ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾರ್ಮಿಕರಲ್ಲಿ ಕಾರ್ಯಕ್ಷಮತೆ ಕೊರತೆ

Srinivasa Murthy VN
Updated On : 23 Oct 2013, 11:53 am

ಮೈಸೂರು: ಜಾಗತಿಕ ಮಟ್ಟದಲ್ಲಿ ಭಾರತದ ಉತ್ಪಾದನೆಗಳಿಗೆ ಬೇಡಿಕೆ ಕಡಿಮೆಯಾಗಲು ಕಾರ್ಮಿಕರಲ್ಲಿನ ಕಾರ್ಯಕ್ಷಮತೆಯ ಕೊರತೆ ಕಾರಣ ಎಂದು ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯ ಪ್ರಾಧ್ಯಾಪಕ ಡಾ.ಬಿ. ಮಹದೇವನ್ ಅಭಿಪ್ರಾಯಪಟ್ಟರು.
ಭಾರತೀಯ ಕೈಗಾರಿಕಾ ಒಕ್ಕೂಟವು ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಶ್ವದರ್ಜೆ ಉತ್ಪಾದನೆಗೆ ಶ್ರೇಷ್ಠ ಕಾರ್ಯಾಚರಣೆ ಕುರಿತು ಮಾತನಾಡಿದ ಅವರು, ಭಾರತದ ಉತ್ಪಾದನೆಗಳಿಗೆ ಬೇಡಿಕೆ ಕಡಿಮೆಯಾಗಲು ಇಲ್ಲಿನ ನಾಯಕತ್ವ ಕೊರತೆ, ರಾಜಕೀಯ ವಾತಾವರಣ ಇತ್ಯಾದಿ ಕಾರಣಗಳನ್ನು ನೀಡಲಾಗುತ್ತದೆ. ಆದರೆ, ಇದಕ್ಕಿಂತಲೂ ಮುಖ್ಯವಾದದ್ದು ಎಂದರೆ ಕಾರ್ಮಿಕರ ಕಾರ್ಯಕ್ಷಮತೆ, ಸಮಯಪಾಲನೆ ಇಲ್ಲದಿರುವುದೇ ಆಗಿದೆ ಎಂದರು.
2005ನೇ ಇಸವಿಯಲ್ಲಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಯಿದೆಯನ್ನು ಜಾರಿಗೆ ತಂದು ಅಧ್ವಾನ ಮಾಡಿದರ ಪರಿಣಾಮವಾಗಿ ಚೀನಾ ಮತ್ತು ದಕ್ಷಿಣ ಕೋರಿಯಾ ದೇಶದ ಜವಳಿ ಉದ್ಯಮ ವೇಗವಾಗಿ ಬೆಳೆಯಿತು. ಭಾರತವು ಜವಳಿ ವಸ್ತುಗಳನ್ನು ವರ್ಷದಲ್ಲಿ 60 ರಿಂದ 120 ದಿನಗಳ ಕಾಲಾವಕಾಶ ಪಡೆದು ರಫ್ತು ಮಾಡಿದರೆ, ಚೀನಾ ಕೇವಲ 30 ರಿಂದ 45 ದಿನಗಳೊಳಗೆ ಮಾಡಿ ಮುಗಿಸುತ್ತದೆ. ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಂತಿಕೆ ಇಲ್ಲದಿರುವುದು ಗೋಚರಿಸುತ್ತದೆ. ಯಾವುದೇ ದೃಷ್ಟಿಕೋನವನ್ನು ಬೆಳೆಸುತ್ತಿಲ್ಲ. ಸಮಯ ಪಾಲನೆಯಂತೂ ಇಲ್ಲವೇ ಇಲ್ಲ ಎಂದು ಅವರು ವಿಷಾದಿಸಿದರು. ಟೊಯೊಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಟಿ.ಆರ್. ಪರಶುರಾಮನ್, ಟಿವಿಎಸ್ ಮೋಟಾರ್ ಕಂಪನಿಯ ಉಪಾಧ್ಯಕ್ಷ ವಿ.ಕೆ. ಷಣ್ಮುಗಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement