ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗೀತಾಗೆ ಡಾಕ್ಟರೇಟ್

Srinivasa Murthy VN
Updated On : 2 Sept 2013, 12:43 pm

ಮೈಸೂರು: ಡಾ.ಎಸ್.ಎಲ್. ಬೆಳಗಲಿ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಕೆ.ಎಸ್. ಗೀತಾ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ, ಪರಿಸರ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ಇವರು ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ.

ಇಂದು ಬಿಜೆಪಿ ಪ್ರತಿಭಟನೆ
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಬಿಜೆಪಿ ಸೆ.2ರ ಬೆಳಗ್ಗೆ 11ಕ್ಕೆ ನಗರದ ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ನಗರಾಧ್ಯಕ್ಷ ಇ. ಮಾರುತಿರಾವ್ ಪವಾರ್ ತಿಳಿಸಿದ್ದಾರೆ.

ವಿದ್ಯುತ್ ತಂತಿ ಸ್ಪರ್ಶ: ವ್ಯಕ್ತಿ ಸಾವು
ಮೈಸೂರು: ಸೊಪ್ಪು ತರಲು ಹೋಗಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ತಂತಿ ಸ್ಪರ್ಶಗೊಂಡು ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮೈಸೂರು ತಾಲೂಕು ಮೊಸಂಬಾಯಹಳ್ಳಿ ನಿವಾಸಿ ಮರಿಗೌಡ ಎಂಬವರ ಪುತ್ರ ಬಸವರಾಜ (24) ಮೃತಪಟ್ಟವರು. ಇವರು ಮಧ್ಯಾಹ್ನ ಸೊಪ್ಪು ತರಲು ಮರಕ್ಕೆ ಹತ್ತಿದ್ದ ವೇಳೆ ಹಸಿ ಸೊಪ್ಪು ಪಕ್ಕದಲ್ಲಿದ್ದ ವಿದ್ಯುತ್ ತಂತಿಗೆ ತಗುಲಿ ಮೃತಪಟ್ಟಿದ್ದಾರೆ.

ರಸ್ತೆ ಬದಿಯಲ್ಲಿ ವ್ಯಕ್ತಿಯ ಶವ ಪತ್ತೆ
ವ್ಯಕ್ತಿಯೊಬ್ಬರ ಮೃತದೇಹವು ರಸ್ತೆ ಬದಿಯಲ್ಲಿ ಭಾನುವಾರ ಮುಂಜಾನೆ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಅಶೋಕಪುರಂ 3ನೇ ಕ್ರಾಸ್ ನಿವಾಸಿ ಶಿವನಾಗಲಿಂಗಯ್ಯ ಎಂಬವರ ಪುತ್ರ ಶಿವಪ್ರಸಾದ್ (36) ಮೃತಪಟ್ಟವರು. ಪೇಂಟಿಂಗ್ ಕೆಲಸ ಮಾಡಿಕೊಂಡಿರುವ ಇವರಿಗೆ ಮದುವೆ ಆಗಿರಲಿಲ್ಲ. ಇವರ ರಕ್ತಸಿಕ್ತ ಮೃತದೇಹವು ಮಾನಂದವಾಡಿ ರಸ್ತೆ ಎನ್‌ಐಇ ವಜ್ರಮಹೋತ್ಸವ ಕ್ರೀಡಾ ಸಮುಚ್ಚಯ ಗೇಟ್ ಬಳಿ ಪತ್ತೆಯಾಗಿದೆ. ರಸ್ತೆಬದಿಯಲ್ಲಿ ಶವ ಪತ್ತೆಯಾಗಿದ್ದರಿಂದ ಯಾವುದೋ ಅಪರಿಚಿತ ವಾಹನ ಡಿಕ್ಕಿಯಾಗಿ ಪರಾರಿ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ಅರ್ಜಿ ಆಹ್ವಾನ
ಕೆ.ಆರ್. ನಗರ: ಅಚ್ಚುತ ಸ್ನೇಹ ಬಳಗದಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2013-14ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ಪ. ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಅರ್ಜಿಗಳನ್ನು ಪಟ್ಟಣದ 7ನೇ ರಸ್ತೆಯಲ್ಲಿರುವ ಬಳಗದ ಕಚೇರಿಗೆ ಸಲ್ಲಿಸುವಂತೆ ಕೋರಲಾಗಿದೆ. ಮೊ. 98456 87458 ಸಂಪರ್ಕಿಸಬಹುದು.

ಬಂದ್ ಆಗಿರುವ ಶೌಚಾಲಯ
ಹ್ಯಾಂಡ್‌ಪೋಸ್ಟ್: ಎಚ್.ಡಿ. ಕೋಟೆ ತಾಲೂಕಿನ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಹೈಟೆಕ್ ಶೌಚಾಲಯ ಕಳೆದ ನಾಲ್ಕು ತಿಂಗಳಿಂದ ಬಾಗಿಲು ಮುಚ್ಚಿ, ಶೌಚಾಲಯ ಮುಂದೆ ಗಿಡಗಂಟೆಗಳು ಬೆಳೆದು ನಿಂತಿವೆ. ಸುಮಾರು 5 ವರ್ಷಗಳ ಹಿಂದೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹ್ಯಾಂಡ್‌ಪೋಸ್ಟ್‌ನ ಎಚ್.ಡಿ. ಕೋಟೆಗೆ ಹೋಗುವ ರಸ್ತೆಯಲ್ಲಿ ಈ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ ಈ ಶೌಚಾಲಯಕ್ಕೆ ಕನ್ನಡ ಭಾಷೆ ಮಾತನಾಡಲು ಬಾರದ ಹುಡುಗರನ್ನು ನೇಮಿಸಿ, ನಿರ್ವಹಣೆ ಮಾಡದೆ, ಮುಚ್ಚಲಾಗಿದೆ. ಪ್ರವಾಸೋದ್ಯಮ ಇಲಾಖೆಯವರು ಕೂಡಲೆ ಇತ್ತ ಗಮನಹರಿಸುವಂತೆ ಯರಹಳ್ಳಿ ಕಾವಲ್ ಗ್ರಾಪಂ ಸದಸ್ಯ ಕೃಷ್ಣ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement