ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಂಪ ಪ್ರಶಸ್ತಿ ವಿತರಣೆಗೆ ಕೂಡಿಬರದ ಕಾಲ

Srinivasa Murthy VN
Updated On : 20 Sept 2013, 10:58 am

ಮೈಸೂರು: ಪ್ರಸಿದ್ಧ ವಿಮರ್ಶಕ ಪ್ರೊ. ಜಿ.ಎಚ್. ನಾಯಕರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು, ಈ ಬಾರಿ ದಸರಾ ಮಹೋತ್ಸವದಲ್ಲಿ ಅಂದರೆ ಅ.5ರಂದು ಪಂಪ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಆದರೆ, ದಸರಾವನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ನಾನು ಇಂಥ ಸಂದರ್ಭದಲ್ಲಿ ಪ್ರಶಸ್ತಿ ಪಡೆಯುವುದು ಮತ್ತು ಸುದ್ದಿಯಾಗಿವುದು ಮುಜುಗರದ ಕೆಲಸ. ಹಾಗಾಗಿ, ಅಂದು ಪ್ರಶಸ್ತಿ ಸ್ವೀಕರಿಸಲಾರೆ ಎಂದು ಪ್ರೊ. ಜಿ.ಎಚ್. ನಾಯಕ ಅವರು ಎಂದು ಉಮಾಶ್ರೀ ಅವರಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಚರ್ಚಿಸಿ ನಿರ್ಧಾರ: ನಾಯಕರ ತಿರಸ್ಕಾರದ ಹಿನ್ನೆಲೆಯಲ್ಲಿ ದಸರಾ ಮುಗಿದ ನಂತರ ಯಾವ ದಿನದಂದು ಪ್ರಶಸ್ತಿ ನೀಡಬೇಕು ಎಂಬುದನ್ನು ಚರ್ಚಿಸಿ ತಿಳಿಸಲಾಗುವುದು ಎಂದು ಉಮಾಶ್ರೀ ಹೇಳಿದರು. ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪದೇ ಪದೇ ಮುಂದೂಡುತ್ತಲೇ ಹೋಗುತ್ತಿದ್ದ ಪಂಪ ಪ್ರಶಸ್ತಿ ಸುದ್ದಿ ವಿವಾದಕ್ಕೂ ಗುರಿಯಾಗಿತ್ತು. ಈ ಬಾರಿ ಪುರಸ್ಕೃತರ ವೈಯಕ್ತಿಕ ಕಾರಣಗಳಿಂದಾಗಿ ಪ್ರಶಸ್ತಿ ವಿತರಣೆ ಮುಂದೂಡಿದ್ದು ನೋಡಿದರೆ ಇದಕ್ಕೂ ಕಾಲ ಕೂಡಿ ಬಂದಿಲ್ಲ ಎನ್ನಿಸದಿರದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement