ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಕ್ರಮ: ವಾಸು

Srinivasa Murthy VN
Updated On : 22 Sept 2013, 11:50 am

ಮೈಸೂರು: ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಶೀಘ್ರದಲ್ಲಿಯೆ ಕ್ರಮ ಕೈಗೊಳ್ಳುವುದಾಗಿ ಚಾಮರಾಜ ಕ್ಷೇತ್ರದ ಶಾಸಕ ವಾಸು ಭರವಸೆ ನೀಡಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಅವರು ಕುಕ್ಕರಹಳ್ಳಿ ಕೆರೆಯ ಉತ್ತರ ಭಾಗ ಸಾಕಷ್ಟು ಕಲುಷಿತವಾಗಿದ್ದು, ಅದಕ್ಕೆ ಕೂಡಲೆ ತಾವು ಏನು ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರ ಬಳಿ ಚರ್ಚಿಸುತ್ತೇನೆ. ಸೆ.24ರ ಬೆಳಗ್ಗೆ 8.30ಕ್ಕೆ ಮಹಾರಾಣಿ ಕಾಲೇಜಿನ ಸಮಸ್ಯೆ ಮತ್ತು ಕುಕ್ಕರಹಳ್ಳಿ ಕೆರೆ ಸಮಸ್ಯೆಯ ಬಗ್ಗೆ ಮಾತನಾಡುತ್ತೇನೆ ಎಂದರು.
ಕೆರೆ ಮೈಸೂರು ವಿವಿ ವಶದಲ್ಲಿದೆ. ಕೆರೆಗೆ ಚರಂಡಿ ನೀರು ಪೂರೈಕೆ ಆಗುತ್ತಿರುವುದು ಮತ್ತು ನೀರು ಪೂರೈಕೆಯಾಗುವ ಕಾಲುವೆ ಒತ್ತುವರಿಯು ನಗರ ಪಾಲಿಕೆ ಮತ್ತು ಎಂಡಿಎ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಎಲ್ಲರನ್ನೂ ಸಭೆ ಕರೆಯಬೇಕಿದೆ. ಇದಕ್ಕೆ ಸಾಕಷ್ಟು ಅಡ್ಡಿ ಆತಂಕ ಇದ್ದು, ಅದನ್ನು ನಿವಾರಿಸಬೇಕಿದೆ ಎಂದು  ಹೇಳಿದರು. ಕೂಡಲೆ ಕುಕ್ಕರಹಳ್ಳಿ ಕೆರೆಗೆ ಮೋರಿ ನೀರು ಹೋಗದಂತೆ ತಡೆಯಲು ಜಲಶುದ್ಧೀಕರಣ ಘಟಕವನ್ನು ತೆರೆಯಬೇಕಿದೆ ಎಂದರು.

ದರ್ವೇಶ್ ಸರ್ಟಿಫಿಕೇಟ್ಗೆ ಆಗ್ರಹ
ಮೈಸೂರು: ಮುಸ್ಲಿಮರಲ್ಲಿನ ಕಸಬ್, ಕಾಸಿ, ದರ್ವೇಸ್, ಚಪ್ಪರ್ ಬಂದ್, ಬಾಜಿಗರ್, ನಾಲಾಬಂದ್ ಮುಂತಾದ ಜನಾಂಗಕ್ಕೆ ದರ್ವೇಶ್ ಪ್ರಮಾಣಪತ್ರ ನೀಡಬೇಕು ಎಂದು ನಗರ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಮಾಜಿ ಅಧ್ಯಕ್ಷ ಅಲ್ಲಾ ಭಕ್ಷ್ ಒತ್ತಾಯಿಸಿದ್ದಾರೆ. 1994 ರಲ್ಲಿ ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿನಂತೆ ದರ್ವೇಶ್ ಪ್ರಮಾಣಪತ್ರ ನೀಡಲಾಗುತ್ತಿತ್ತು. ಇದರಿಂದ ಈ ಪಂಗಡದವರು ಉದ್ಯೋಗ ಪಡೆಯಲು ಅನಕೂಲವಾಗಿತ್ತು. ಆದರೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಲ್ಲಿಸಲಾಯಿತು. ಇದರಿಂದ ತುಂಬಾ ಅನಾನುಕೂಲವಾಗಿದೆ. ಆದ್ದರಿಂದ ಸರ್ಕಾರವು ದರ್ವೇಶ್ ಸರ್ಟಿಫಿಕೇಟ್ ನೀಡುವುದನ್ನು ಪ್ರಾರಂಭಿಸಬೇಕು ಎಂದು ಅಲ್ಲಾಭಕ್ಷ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಸಂಘಟನಾ ಕಾರ್ಯದರ್ಶಿ ಎಸ್. ರೆಹಾನಾ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement