ಬಸವರಾಜ ಅಧಿಕಾರ ಸ್ವೀಕಾರ
ಕ.ಪ್ರ.ವಾರ್ತೆ ಮೈಸೂರು ಅ. 22
ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿರುವ ಗಾಂಧಿ ಭವನದ ಗೌರವ ನಿರ್ದೇಶಕರಾಗಿ ಡಾ.ಎಂ.ಜಿ. ಬಸವರಾಜ ಅಧಿಕಾರ ಸ್ವೀಕರಿಸಿದ್ದಾರೆ.
ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಸವರಾಜ ಅವರು ಸೋಮವಾರ ನಿರ್ಗಮಿತ ಗೌರವ ನಿರ್ದೇಶಕಿ ಪ್ರೊ.ಸುಗೀತ ಸುವರ್ಣ ಅವರಿಂದ ಅಧಿಕಾರ ಸ್ವೀಕರಿಸಿದರು.
ಡಾ.ಬಸವರಾಜ ಅವರು ಈ ಹಿಂದೆಯೇ ಡಿಪ್ಲೊಮಾ ಇನ್ ಗಾಂಧಿಯನ್ ಸ್ಟಡೀಸ್ ಪದವಿ ಪಡೆದಿದ್ದಾರೆ. ಅವರು ಗಾಂಧಿಭವನದ ಮಾನ್ಯತೆ ಪಡೆದ ಸಂಶೋಧನಾ ಮಾರ್ಗದರ್ಶಕರಲ್ಲಿ ಮೊದಲಿಗರು. ಇವರ ಮಾರ್ಗದರ್ಶನದಲ್ಲಿ ಗಾಂಧಿ ಭವನದ ಮೊದಲ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ. ಅಲ್ಲದೆ, ಗಾಂಧೀಜಿ ವಿಚಾರದಲ್ಲಿ ಇನ್ನೂ ಕೆಲವು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿಎಚ್.ಡಿಗಾಗಿ ಸಂಶೋಧನೆ ನಡೆಸುತ್ತಿದ್ದಾರೆ.
ಗಾಂಧಿ ಭವನ ಗೌರವ ನಿರ್ದೇಶಕರಾಗಿ ತಮ್ಮನ್ನು ನೇಮಿಸಿದ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಪ್ರೊ.ಬಸವರಾಜ ಕೃತಜ್ಞತೆ ಸಲ್ಲಿಸಿದ್ದಾರೆ.
ಮಹಿಳೆ ನಾಪತ್ತೆ
ಮೈಸೂರು: ಮಂಡಿ ಠಾಣೆ ವ್ಯಾಪ್ತಿಯ ನಿವಾಸಿ ಮೋಹನ್ಕುಮಾರ್ ಎಂಬವರ ಪತ್ನಿ ಆಶಾರಾಣಿ (35) ನಾಪತ್ತೆಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಅ.16 ರಂದು ಆಶಾರಾಣಿ ನಾಪತ್ತೆಯಾಗಿದ್ದಾರೆ. ಚಹರೆ- 5.3 ಅಡಿ ಎತ್ತರ, ತೆಳು ಬಿಳಿ ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418113, 313 ಸಂಪರ್ಕಿಸಲು ಮಂಡಿ ಠಾಣೆ ಎಎಸ್ಐ ಎಸ್.ಎ. ಕೆಂಪೇಗೌಡ ಕೋರಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು
ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆ ನಂದಿನಿ ಹಾಲಿನ ಕೇಂದ್ರದ ಮುಂಭಾಗದ ಸಬ್ವೇನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಚಹರೆ- 48 ವರ್ಷ, 5.5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಕಣ್ಣಿನ ಉಬ್ಬಿನ ಮೇಲೆ ಹಳೆಯ ಗಾಯದ ಗುರುತು, ಮೂಗಿನ ಮೇಲೆ ಕಪ್ಪು ಚುಕ್ಕೆ ಇದೆ. ಚೌಕಳಿ ಆಕಾರದ ಶರ್ಟ್ ಧರಿಸಿದ್ದಾರೆ. ದೂ.0821- 2418306 ಸಂಪರ್ಕಿಸಿ.