ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಭೇರ್ಯ: ಜಿಪಂ ಅಧ್ಯಕ್ಷರಾಗಿ ಕೂರ್ಗಳ್ಳಿ ಮಹದೇವ್ ಮತ್ತು ಉಪಾಧ್ಯಕ್ಷರಾಗಿ ಭ್ರಮರಾಂಭ ಆಯ್ಕೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಿ.ಟಿ. ಮೋಹನ್ಕುಮಾರ್, ಪ್ರಕಾಶ ನಾಯಕ, ಟಿ.ಸಿ. ಮಂಜು, ಬಿ.ಎಂ. ಪ್ರಕಾಶ್, ರವಿ, ಸುರೇಶ್ಬಾಬು, ಹರೀಶ್ ಇದ್ದರು.
ಹೊಸೂರು: ಕಾಂಗ್ರೆಸ್ಸಿಗರ ಸಂಭ್ರಮ
ಹೊಸೂರು: ಜಿಪಂನಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆ ಹೊಸೂರು ಗ್ರಾಮದ ಮುಖ್ಯ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಿಸಿದರು. ಗ್ರಾಪಂ ಮಾಜಿ ಸದಸ್ಯರಾದ ಎಚ್.ಜೆ. ರಮೇಶ್, ಎಚ್.ಎಸ್. ರವಿ, ಪಕ್ಷದ ಮುಖಂಡರಾದ ಎಚ್.ಆರ್. ಪರಶುರಾಮ್, ಎಚ್.ಎಸ್. ಶ್ರೀನಿವಾಸ್, ಮುನ್ನಾ, ಹೊಸೂರು ಸ್ವಾಮಣ್ಣ, ಕಾರ್ಯಕರ್ತರು ಭಾಗವಹಿಸಿದ್ದರು.