ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪದವಿ ಪರೀಕ್ಷಾ ಶುಲ್ಕ ಇಳಿಸಲು ಆಗ್ರಹಿಸಿ ಧರಣಿ

Srinivasa Murthy VN
Updated On : 19 Sept 2013, 10:02 am

ಕ.ಪ್ರ.ವಾರ್ತೆ ಮೈಸೂರು ಸೆ. 19
ಪದವಿ ಪರೀಕ್ಷಾ ಶುಲ್ಕ ಇಳಿಸಲು ಆಗ್ರಹಿಸಿ ಡಿ.ಬನುಮಯ್ಯ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಪ್ರತಿಭಟಿಸಿದರು. ಸಯ್ಯಾಜಿರಾವ್ ರಸ್ತೆಯಲ್ಲಿ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ವಿದ್ಯಾರ್ಥಿಗಳು, ಕಳೆದ ಸಾಲಿನ ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡಬೇಕು. ಈ ಬಾರಿ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳಾದ ಸಿದ್ದಪ್ಪ, ಶಿವಕ್ರಾಂತಿ, ಮದನಕುಮಾರ್, ಲಕ್ಷ್ಮಣ್, ಕೃಷ್ಣಮೂರ್ತಿ, ಹರ್ಷಿತ್, ದರ್ಶನ್, ಬಸವರಾಜ್, ಮಹದೇವಸ್ವಾಮಿ, ಸತೀಶ್‌ಕುಮಾರ್ ಇದ್ದರು.

ನಾಳೆ ವಿದ್ಯುತ್ ಪೂರೈಕೆ ವ್ಯತ್ಯಯ
ಕ.ಪ್ರ.ವಾರ್ತೆ ಮೈಸೂರು ಸೆ. 19
ಎಫ್‌ಟಿಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಸ್ಕ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.21ರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್‌ನ ಎನ್.ಆರ್. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ.
ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು- ತಿಲಕ್‌ನಗರ, ಕೈಲಾಸ್‌ಪುರಂ, ಅಶೋಕರಸ್ತೆ, ಪುಲಿಕೇಶಿ ರಸ್ತೆ, ಸಾಡೇರಸ್ತೆ, ದಿವಾನ್ಸ್ ರಸ್ತೆ, ಆರ್‌ಎಂಸಿ ವೃತ್ತ, ಚೆಲುವಾಂಬ ಆಸ್ಪತ್ರೆ, ಕೆ.ಆರ್. ಆಸ್ಪತ್ರೆ, ಧನ್ವಂತರಿ ರಸ್ತೆ, ಮಂಡಿ ಮೊಹಲ್ಲಾ, ಮೇದರ್ ಬ್ಲಾಕ್, ವೀರನಗೆರೆ, ವಿನೋಬ ರಸ್ತೆ, ಕಬೀರ ರಸ್ತೆ, ಅಕ್ಬರ್ ರಸ್ತೆ, ಇರ್ವಿನ್ ರಸ್ತೆ, ಆರ್‌ಎಂಸಿ ಯಾರ್ಡ್ ಮತ್ತು ಜೆಎಲ್‌ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ಕೆಸರೆ, ಎನ್.ಆರ್. ಮೊಹಲ್ಲಾ, ಬನ್ನಿಮಂಟಪ, ಗಾಂಧಿನಗರ, ಉದಯಗಿರಿ, ಶುಭಾಶ್‌ನಗರ, ಎ.ಜೆ. ಬ್ಲಾಕ್, ಕುರಿಮಂಡಿ, ಆರ್.ಎಸ್. ನಾಯ್ಡುನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement