ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರು ಲೋಕಸಭಾ ಕ್ಷೇತ್ರಕ್ಕೆ ವಿಶ್ವನಾಥ್ ಅಭ್ಯರ್ಥಿ: ಶಿಫಾರಸು

Srinivasa Murthy VN
Updated On : 19 Sept 2013, 12:21 pm

ಕ.ಪ್ರ.ವಾರ್ತೆ ಮೈಸೂರು ಸೆ. 18
ಮುಂಬರುವ ಲೋಕಸಭಾ ಚುನಾವಣೆಯ ಮೈಸೂರು- ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಸಂಸದ ಎಚ್.ವಿಶ್ವನಾಥ್ ಅವರನ್ನು ಮುತ್ತೆ ಕಣಕ್ಕಿಳಿಸಲು ಬುಧವಾರ ನಡೆದ ಕೆಪಿಸಿಸಿ ವೀಕ್ಷಕರ ಸಭೆ ನಿರ್ಣಯಿಸಿತು.
ಈ ಬಗ್ಗೆ ಕೆಪಿಸಿಸಿ ವೀಕ್ಷಕರಾದ ಸಿ.ಎಂ. ಲಿಂಗಪ್ಪ, ಮುನಿನರಸಿಂಹಯ್ಯ, ವಾಸಂತಿ ಶಿವಣ್ಣ ಅವರು, ಕೆಪಿಸಿಸಿ ಸದಸ್ಯರು, ಡಿಸಿಸಿ ಪದಾಧಿಕಾರಿಗಳು, ಶಾಸಕರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಬಹುಪಾಲು ಮಂದಿ ಪದಾಧಿಕಾರಿಗಳು ಹಾಲಿ ಸಂಸದ ಎಚ್. ವಿಶ್ವನಾಥ್ ಅವರನ್ನೆ ಮುಂದುವರಿಸುವಂತೆ ತಮ್ಮ ಸಹಮತ ವ್ಯಕ್ತಪಡಿಸಿದರು. ಆದರೆ ವಿಧಾನ ಪರಿಷತ್ ಮಾಜಿ ಸದಸ್ಯೆ ಮುಕ್ತರುನ್ನಿಸ್ಸಾ ಬೇಗಂ, ಡಿಸಿಸಿ ಉಪಾಧ್ಯಕ್ಷ ಸತ್ಯಪ್ಪ, ಡಿ.ಗೋಪಾಲ್, ಅಣ್ಣಾಸಾಬ್ ಅವರು ವೈಯಕ್ತಿಕವಾಗಿ ಹಾಜರಾಗಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು.
ಪಾಲಿಕೆಯ ಎಲ್ಲಾ ಕಾಂಗ್ರೆಸ್ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ವಿಶ್ವನಾಥ್ ಅವರನ್ನೆ ಮುಂದುವರಿಸುವಂತೆ ಹೇಳಿದರು. ಆಗ ಎಲ್ಲರ ಸಹಿಪಡೆದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಚ್. ವಿಶ್ವನಾಥ್ ಅವರೆ ಕಾಂಗ್ರೆಸ್ ಅಭ್ಯರ್ಥಿ ಎಂದು ನಿರ್ಣಯ ಅಂಗೀಕರಿಸಲಾಯಿತು. ಶಾಸಕ ವಾಸು, ವಿಧಾನ ಪರಿಷತ್ ಮಾಜಿ ಸದಸ್ಯ ಮುಕ್ತರುನ್ನಿಸ್ಸಾ ಬೇಗಂ, ನಗರ ಕಾಂಗ್ರೆಸ್ ಅಧ್ಯಕ್ಷ ಸಿ. ದಾಸೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎ. ವೆಂಕಟೇಶ್, ಶಿವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement