ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಟಿ. ನರಸೀಪುರ ಟಿಎಪಿಸಿಎಂಎಸ್ ಲಾಭದಲ್ಲಿ

Srinivasa Murthy VN
Updated On : 20 Sept 2013, 11:36 am

ಟಿ. ನರಸೀಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಲಾಭದಲ್ಲಿದ್ದು, ಸದಸ್ಯರು ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಸಹಕಾರ ನೀಡಿದರೆ ಹೆಚ್ಚಿನ ಲಾಭಾಂಶವನ್ನು ಪಡೆದುಕೊಳ್ಳಬಹುದು ಎಂದು ಸಂಘದ ಅಧ್ಯಕ್ಷ ಟಿ.ಪಿ. ಸುಬ್ರಮಣ್ಯ ಹೇಳಿದರು. ಟಿಎಪಿಸಿಎಂಎಸ್ ರೈತ ಭವನದಲ್ಲಿ ಶುಕ್ರವಾರ ನಡೆದ 2012-13ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ತಾವು ಅಧ್ಯಕ್ಷರಾದ ನಂತರ ನಷ್ಟದಲ್ಲಿದ್ದ ಸಂಘದ ಸುಸ್ತಿ ಸಾಲವನ್ನು ಪಾವತಿಸಿ ಲಾಭದತ್ತ ಹೆಜ್ಜೆ ಇಡುವಂತೆ ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದಿನ ಕೆಲವೇ ದಿನಗಳಲ್ಲಿ ಬಾಕಿ ಇರುವ ಸಾಲದ ಹಣವನ್ನು ಪಾವತಿ ಮಾಡಿ, ಸಂಘವನ್ನು ಸಾಲದಿಂದ ಮುಕ್ತಗೊಳಿಸುತ್ತೇನೆ ಎಂದು ತಿಳಿಸಿದರು. ಸಂಘದ ನಿರ್ದೇಶಕ ಬನ್ನೂರು ಕೆ. ಕೃಷ್ಣ ಮಾತನಾಡಿದರು. ಅಕಾಲಿಕ ಮರಣ ಹೊಂದುವ ಸದಸ್ಯರಿಗೆ ಸಹಾಯಧನ ನೀಡಲು ನಿಧಿ ಸ್ಥಾಪಿಸುವ ಬಗ್ಗೆ ಸದಸ್ಯರೆಲ್ಲರೂ ಒತ್ತಾಯಿಸಿದರು. ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಆರ್.ಎನ್. ರಾಮೇಗೌಡ, ಪರಶಿವಮೂರ್ತಿ, ರಾಜಮ್ಮ, ಎಂ. ಜಯಣ್ಣ ಇದ್ದರು.

ಸಾಕ್ಷರತಾ ಪ್ರೇರಕರಿಗೆ ಗೌರವಧನ ಹೆಚ್ಚಿಸಿ
ಕ.ಪ್ರ.ವಾರ್ತೆ ಬೈಲುಕುಪ್ಪೆ ಸೆ. 20
ಸಾಕ್ಷರತಾ ಪ್ರಮಾಣ ಹೆಚ್ಚಿಸುವಲ್ಲಿ ಹಗಲಿರುಳು ದುಡಿಯುತ್ತಿರುವ ಪ್ರೇರಕರಿಗೆ ಗೌರವಧನ ಹೆಚ್ಚಿಸಬೇಕು ಎಂದು ಗ್ರಾಪಂ ಅಧ್ಯಕ್ಷ ರವಿಮಾನು ತಿಳಿಸಿದರು.
ತಾಲೂಕಿನ ಬೈಲುಕುಪ್ಪೆ ಪಂಚಾಯತಿ ಸಭಾಂಗಣದಲ್ಲಿ ಲೋಕಶಿಕ್ಷಣ ವತಿಯಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರೇರಕರಿಗೆ ವರ್ಷದಲ್ಲಿ ಒಂದೆರಡು ಬಾರಿ ಕೇವಲ ಮೂರ್ನಾಲ್ಕು ತಿಂಗಳು 2 ಸಾವಿರದಂತೆ ಗೌರವಧನ ನೀಡಲಾಗುತ್ತದೆ. ಈ ವೃತ್ತಿಯನ್ನೇ ನಂಬಿ ಜೀವನ ನಡೆಸಲಾಗದೆ ಪರದಾಡುವ ಸ್ಥಿತಿಯಲ್ಲಿದ್ದಾರೆ. ಇವರಿಗೆ ಕನಿಷ್ಠ ವೇತನವನ್ನು ಪ್ರತಿ ತಿಂಗಳು ನೀಡಿದಾಗ ಇನ್ನಷ್ಟು ಸಾಕ್ಷರತೆ ಸಾಧಿಸಲು ಸಾಧ್ಯ ಎಂದರು.
ತಾಲೂಕು ಸಂಯೋಜಕ ಎಸ್.ಆರ್. ಅನಂತ ಮಾತನಾಡಿ, ಲೋಕಶಿಕ್ಷಣ ಕೇಂದ್ರದ ವತಿಯಿಂದ ಪ್ರತಿ ಗ್ರಾಮದಲ್ಲೂ ಅನಕ್ಷರಸ್ಥರನ್ನು ಗುರುತಿಸಿ ಅವರಿಗೆ ಸುಲಭ ಓದು, ಬರಹ, ಲೆಕ್ಕಾಚಾರ ಕಲಿಸಿ ಅವರಿಗೆ ಪರೀಕ್ಷೆ ನಡೆಸಿ, ಉತ್ತೀರ್ಣರಾದವರಿಗೆ ವೃತ್ತಿ ಕೌಶಲ್ಯಾಧಾರಿತ ತರಬೇತಿ ನೀಡಿ ಮುಖ್ಯವಾಹಿನಿಗೆ ತರುವ ಮಹತ್ವಾಕಾಂಕ್ಷೆ ಯೋಜನೆಯಾಗಿದೆ ಎಂದರು. ಈ ವೇಳೆ ಕಲಿಕಾರ್ಥಿಗಳಿಗೆ ಸಾಂಸ್ಕೃತಿಕ ಮತ್ತು ಮನರಂಜನ ಚಟುವಟಿಕೆ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಮತ್ತು ಮೂಲ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ನೀಡಲಾಯಿತು.
ತಾಪಂ ಸದಸ್ಯ ನವಿಲೂರು ಮಹದೇವ್, ಗ್ರಾಪಂ ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ಕೆ.ಪಿ. ಉತ್ತಯ್ಯ, ರಾಜು, ಗೋವಿಂದಯ್ಯ, ಮಹದೇವ್, ಸವಿತ, ಖತೀಜ, ಮಂಜುಳ, ಗ್ರಾಪಂ ಸಂಯೋಜಕರಾದ ಕೆ.ಎಸ್. ಪ್ರಕಾಶ್ ಕಂಪ್ಲಾಪುರ, ಕೆ. ಶಿವಣ್ಣ ಬೈಲಕುಪ್ಪೆ, ಸಹ ಪ್ರೇರಕಿ ಲಕ್ಷ್ಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement