ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಅಕ್ರಮ ಮರಳುಗಾರಿಕೆ ನಿಲ್ಲಿಸಿ'

Srinivasa Murthy VN
Updated On : 19 Sept 2013, 12:22 pm

ಟಿ. ನರಸೀಪುರ: ತಾಲೂಕಿನ ಪರಣಾಮಿಪುರ ಗ್ರಾಮದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮದ ಮುಖಂಡ ಕೆ.ವಿಜಯ್‌ಕುಮಾರ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಅಕ್ರಮ ಮರಳುಗಾರಿಕೆ ಪ್ರಶ್ನಿಸಿದರೆ ನಾಗರಾಜು ಮತ್ತು ಮಹದೇವು ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದಕ್ಕೆ ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ಅವರ ಬೆಂಬಲವಿದೆ. ಟೆಂಡರ್ ಆಗಿರುವ ಜಾಗದಲ್ಲಿ ಸರ್ಕಾರಿ ರಸ್ತೆಗಳನ್ನೇ ಮಾಡಿಲ್ಲ. ಈ ಬಗ್ಗೆ ತಹಸೀಲ್ದಾರ್ ಕೂಡ ಪರಿಶೀಲಿಸಿಲ್ಲ. ಕಾಳಿಹುಂಡಿ, ಕಾವೇರಿಪುರ ಮತ್ತು ಮೇದಿನ ಗ್ರಾಮಗಳಿಗೆ ರಸ್ತೆಗಳಿವೆ. ಆದರೂ, ಹಣ ಕೊಟ್ಟು ದಾರಿ ಮಾಡಿಕೊಂಡು ಮರಳು ಸಾಗಿಸುತ್ತಿದ್ದಾರೆ.
ಸಚಿವರ ಕೈವಾಡ: ಅಕ್ರಮ ಮರಳುಗಾರಿಕೆ ಹಿಂದೆ ಸಚಿವರೊಬ್ಬರ ಕೈವಾಡವಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇವರೆಲ್ಲ ಮುಗ್ಧ ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಕಿತ್ತೂರಿನಲ್ಲಿ ವಿಶ್ವಕರ್ಮ ಜಯಂತಿ
ಕಿತ್ತೂರು: ಅಮರಶಿಲ್ಪಿ ಜಕಣಾಚಾರಿಯವರ ತತ್ವ, ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾಯಕದಲ್ಲಿ ನಿರತರಾಗಿರಬೇಕೆಂದು ವರ್ತಕ ಕೆ.ಸಿ. ಮಹೇಶ್ ಹೇಳಿದರು.
ತಾಲೂಕಿನ ಕಿತ್ತೂರು ಗ್ರಾಮದಲ್ಲಿ 5ನೇ ವರ್ಷದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮದವರಿಗೆ ಸರ್ಕಾರದಿಂದ ಯಾವ ಸೌಲಭ್ಯಗಳು ದೊರಕುತ್ತಿಲ್ಲ. ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ನಮ್ಮ ಜನಾಂಗಕ್ಕೆ ಪ್ರಾಧಾನ್ಯತೆ ನೀಡಿ, ನಿಗಮ ಸ್ಥಾಪಿಸಿರುವುದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು. ಮುಖಂಡರಾದ ಕೆ.ಬಿ.ರವಿ, ಕೆ.ಎಂ. ಮಂಜು, ಪ್ರಸನ್ನಾಚಾರಿ, ನಾಗೇಶ್, ಸತೀಶ್, ವಿಠಲಾಚಾರಿ, ಕಾಂತರಾಜಾಚಾರಿ, ರಮೇಶಾಚಾರಿ, ಶೇಷಾಚಾರಿ, ಚಂದ್ರಾಚಾರಿ, ರವಿಕುಮಾರ್, ನರಸಿಂಹಾಚಾರಿ, ಸಂತೋಷ್, ಶಿವನಂಜಾಚಾರಿ, ಮಲ್ಲೇಶಾಚಾರಿ, ನಟರಾಜ್, ಕುಮಾರ್, ಸಣ್ಣಸೋಮಾಚಾರಿ, ಕೆ.ಬಿ. ನೀಲಕಂಠ, ರಾಜೇಂದ್ರ, ರಾಜು, ಅಣ್ಣಯ್ಯಶೆಟ್ಟಿ, ಮಲ್ಲೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement