ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈತರಿಗೆ 4 ಲಕ್ಷ ರು.ವರೆಗೆ ಸಾಲ

Srinivasa Murthy VN
Updated On : 21 Sept 2013, 11:39 am

ಟಿ. ನರಸೀಪುರ: ಸಹಕಾರ ಸಂಘದ 97ನೇ ತಿದ್ದುಪಡಿ ಅನ್ವಯ ರೈತರಿಗೆ ಗರಿಷ್ಠ 4 ಲಕ್ಷ ರು.ವರೆಗೂ ಬೆಳೆ ಸಾಲ ವಿತರಣೆ ಮಾಡಲು ಅವಕಾಶವಿದೆ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತಿರಮಕೂಡಲು ಜಯರಾಂ ಹೇಳಿದರು.
ಸಂಘದ ಕಚೇರಿಯಲ್ಲಿ ನಡೆದ 2012-13ನೇ ಸಾಲಿನ ಸರ್ವ ಸದಸ್ಯರ ವಾಷಿಂಕ ಮಹಾಸಭೆಯಲ್ಲಿ 97ನೇ ಸಹಕಾರ ಸಂಘಗಳ ಬೈಲಾ ತಿದ್ದುಪಡಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.
2012-13ನೇ ಸಾಲಿನಲ್ಲಿ ವಿತರಿಸಿದ್ದ ಸಾಲದ ಹಣ 70.87 ಲಕ್ಷ ರು. ನಲ್ಲಿ 33.75 ಲಕ್ಷ ಸಾಲ ಮನ್ನಾ ಕಳೆದು ಉಳಿದ ಹಣ ಮರುಪಾವತಿಯಾಗಿದೆ. ಲಾಭಗಿಂತ ಸಂಘದ ನಷ್ಟವನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. 6 ಜನರಿಗೆ ಟಿಲ್ಲರ್, ಇಬ್ಬರಿಗೆ ಟ್ರ್ಯಾಕ್ಟರ್ ಸೌಲಭ್ಯಕ್ಕೆ ಸಾಲ ನೀಡಿದೆ. ಹೆಚ್ಚಿನ ಸಾಲ ಮಂಜೂರಾತಿಗೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ. 113 ಸದಸ್ಯರಿಗೆ 61.35 ಲಕ್ಷ ಸಾಲ ವಿತರಿಸಿದೆ ಎಂದು ಹೇಳಿದರು.
ರೈತರು ಮುಂದಿನ ದಿನಗಳಲ್ಲಿ ಸಂಘದಿಂದ ಸಿಗುವ ಸಾಲ ಸೌಲಭ್ಯ ಉಪಯೋಗಿಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವಂತೆ ಮನವಿ ಮಾಡಿದರು. ಇದೇ ವೇಳೆ ಎತ್ತಿನ ಗಾಡಿ ಸಾಲಕ್ಕೆ ರೈತರು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಎಸ್. ಮಾದಯ್ಯ, ಉಪಾಧ್ಯಕ್ಷ ಕಿರಗಸೂರು ಮಲ್ಲೇಶಪ್ಪ, ಚಂದ್ರಶೇಖರ್, ಫಣೀಶ್‌ಕುಮಾರ್, ಎಸ್. ಮಹಾದೇವಯ್ಯ, ಗುರುಸ್ವಾಮಿ, ದೊಡ್ಡಬಸವಯ್ಯ, ಪುಟ್ಟರಾಜು, ಕಿರಣ್, ಸಿ. ಮಹಾದೇವ್ ಇದ್ದರು.

ಸುತ್ತೂರಿನಲ್ಲಿ ರೈತ ಕ್ಷೇತ್ರ ಪಾಠಶಾಲೆ
ಸುತ್ತೂರು: ತಾಲೂಕಿನ ಬಿಳಿಗೆರೆ ರೈತ ಸಂಪರ್ಕ ಕೇಂದ್ರದಿಂದ ಸುತ್ತೂರಿನಲ್ಲಿ ಸಮಗ್ರ ಪೀಡೆ ನಿರ್ವಹಣೆ ತರಬೇತಿ ನೀಡಲು ರೈತ ಕ್ಷೇತ್ರ ಪಾಠಶಾಲೆ ಆರಂಭಿಸಲಾಯಿತು.
ಕೃಷಿ ಅಧಿಕಾರಿ ಬಸವರಾಜಪ್ಪ, ಮಹೇಶ್‌ಕುಮಾರ್, ಮಂಜುಳಾ ಅವರು ರೈತರಿಗೆ ಮಿನಿ ಕಿಟ್ ವಿತರಿಸಿದರು. ರೈತರು ಬತ್ತದ ಬೆಳೆಯಲ್ಲಿ ಬರುವ ಬೆಂಕಿ ರೋಗಕ್ಕೆ ಬಾವಿಸ್ಟನ್ ಬಳಸಬೇಕು. ಅದರಂತೆ ಕಾಂಡ ಕೊರೆಯುವ ಕೀಟಕ್ಕೆ ಕ್ಲೋರಿಫೈರಿಪಾಸ್ ಲೀಟರ್ ನೀರಿಗೆ 2 ಮಿ.ಲಿ. ಬಳಸಲು ತಿಳಿಸಿದರು.
ಅನುವುಗಾರರಾದ ಎಸ್.ಆರ್. ಲಕ್ಷ್ಮಣನಾಯಕ, ದಾನಿರೈತ ಎಸ್.ಆರ್. ಲಿಂಗರಾಜು, ಮಹದೇವಪ್ಪ, ಸಿದ್ದರಾಜು, ಬಸವಣ್ಣ, ಶ್ರೀನಿವಾಸನಾಯಕ, ಎಚ್.ಆರ್. ವಿಜಯಲಕ್ಷ್ಮೀ, ಸುಮತಿ, ಮಮತಾ, ಜಯಮ್ಮ, ಲೀಲಾವತಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement