ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೇಷ್ಮೆ ಬೆಳೆಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ

Srinivasa Murthy VN
Updated On : 19 Sept 2013, 12:22 pm

ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 18
ರೇಷ್ಮೆ ಬೆಳೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಉತ್ತಮ ಬೆಳೆಯಾಗಿದ್ದು, ರೈತರು ಈ ಬೆಳೆಯತ್ತ ಹೆಚ್ಚು ಗಮನ ಹರಿಸಬೇಕೆಂದು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸಿದ್ದಲಿಂಗಸ್ವಾಮಿ ಹೇಳಿದರು.
ತಾಲೂಕಿನ ಹೆಬ್ಬಾಳು ಗ್ರಾಮದ ಪ್ರಗತಿಪರ ರೈತ ಮಾದೇಗೌಡರ ಜಮೀನಿನಲ್ಲಿ ನಡೆದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಾರ್ಷಿಕವಾಗಿ ಹೆಚ್ಚು ಆದಾಯ ತರುವ ರೇಷ್ಮೆ ಬೆಳೆಯಲು ಇಲಾಖೆಯಿಂದಲೂ ಅಗತ್ಯ ಸಹಾಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೆಳೆ ಸಫಲವಾಗಲು ಸೋಂಕು ನಿವಾರಣೆಯ ಕಡೆಗೆ ರೈತರು ನಿಗಾವಹಿಸಿ ಸ್ವಚ್ಛತೆ ಕಾಪಾಡಿದರೆ ಅಧಿಕ ಲಾಭ ಗಳಿಸಬಹುದು. ಈ ವಿಷಯದಲ್ಲಿ ಎಲ್ಲ ಸಲಹೆ, ಸಹಕಾರ ನೀಡಲು ಅಧಿಕಾರಿಗಳು ಸಿದ್ಧರಿದ್ದು, ಸವಲತ್ತುಗಳ ಸದುಪಯೋಗವಾಗಬೇಕು ಎಂದರಲ್ಲದೆ, ಸಹಾಯಧನವನ್ನು ಕೊಡಿಲಾಗುತ್ತದೆ ಎಂದು ತಿಳಿಸಿದರು.
ಸಿಎಸ್‌ಆರ್‌ಟಿ ವಿಜ್ಞಾನಿಗಳಾದ ಡಾ.ಸೋಮಪ್ರಕಾಶ್, ಡಾ. ನರಸಿಂಹನಾಯಕ್, ಪರಮೇಶ್ವರ್, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಚಂದ್ರಶೇಖರ್ ಎಸ್.ಕಳ್ಳಿಮನಿ ಮಾತನಾಡಿ, ರೇಷ್ಮೆ ಬೆಳೆಯ ವಿಧಾನ ಮತ್ತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಮಾದೇಗೌಡ, ತಾಲೂಕು ರೇಷ್ಮೆ ಸಹಾಯಕ ನಿರ್ದೇಶಕಿ ಹಬೀಬಾ, ವ್ಯವಸ್ಥಾಪಕ ವಸಂತ್‌ಕುಮಾರ್ ಇದ್ದರು.

ನಾರಾಯಣಪುರ ಸಹಕಾರ ಸಂಘಕ್ಕೆ ಆಯ್ಕೆ
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 18
ತಾಲೂಕಿನ ನಾರಾಯಣಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಎಸ್. ರಾಜೀವ್ ಮತ್ತು ಉಪಾಧ್ಯಕ್ಷರಾಗಿ ಶಶಿಕಲಾ ಪುಟ್ಟಸ್ವಾಮಿ ಅವಿರೋಧ ಆಯ್ಕೆಯಾದರು.
ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಇಬ್ಬರು ನಿರ್ದೇಶಕರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ವಸಿಂಪಾಷ ಹೇಳಿದರು. ನಿರ್ದೇಶಕರಾದ ರವಿಕುಮಾರ್, ಎಸ್.ಡಿ. ದಿವಾಕರ, ಎಸ್.ಕೆ. ಅಣ್ಣಯ್ಯ, ಶೋಭಾ, ಎನ್. ತಮ್ಮಣ್ಣ, ಕೆ.ಆರ್. ಸುರೇಶ್, ಎಂ.ಎಸ್. ರಾಜು ಭಾಗವಹಿಸಿದ್ದರು.  
ಗ್ರಾಪಂ ಅಧ್ಯಕ್ಷ ಮಹದೇವನಾಯಕ, ಮಾಜಿ ಸದಸ್ಯ ಗಿರೀಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎನ್.ಎ. ಸಿದ್ದಪ್ಪ, ಮುಖಂಡರಾದ ಎನ್. ಮಹದೇವ್, ಮಹೇಂದ್ರ, ಗೋವಿಂದರಾಜು, ಕೆ.ಬಿ. ನಾಗರಾಜ್, ಕೆ.ಆರ್. ಅಶೋಕ್, ಬಸವೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement