ಮಂಜುನಾಥ್‌ಗೆ ಅತ್ಯುತ್ತಮ ಸಂಯೋಜಕ ಪ್ರಶಸ್ತಿ
ಕ.ಪ್ರ.ವಾರ್ತೆ ಭೇರ್ಯ ಸೆ. 18
ತಾಲೂಕಿನ ಹೊಸಅಗ್ರಹಾರ ಗ್ರಾಮದ ಎಚ್.ಎಸ್. ಮಂಜುನಾಥ್ ಅವರಿಗೆ 2012-13ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ತಾಲೂಕು ಸಂಯೋಜಕ ಪ್ರಶಸ್ತಿ ದೊರಕಿದೆ.
ಇವರು ಸಾಕ್ಷರತಾ ಕಾರ್ಯಕ್ರಮಗಳಲ್ಲಿ ವಿವಿಧ ಹಂತಗಳ ಮೂಲಕ ಕೆ.ಆರ್. ನಗರ ತಾಲೂಕಿನಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಹಾಗೂ ಸಾಕ್ಷರ ಭಾರತ್ ಕಾರ್ಯಕ್ರಮದ ಉತ್ತಮ ಕಾರ್ಯನಿರ್ವಹಣೆಯನ್ನು ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಹಾಗೂ ಲೋಕ ಶಿಕ್ಷಣ ಇಲಾಖೆಯು ಗುರುತಿಸಿ, ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಫ್ರೌಡಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇಂದು ವಾರ್ಷಿಕ ಮಹಾಸಭೆ
ಸಾಲಿಗ್ರಾಮ: ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2012-13ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ.19 ರಂದು ಸಂಘದ ದಾಸ್ತಾನು ಮಳಿಗೆಯಲ್ಲಿ ಏರ್ಪಡಿಸಿದೆ. ಸಂಘದ ಅಧ್ಯಕ್ಷ ಟಿ. ರಾಮೇಗೌಡ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಎಸ್. ಸಿದ್ದೇಗೌಡ ಹಾಗೂ ಸಂಘದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ನಾಳೆ ಸಾಕ್ಷರತಾ ದಿನಾಚರಣೆ
ಕೆ.ಆರ್. ನಗರ: ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ, ಜಿಲ್ಲಾ ಲೋಕಶಿಕ್ಷಣ ಸಮಿತಿ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಸೆ.20 ರಂದು ಇಲ್ಲಿನ ತಾಪಂ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ನಡೆಯಲಿದೆ. ಅಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮವನ್ನು ತಾಪಂ ಅಧ್ಯಕ್ಷೆ ಉದ್ಘಾಟಿಸುವರು. ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದೆ ರಮ್ಯಾ, ಜಿಪಂ ಸದಸ್ಯರಾದ ಸಿ.ಜೆ. ದ್ವಾರಕೀಶ್, ಸುಮಿತ್ರಮ್ಮ, ಕಲ್ಪನಾ, ನಳಿನಾಕ್ಷಿ, ರಾಜಯ್ಯ, ಪುಷ್ವಾಲತಾ, ತಾಪಂ ಉಪಾಧ್ಯಕ್ಷೆ ಶಕುಂತಲಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್‌ಖಾನ್ ಭಾಗವಹಿಸುವರು.
25ರಂದು ಸ್ಕ್ಯಾನಿಂಗ್ ಶಿಬಿರ
ಕೆ.ಆರ್. ನಗರ: ಕೆ.ಆರ್. ನಗರದ ಮಮತ- ಗಂಗಾ ಮೆಟರ್ನಿಟಿ ಕೇಂದ್ರವು ಸೆ. 25ಕ್ಕೆ ಗರ್ಭಿಣಿಯರಿಗೆ ಸ್ಕ್ಯಾನಿಂಗ್‌ನ ಉಚಿತ ಶಿಬಿರ ಏರ್ಪಡಿಸಿದೆ. 16 ರಿಂದ 24 ವಾರ ತುಂಬಿದ ಗರ್ಭಿಣಿಯರು ಈ ಶಿಬಿರದಲ್ಲಿ ಭಾಗವಹಿಸಬಹುದು. ಆಸಕ್ತರು ಸೆ. 23 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ. 08223- 262809 ಸಂಪರ್ಕಿಸಬಹುದು.