ಯ ವಿವಾಹದಿಂದ ಆಗುವ ತೊಂದರೆಗಳು, ಕಾನೂನು ಸಮಸ್ಯೆಗಳು, ಜನನ-ಮರಣ ನೋಂದಣಿ, ಆಸ್ತಿಯ ಹಕ್ಕು ಕುಟುಂಬದ ಎಲ್ಲಾ ಸದಸ್ಯರುಗಳಿಗೆ ಸಮಾನವಾಗಿರುತ್ತದೆ. ಆಸ್ತಿ ಪತ್ರಕ್ಕೆ ಸಂಬಂಧಿಸಿದಂತೆ ವಾದ-ವಿವಾದಗಳನ್ನು ಮಾಡುವುದರ ಬದಲಾಗಿ ಸಮನಾಗಿ ಹಂಚಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಸಂಯೋಜಕ ಉಮಾರಬ್ಬ ಮಾತನಾಡಿ, ತಾಲೂಕಿನಲ್ಲಿ 2250 ಸ್ವಸಹಾಯ ಸಂಘ, ಪ್ರಗತಿ ಬಂಧು ಸಂಘಗಳು ರಚನೆಯಾಗಿದ್ದು, ಬೇಡಿಕೆಗಳಿಗೆ ಅನುಗುಣವಾಗಿ 15 ಕೋಟಿ ಸಾಲ ನೀಡಲಾಗಿದೆ. ಈ ಸಾಲದಿಂದ ಶೌಚಾಲಯ, ಮನೆಯ ರಿಪೇರಿ, ಕೃಷಿ ಕೆಲಸಗಳು, ಹೈನುಗಾರಿಕೆ, ಸೋಲಾರ್ ಅಳವಡಿಕೆ ಮುಂತಾದ ಕಾರ್ಯಕ್ರಮದಲ್ಲಿ ವಿನಿಯೋಗಿಸಲಾಗಿದೆ. ತಾಲೂಕಿನ 1 ಸಾವಿರ ಶೌಚಾಲಯಗಳಿಗೆ ಸಂಸ್ಥೆಯ ವತಿಯಿಂದ ತಲಾ 1 ಸಾವಿರ ಅನುದಾನವಾಗಿ ನೀಡಲಾಗಿದೆ ಎಂದು ತಿಳಿಸಿದರು.
ಹನುಮಂತ ಭೋವಿ ಅಧ್ಯಕ್ಷತೆ ವಹಿಸಿದ್ದರು. ಬಿದರಹಳ್ಳಿ ಗ್ರಾಪಂ ಅಧ್ಯಕ್ಷ ರತ್ನಾಕರ, ವೆಂಕಟೇಶ್, ಯೋಜನೆ ಸಿಬ್ಬಂದಿ ಸದಾಶಿವ ನಾಯಕ್, ವೇಣುಗೋಪಾಲ್ ಇದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಲಾರಿ ಡಿಕ್ಕಿ; ಬೈಕ್ ಸವಾರ ಸಾವು
ಹುಣಸೂರು: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಹಾಗೂ ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬನ್ನಿಕುಪ್ಪೆ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ಕೇರಳ ರಾಜ್ಯದ ಕಣ್ಣೂರು ನಿವಾಸಿ ಶಶಿಕುಮಾರ್ ಎಂಬವರ ಪುತ್ರ ಸುಹಾಸ್(21) ಮೃತಪಟ್ಟವರು. ಈತನೊಂದಿಗಿದ್ದ ತ್ರೀವೇಂಡ್ರಂ ನಿವಾಸಿ ವಿವೇಕ್ ಮ್ಯಾಥ್ಯೂ ತೀವ್ರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಹಾಸ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದು, ತನ್ನ ಬೈಕಿನಲ್ಲಿ ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ ಬನ್ನಿಕುಪ್ಪೆ ಬಳಿ ಎದುರಿನಿಂದ ಬಂದ ಲಾರಿಗೆ ಡಿಕ್ಕಿಯಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಈ ಸಂಬಂಧ ಬಿಳಿಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement