ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸವಾಲು ಎದುರಿಸುವ ಸಾಮರ್ಥ್ಯ ಕಲಿಸುವ ಎನ್‌ಸಿಸಿ'

Srinivasa Murthy VN
Updated On : 19 Sept 2013, 10:02 am

ಕ.ಪ್ರ.ವಾರ್ತೆ ಮೈಸೂರು ಸೆ. 19
ಎನ್‌ಸಿಸಿ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಕೆಡೆಟ್‌ಗಳಲ್ಲಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ರಾಜೇಶ್ವರ ಸಿಂಗ್ ಹೇಳಿದರು.
ಇಲವಾಲದ ಅಲೋಕ ವಿಹಾರ ಮೈದಾನದಲ್ಲಿ 4ನೇ ಕರ್ನಾಟಕ ಏರ್ ಸ್ಕ್ವಾಡ್ರರ್ನ್ ಎನ್‌ಸಿಸಿ ವತಿಯಿಂದ ಆಯೋಜಿಸಿರುವ ವಾರ್ಷಿಕ ವಿಶೇಷ ವಾಯು ಸೈನಿಕ ಮೊದಲ ಶಿಬಿರದಲ್ಲಿ ವಾಯುದಳದ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಡೆಟ್‌ಗಳಲ್ಲಿ ಪರಸ್ಪರ ಸಹಕಾರ ಮನೋಭಾವನೆ, ರಾಷ್ಟ್ರೀಯ ಭಾವೈಕ್ಯತೆ ರಾಷ್ಟ್ರಪ್ರೇಮ ಸ್ಪರ್ಧಾತ್ಮಕ ಮನೋಭಾವ ಇವೆ. ಮೊದಲಾದ ವ್ಯಕ್ತಿತ್ವ ರೂಪಿಸಿಕೊಳ್ಳುವ ಅಂಶಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಕೆಡೆಟ್‌ಗಳ ವೈಯಕ್ತಿಕ ವಿಕಾಸದೊಂದಿಗೆ ದೇಶಪ್ರೇಮ ಬೆಳೆಸುವುದು ಶಿಬಿರದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಹತ್ತು ದಿನಗಳ ಶಿಬಿರದಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ಬೀದರ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ 600 ಕೆಡೆಟ್‌ಗಳು ಭಾಗವಹಿಸುತ್ತಿದ್ದು, ಕೆಡೆಟ್‌ಗಳಿಗೆ ರಕ್ಷಣಾ ಇಲಾಖೆಯಲ್ಲಿರುವ ವಿಪುಲ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ಸೇರಿದಂತೆ, ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ, ಸುಗಮ ಸಂಚಾರ, ನಾಗರಿಕ ರಕ್ಷಣೆ, ಪರಿಸರ ಸಂರಕ್ಷಣೆ ಹಾಗೂ ಕವಾಯತು, ಬಂದೂಕು ತರಬೇತಿ, ಲಘು ವಿಮಾನ ಹಾರಾಟ, ಮಾದರಿ ವಿಮಾನಗಳ ತಯಾರಿಕೆ ಇವೆ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಂಪ್ ಕಮಾಂಡೆಂಟ್ ವಿಂಗ್ ಕಮಾಂಡರ್ ಜೋಸೆಫ್ ವರ್ಗಿಸ್ ತಿಳಿಸಿದರು.

ಮೋದಿ ಸಿಎಂ ಮೊದಲೇ ಗುಜರಾತ್ ಅಭಿವೃದ್ಧಿ
ಮೈಸೂರು: ಶ್ರೀ ನಿಮಿಷಾಂಬಾ ನೃತ್ಯಶಾಲೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಮೈಸೂರು ಉತ್ಸವ- 2013 ಕಾರ್ಯಕ್ರಮ ಆರಂಭಗೊಂಡಿತು. ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ಬೆಂಗಳೂರಿನ ಕಲಾಸಂಗಮದ ವಿದ್ವಾನ್ ರಘುನಂದನ್ ಮತ್ತು ವಿದುಷಿ ಮಾನಸಿ ರಘುನಂದನ್ ಅವರು ಭರತನಾಟ್ಯ- ಓಡಿಸ್ಸಿ ಯುಗಳ ನೃತ್ಯ ಪ್ರದರ್ಶಿಸಿದರು. ಭರತನಾಟ್ಯ ಮತ್ತು ಓಡಿಸ್ಸಿಯ ಮಿಶ್ರಕಲೆಯ ಈ ಯುಗಳ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಾಗರದ ಪರಿಣತಿ ಕಲಾಕೇಂದ್ರದ ವಿದ್ವಾನ್ ಕೆ.ಗೋಪಾಲ್ ಹಾಗೂ ಶಿಷ್ಯರಿಂದ ಭರತನಾಟ್ಯ ಮತ್ತು ನಾದವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಆ್ಯಂಡ್ ಡ್ಯಾನ್ಸ್‌ನ ವಿದುಷಿ ಮಿತ್ರ ನವೀನ್ ಹಾಗೂ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement