ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪರಿಸರವಿದ್ದಲ್ಲಿ ಮನುಕುಲ ಉಳಿವು: ಹರ್ಷ ಅಭಿಮತ

Srinivasa Murthy VN
Updated On : 22 Oct 2013, 12:24 pm

ಕ.ಪ್ರ.ವಾರ್ತೆ ಹುಣಸೂರು ಅ. 21
ಪರಿಸರವನ್ನು ಉಳಿಸಿಕೊಂಡಲ್ಲಿ ಮಾತ್ರ ಮನುಕುಲ ಭೂಮಿಯ ಮೇಲೆ ಬದುಕಬಲ್ಲದೆಂಬುದನ್ನು ಮಾನವ ಜನಾಂಗ ಅರಿಯಬೇಕಾಗಿದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಟಿ.ಎಸ್. ಹರ್ಷ ಅಭಿಪ್ರಾಯಪಟ್ಟರು.
ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕವು ತಾಲೂಕಿನ ಬೀಜಗನಹಳ್ಳಿ ಗ್ರಾಪಂ ವ್ಯಾಪ್ತಿಯ ಉಯಿಗೌಡನಹಳ್ಳಿಯಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, ಭೂಮಿಯ ಮೇಲಿನ ಜೀವಸಂಕುಲಕ್ಕೆ ಆಹಾರ ಸರಪಳಿಯನ್ನು ನೀಡುವ ಪರಿಸರವನ್ನು ಮಾನವ ಹಾಳುಗೆಡವುತ್ತಿದ್ದಾನೆ. ಅದರಲ್ಲೂ ಪಟ್ಟಣದ ಜನತೆಯಂತೂ ಕೇವಲ ಮಹಡಿಮನೆ, ನಿವೇಶನ ಮಾಡುವಲ್ಲೇ ಸಾರ್ಥಕತೆ ಹೊಂದುತ್ತಿದ್ದಾರೆ ಹೊರತು ಪರಿಸರ ಉಳಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ವಿಷಾದಿಸಿದರು.
ಶಿಬಿರ ಉದ್ಘಾಟಿಸಿದ ಬನ್ನಿಕುಪ್ಪೆ ಜಿಪಂ ಸದಸ್ಯ ರಮೇಶ್ ಮಾತನಾಡಿ, ಎನ್‌ಎಸ್‌ಎಸ್ ಶಿಬಿರ ಕೇವಲ ಗ್ರಾಮದ ಸ್ವಚ್ಛತೆಗೆ ಮಾತ್ರ ಸೀಮಿತವಾದುದಲ್ಲ. ಸಾಮಾಜಿಕ ಅನಿಷ್ಟಗಳನ್ನು ಅಳಿಸುವ ಹಾಗೂ ಪರಿಸರವನ್ನು ಉಳಿಸುವ ಕುರಿತು ಅರಿವು ಮೂಡಿಸುವ ಶಿಬಿರವಾಗಬೇಕಿದೆ ಎಂದು ಆಶಿಸಿದರು.
ಬೀಜಗನಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಡಾ. ಶ್ರೀನಾಥ್, ಡಾ. ವೃಷಬೇಂದ್ರಪ್ಪ, ಗ್ರಾಪಂ ಸದಸ್ಯೆ ಚನ್ನಮ್ಮ, ಶಿವಪ್ಪ, ಗ್ರಾಮದ ಮುಖಂಡರಾದ ಸೋಮಶೇಖರ್, ಕೆಂಡಗಣ್ಣಪ್ಪ, ಶಿವಪ್ಪ, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಎಸ್.ಎಸ್. ಸುದರ್ಶನ ಬಾಬು, ಅಧ್ಯಾಪಕ ಶಾಂತರಾಜು, ಆನಂದ್, ಆರ್. ಆನಂದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹನಗೋಡು ನಟರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement