ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಡತನ ನಿವಾರಣೆ ಆಗದಿರುವುದು ದೌರ್ಭಾಗ್ಯ: ಮಹದೇವ ಸ್ವಾಮೀಜಿ

Srinivasa Murthy VN
Updated On : 22 Sept 2013, 11:50 am

ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಸೆ. 22
ದೇಶಕ್ಕೆ ಸ್ವಾತಂತ್ರ ಬಂದು 68 ವರ್ಷ ಕಳೆದರೂ ಇನ್ನೂ ಬಡತನ ಸಮಸ್ಯೆ ಕಾಡುತ್ತಿರುವುದು ದೇಶದ ದೌರ್ಭಾಗ್ಯ ಎಂದು ಬಿಡುಗಲು ಗ್ರಾಮದ ಪಡುವಲು ವಿರಕ್ತ ಮಠದ ಮಠಾಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ವಿಷಾದಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಪ್ರಗತಿ ಬಂಧು ಸ್ವಸಹಾಯ ಸಂಘಗಳ 7 ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಬಡತನವನ್ನು ನಿವಾರಣೆ ಮಾಡಬೇಕೆನ್ನುವುದನ್ನು ಗಾಂಧೀಜಿ ಗ್ರಾಮ ಸ್ವರಾಜ್ ಮೂಲಕ ಕನಸು ಕಂಡಿದ್ದರು. ಆದರೆ ಅವರು ಕಂಡಿದ್ದ ಕನಸು ಇನ್ನೂ ಕನಸಾಗಿಯೆ ಉಳಿದಿದೆ. ಇದಕ್ಕೆ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಇಲ್ಲದಿರುವುದು, ನಮ್ಮಲ್ಲಿಯೆ ಆಸಕ್ತಿ ಇಲ್ಲದಿರುವುದು ಹಾಗೂ ಅಧಿಕಾರಿಗಳಲ್ಲಿನ ಬೇಜವಾಬ್ದಾರಿ ಕಾರಣವಾಗಿದೆ ಎಂದರು.
ಸಂಸ್ಥೆಯ ಪ್ರಾದೇಶಿಕ ನಿದೇರ್ಶಕ ಶ್ರೀಹರಿ ಮಾತನಾಡಿ, ದುಡ್ಡಿನ ಬಡತನಕ್ಕಿಂತ ಬುದ್ಧಿಯ ಬಡತನ ಅಪಾಯಕಾರಿ. ಶ್ರಮಿಕರು, ಬಡವರು, ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಒಂದು ಮಗು ಹುಟ್ಟುತ್ತಿದ್ದಂತೆ ಆರಂಭವಾಗುವ ಯೋಜನೆಗಳು ಆತ ಸಾಯುವವರೆಗೂ ಬೇಕಾದ ಹತ್ತು ಹಲವು ಯೋಜನೆಗಳನ್ನು ಸರ್ಕಾರ ಮಾಡಿದೆ. ಆದರೂ ಅವುಗಳನ್ನು ಬಳಸಿಕೊಳ್ಳಲು ನಮಗೆ ಪ್ರಮುಖ ಕಾಳಜಿ ಅವಶ್ಯ ಎಂದರು.
ಶಾಸಕ ಚಿಕ್ಕಮಾದು, ಮಾಜಿ ಸಚಿವ ಎಂ.ಶಿವಣ್ಣ, ನ್ಯಾಯಾಧೀಶರಾದ ಹನುಮಂತರಾಜು ಮಾತನಾಡಿದರು. ಜಿಪಂ ಸದಸ್ಯ ಬಿ.ವಿ. ಬಸವರಾಜು, ಸತೀಶ್ ಆರಾಧ್ಯ, ನಳಿನಾಕ್ಷಿ, ಉಮಾರಬ್ಬ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement