ಜಿಲ್ಲಾ ಆರೋಗ್ಯಾಧಿಕಾರಿಯಿಂದ ಫೋನ್ ಇನ್ ಕಾರ್ಯಕ್ರಮ
ಎಚ್.ಡಿ. ಕೋಟೆ: ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಶನಿವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ ಮಾಲೇಗೌಡಪೋನ್- ಇನ್ ಕಾರ್ಯಕ್ರಮ ನಡೆಸಿಕೊಟ್ಟರು. ಹಲವು ಕರೆಗಳಲ್ಲಿ ಗರ್ಭಿಣಿಯರು ಪ್ರತಿಯೊಂದು ಪರೀಕ್ಷೆಗಳಿಗೂ ಹೊರಗಡೆ ಬರೆದು ಕೊಡಲಾಗುತ್ತಿದೆ. ವೈದ್ಯರು ಆಸ್ಪತ್ರೆಯಲ್ಲಿ ಸಾಕಷ್ಟು ಗುಳಿಗೆ ಸರಬರಾಜು ಆಗುತ್ತಿದ್ದರೂ ಸಹ ಹೊರಗೆ ಔಷಧಿ ಬರೆಯುತ್ತಿದ್ದಾರೆ. ವೈದ್ಯರ ಕೊರತೆ, ಸೇರಿದಂತೆ ಹಲವು ದೂರುಗಳು ಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಮಾಲೇಗೌಡರು, ಪಟ್ಟಣದ ಆಸ್ಪತ್ರೆಗೆಒಂದು ವರ್ಷಕ್ಕೆ 24 ಲಕ್ಷ ಸರಗೂರು ಪಟ್ಟಣದ ಸಮುದಾಯ ಆಸ್ಪತ್ರೆಗೆ 9 ಲಕ್ಷ, ಪ್ರತಿಯೊಂದು ಪಿಹೆಚ್‌ಸಿಗಳಿಗೆ 1 ಲಕ್ಷ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ನಕಲಿ ವೈದ್ಯರು ಇದ್ದು ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು. ತಾಲೂಕು ಪತ್ರಕರ್ತರ ಅಧ್ಯಕ್ಷ ಮಂಜು ಕೋಟೆ ಇದ್ದರು.
ಜಿಟಿಡಿ 'ಕೈ' ಬಗ್ಗೆ ಮಾತು ನಿಲ್ಲಸಲಿ: ಯೋಗೇಶ್
ಕೆ.ಆರ್. ನಗರ: ಶಾಸಕ ಜಿ.ಟಿ. ದೇವೇಗೌಡ ಅವರು ಕಾಂಗ್ರೆಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವಂತೆ ತಾಲೂಕು ಕಾಂಗ್ರೆಸ್ ಹಿಂದುಳಿದ ವರ್ಗದ ವಿಭಾಗ ಉಸ್ತುವಾರಿ ಅಧ್ಯಕ್ಷ ಯೋಗೇಶ್ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಬಿಜೆಪಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರ ಬಳಿ ಸಹಾಯ ಕೇಳಿಲ್ಲ, ಕೇಳುವುದು ಇಲ್ಲ, ಅದರ ಅವಶ್ಯಕತೆ ಕಾಂಗ್ರೆಸ್‌ಗೆ ಇಲ್ಲ, ಬಿಜೆಪಿ ಮತ್ತು ಜೆಡಿಎಸ್ ಜಿಪಂ ಸದಸ್ಯರು ಜಿಲ್ಲೆ ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುತ್ತಾರೆಯೇ ವಿನಃ ಹಣದ ಆಸೆಗಲ್ಲ ಎಂದು ಅವರು ಹೇಳಿದ್ದಾರೆ. ಜಿ.ಟಿ. ದೇವೇಗೌಡರು ಅಧಿಕಾರಕ್ಕಾಗಿ ಮಾತ್ರವೇ ರಾಜಕಾರಣ ಮಾಡುತ್ತಿದ್ದಾರೆ ವಿನಃ, ಜನರ ಸೇವೆಗೋಸ್ಕರ ಅಲ್ಲ ಎಂದು ಅವರು ಟೀಕಿಸಿದ್ದಾರೆ.