ಆಧುನಿಕ ತಂತ್ರಜ್ಞಾನ ಸದ್ಬಳಕೆ ಮಾಡಿಕೊಳ್ಳಿ: ರಮೇಶ್
ಕ.ಪ್ರ.ವಾರ್ತೆ ರಾವಂದೂರು ಅ. 21
ಆಧುನಿಕ ತಂತ್ರಜ್ಞಾನಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜ್ಞಾನಾರ್ಜನೆಗೆ ಮುಂದಾಗಬೇಕು ಎಂದು ಪ್ರಾಂಶುಪಾಲ ಟಿ.ಟಿ. ರಮೇಶ್ ತಿಳಿಸಿದರು.
ಪಿರಿಯಾಪಟ್ಟಣದ ಹಂಡಿತವಳ್ಳಿ ಗ್ರಾಮದಲ್ಲಿ ರಾವಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮೊಬೈಲ್, ಇಂಟರ್ನೆಟ್ನಂತಹ ಆಧುನಿಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳು ಮನರಂಜನೆಗೆ, ಕಾಲಹರಣಕ್ಕೆ ಮತ್ತಿತರರ ಕೆಲಸಗಳಿಗೆ ದುರ್ಬಳಕೆ ಮಾಡಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ತಾಪಂ ಸದಸ್ಯ ಆರ್.ಸಿ. ಚಂದ್ರು ಮಾತನಾಡಿದರು. ನಿವೃತ್ತ ಶಿಕ್ಷಕ ಪುಟ್ಟಪ್ಪ, ಪ್ರಾಚಾರ್ಯ ಕೆ.ಪಿ. ಜಗನ್ನಾಥರಾವ್ ಜೋಷಿ, ತಾಪಂ ಸದಸ್ಯೆ ಚಿಕ್ಕೆಗೌಡ ಸಾಕಮ್ಮ, ಗ್ರಾಪಂ ಸದಸ್ಯ ಮಲ್ಲೇಶ್, ಶಿಬಿರಾಧಿಕಾರಿ ರಾಜೀವ್, ಬಿ. ರಾಜೇಶ್, ಖಲೀಲುಲ್ಲಾ ಖಾನ್, ಉಪನ್ಯಾಸಕ ಬಿ.ಎಸ್. ರಮೇಶ್, ಸಿ. ರವಿ ಇದ್ದರು.
ವೀರಶೈವ ಒಡೆಯುವ ಪ್ರಯತ್ನ
ರಾವಂದೂರು: ಇತ್ತಿಚಿನ ದಿನಗಳಲ್ಲಿ ವೀರಶೈವ ಸಮಾಜವನ್ನು ಕೆಲವು ಕಿಡಿಗೇಡಿಗಳು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾನಸ ಸೇವಾ ಸಂಸ್ಥೆ ಕಾರ್ಯದರ್ಶಿ ಆರ್.ಎಸ್. ಮಹೇಶ್ ಆತಂಕ ವ್ಯಕ್ತಪಡಿಸಿದರು.
ರಾವಂದೂರಿನಲ್ಲಿ ನಡೆದ 206ನೇ ಮಾಸಿಕ ಶರಣರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಶೈವ ಧರ್ಮ ಕಂಡು ಬಹತೇಕರು ಆಕರ್ಷಿತರಾಗುತ್ತಿರುವಾಗ ಸಮಾಜದಲ್ಲಿರುವರೆ ಒಡಕು ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಸಮಾಜದಲ್ಲಿ ಒಗ್ಗಟ್ಟು ತರುವ ಪ್ರಯತ್ನವಾಗಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿದರು. ಇದೇ ವೇಳೆ ರಾಜ್ಯ ಉತ್ತಮ ಪ್ರೇರಕ ಪ್ರಶಸ್ತಿ ಪಡೆದ ಪ್ರೇರಕ ಮುಕುಂದ ಅವರನ್ನು ಸನ್ಮಾನಿಸಲಾಯಿತು. ರಘು, ಅಶೋಕ್, ತಾರಾದೇವಿ, ಲಲಿತ, ಸರ್ವಮಂಗಳಮ್ಮ ಇದ್ದರು.