ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವೃತ್ತಿಪರ ಛಾಯಾಗ್ರಾಹಕರಿಗೆ ಕಾರ್ಯಾಗಾರ

Srinivasa Murthy VN
Updated On : 21 Sept 2013, 11:41 am

ಮೈಸೂರು: ವೃತ್ತಿಪರ ಛಾಯಾಗ್ರಾಹಕರಿಗಾಗಿ ನಂಜರಾಜ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿರುವ ಮೂರನೇ ರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ವೃತ್ತಿಪರರಿಗೆ ಶನಿವಾರ ಕಾರ್ಯಾಗಾರ ನಡೆಯಿತು.
ಮೈಸೂರು ಜಿಲ್ಲಾ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘವು ವೃತ್ತಿಪರರಿಗಾಗಿ ಏರ್ಪಡಿಸಿದ್ದ ಈ ಕಾರ್ಯಾಗಾರವನ್ನು ಬೆಂಗಳೂರಿನ ಈಶ್ವರ್ ಸ್ಟುಡಿಯೋ ಮಾಲೀಕ ಈಶ್ವರ್ ಸುರೇಶ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ಕೆ.ಎ. ಸೂರ್ಯಪ್ರಕಾಶ್ ಅವರು, ಸ್ಟುಡಿಯೋ ಲೈಟಿಂಗ್ಸ್ ಹಾಗೂ ಫ್ಯಾಷನ್ ಫೋಟೋಗ್ರಫಿ ಎಂಬ ವಿಷಯ ಕುರಿತು ಮಾತನಾಡಿ, ಒಳಾಂಗಣ ಹಾಗೂ ಹೊರಾಂಗಣದಲ್ಲಿ ಯಾವ ರೀತಿ ಬೆಳಕು ಇರಬೇಕು, ವನ್ಯಜೀವಿ ಚಿತ್ರಗಳನ್ನು ತೆಗೆಯುವಾಗ ಅನುಸರಿಸಬೇಕಾದ ತಂತ್ರಗಾರಿಕೆಯನ್ನು ತಿಳಿಸಿದರು.
ಛಾಯಾಗ್ರಹಣ ಕ್ಷೇತ್ರದ ಅನುಕೂಲಕ್ಕಾಗಿ ಇಂದು ಮಾರುಕಟ್ಟೆಗೆ ಬಂದಿರುವ ಆಧುನಿಕ ಸಾಧನ ಮತ್ತು ಸಲಕರಣೆಗಳ ಉಪಯೋಗಗಳು ಹಾಗೂ ಅದನ್ನು ಬಳಸುವ ವಿಧಾನ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಜಿ.ಟಿ. ರಮೇಶ್‌ಕುಮಾರ್, ಉಪಾಧ್ಯಕ್ಷ ಎಂ. ರಾಜಶೇಖರಮೂರ್ತಿ, ಕಾರ್ಯದರ್ಶಿ ಎನ್. ಉಮೇಶ್, ಜಂಟಿ ಕಾರ್ಯದರ್ಶಿ ಎಸ್. ಗಿರಿಮಂಜು, ಖಜಾಂಚಿ ಎಂ.ಎಸ್. ಮಂಜುನಾಥ್ ಹಾಗೂ ಪಿಆರ್‌ಒ ಜಿ.ಎಸ್. ಬಾಬು ಇದ್ದರು.

ಪಲ್ಲವೋತ್ಸವ ಪ್ರಾರಂಭ
ಮೈಸೂರು: ರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಪ್ರದರ್ಶನಗಳ ಹಬ್ಬ ಪಲ್ಲವೋತ್ಸವವು ಜಗನ್ಮೋಹನ ಅರಮನೆಯಲ್ಲಿ ಶನಿವಾರ ಆರಂಭವಾಯಿತು.
ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರವು ಆಯೋಜಿಸಿರುವ ಮೂರು ದಿನಗಳ ಈ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ವಾಸು, ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ತರಬೇತಿಯನ್ನು ನೀಡಿ ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿ ಪ್ರತಿಬಿಂಬಿಸುತ್ತಿರುವ ಡಾ. ವಸುಂಧರಾ ದೊರೆಸ್ವಾಮಿ ಅವರ ಕಾರ್ಯ ಶ್ಲಾಘನೀಯ ಎಂದರು. ಸಂಗೀತ, ಸಾಹಿತ್ಯ ಹಾಗೂ ನೃತ್ಯ ಮುಂತಾದ ಕಾರ್ಯಕ್ರಮಗಳು ಸಾಂಸ್ಕೃತಿಕ ರಾಜಧಾನಿಯಲ್ಲಿ ಪ್ರತಿದಿನ ನಡೆಯುತ್ತಿರುವುದು ಕಲಾರಂಗಕ್ಕೆ ನೀಡುತ್ತಿರುವ ಕೊಡುಗೆ. ಮೈಸೂರು ಕಲೆಗಳಲ್ಲಿ ಶ್ರೀಮಂತ ನಗರ ಎಂದು ತಿಳಿಸಿದರು.
ರೋಟರಿ ಉತ್ತರ ಸಂಸ್ಥೆ ಅಧ್ಯಕ್ಷ ಜಿ. ಶಿವಲಿಂಗಯ್ಯ ಮಾತನಾಡಿ, ಭರತಖಂಡ ಆಳಿದ ರಾಜರು ನರ್ತಕಿಯರಿಗೆ ಅನೇಕ ದತ್ತಿಗಳನ್ನು ನೀಡಿರುವ ಉದಾಹರಣೆಯಿದ್ದು, ಅದರಲ್ಲೂ ಭರತನಾಟ್ಯಕ್ಕೆ ಮೈಸೂರು ರಾಜರು ಹೆಚ್ಚಿನ ಪ್ರೋತ್ಸಾಹ ನೀಡಿರುವುದು ಚರಿತ್ರೆಯಲ್ಲಿ ದಾಖಲಾಗಿರುವ ಸಂಗತಿ ಎಂದರು. ಇನ್ಫೋಸಿಸ್ ಸಹಾಯಕ ಉಪಾಧ್ಯಕ್ಷ ನಾಗರಾಜನ್ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆ ನಿರ್ದೇಶಕಿ ವಿದುಷಿ ಡಾ. ವಸುಂಧರಾ ದೊರೆಸ್ವಾಮಿ ಇದ್ದರು. ಕಲಾವಿದೆ ಭುವನೇಶ್ವರಿ ನಿರೂಪಿಸಿದರು.  ನಂತರ ವಿದುಷಿ ಪದ್ಮಿನಿ ರಾಮಚಂದ್ರನ್ ಅವರ ಶಿಷ್ಯೆ ಕೀರ್ತನಾ ರವಿ ಭರತನಾಟ್ಯವನ್ನೂ ಹಾಗೂ ಡಾ. ಶೋಭಾ ನಾಯ್ಡು ಅವರ ಶಿಷ್ಯೆ ವೈಷ್ಣವಿ ಮಾಣಿಕ್ಯಲ ಅವರು ಕುಚಿಪುಡಿ ನೃತ್ಯವನ್ನೂ ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement