ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪದವಿ ಪೂರ್ವ ಸಮಿತಿ ಉದ್ಘಾಟನೆ

Srinivasa Murthy VN
Updated On : 22 Sept 2013, 11:49 am

ಕ.ಪ್ರ.ವಾರ್ತೆ ಮೈಸೂರು  ಸೆ. 22
ಶಾರದಾ ವಿಷನ್ ಗುರುಕಲಾ ಸಂಸ್ಥೆಯ ಪದವಿಪೂರ್ವ ಸಮಿತಿಯನ್ನು ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಇಂದು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಬೋಧನಾ ವಿಧಾನದೊಂದಿಗೆ ಪರಿಕರಗಳ ಅವಶ್ಯಕತೆ ಇದೆ. ಇದರಿಂದ ಸರಿಯಾದ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದರು. ಕುವೆಂಪು ವಿವಿ ಮಾಜಿ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ, ಡಿಡಿಪಿಯು ಕೆ.ಎಂ. ಪುಟ್ಟು ಮಾತನಾಡಿದರು. ಇದೇ ವೇಳೆ ಸಮಿತಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಮುಖಾಮುಖಿ ಅಣಕು ಸಿಇಟಿ ಆಯೋಜಿಸಲಾಗಿತ್ತು. ಡಿಡಿಪಿಯು ಕೆ.ಎಂ. ಪುಟ್ಟು, ಸಮಿತಿ ಪದಾಧಿಕಾರಿಗಳಾದ ಡಾ.ಕೆ.ಎ. ಪದ್ಮಾಜಿ, ಡಾ.ಎನ್. ಬಸಪ್ಪ, ಡಾ.ಕೆಂಪೇಗೌಡ, ಡಾ.ಸಿ.ಕೆ. ವಿಶ್ವನಾಥ್, ಡಾ. ಚಾಮರಾಜು, ಡಾ. ಅಪ್ಪಾಜಿಗೌಡ ಇದ್ದರು.

ಎನ್.ಆರ್. ಗ್ರೂಪ್ಸ್ಗೆ ಚಿನ್ನದ ಪದಕ
ಕ.ಪ್ರ.ವಾರ್ತೆ ಮೈಸೂರು ಸೆ. 22
ಎನ್. ರಂಗರಾವ್ ಆ್ಯಂಡ್ ಸನ್ಸ್ ಗ್ರೂಪ್ ಧೂಪದ್ರವ್ಯ ತಯಾರಿಕಾ ವಿಭಾಗವು ಭಾರತದ ಗುಣಮಟ್ಟ ವೃತ್ತ ವೇದಿಕೆ (ಕ್ಯೂಸಿಎಫ್ಐ) ನಿಂದ ಚಿನ್ನದ ಪದಕ ಪಡೆದುಕೊಂಡಿದೆ.
 ಬೆಂಗಳೂರಿನಲ್ಲಿ ಕಳೆದ ವಾರ ಡೆದ ಕಾರ್ಯಕ್ರಮದಲ್ಲಿ ಗುಣಮಟ್ಟ ವೃತ್ತ ವೇದಿಕೆಯು ಸಂಸ್ಥೆಗಳಲ್ಲಿ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಲು ಈ ಚಿನ್ನದ ಪದಕ ಪ್ರತಿಷ್ಠಾಪಿಸಿದ್ದಾರೆ.
ರಾಜ್ಯ ವಿವಿಧ ಕೃಗಾರಿಕೆಗಳು ಉತ್ಪಾದನಾ ಮತ್ತು ಸೇವಾ ವಲಯಗಳು ಸೇರಿದಂತೆ 308 ತಂಡಗಳು ಭಾಗವಹಿಸಿದ್ದವು. ರಂಗ ರಾವ್ ಆ್ಯಂಡ್ ಸನ್ಸ್ನ ಪ್ರಸನ್ನ, ದೆಬಶ್ರೀ, ಹರೀಶ್ ಮತ್ತು ನವೀನ್, ಸ್ಫೂರ್ತಿ, ಛಾಯಾ, ಫಿರ್ದೋಸ್, ಮಾಲಾ ಮತ್ತು ವಿನೋದ್ ಅವರನ್ನು ಒಳಗೊಂಡ ಎರಡು ಉತ್ತಮ ಸರ್ಕಲ್ ತಂಡಗಳು ವಿಶ್ಲೇಷಣೆ ಪ್ರಸ್ತುತಪಡಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement