ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಭ್ರಷ್ಟಾಚಾರಕ್ಕೆ ಸರ್ಜರಿ ಅಗತ್ಯ

Srinivasa Murthy VN
Updated On : 22 Sept 2013, 11:48 am

ಕ.ಪ್ರ.ವಾರ್ತೆ ಮೈಸೂರು ಸೆ. 22
ಪ್ರತಿದಿನ ಪತ್ರಿಕೆಗಳನ್ನು ನೋಡಿದರೆ ಭ್ರಷ್ಟಾಚಾರ, ಹಗರಣಗಳ ಸುದ್ದಿಗಳನ್ನೇ ಓದುತ್ತಿದ್ದೇವೆ. ಇವೆಲ್ಲದಕ್ಕೂ ಅಂತ್ಯ ಹಾಡಲು ಭ್ರಷ್ಟಾಚಾರ ಸಮಾಜಕ್ಕೆ ಸರ್ಜರಿ ಅಗತ್ಯವಿದೆ ಎಂದು ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜಿ ಅಭಿಪ್ರಾಯಪಟ್ಟರು.
ಶ್ರೀ ವಿವೇಕಾನಂದ ಸೇವಾಶ್ರಮ ಮೈಸೂರು ಶಾಖೆಯಲು ಉಷಾಕಿರಣ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಭಾನುವಾರ ಶ್ರೀರಾಮಕೃಷ್ಣ ಆಶ್ರಮ ಸಭಾಂಗಣದಲ್ಲಿ ಏರ್ಪಡಿಸಿದ್ದ ನೂರು ಮಕ್ಕಳಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ.ಕೆ.ವಿ. ರವಿಶಂಕರ್ ಅವರ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಸಮಾಜವೇ ಅಂಗವಿಕಲರಾದರೆ?: ಮಾನವನಲ್ಲಿ ಅಂಗವೈಕಲ್ಯ ಉಂಟಾದರೆ ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಬಹುದು. ಆದರೆ, ಸಮಾಜ ಅಂಗವೈಕಲ್ಯಗೊಂಡರೆ ಸರ್ಜರಿ ಮಾಡುವುದಾದರೆ ಹೇಗೆ? ಅದಕ್ಕೆ ನಿಸ್ವಾರ್ಥ ಸೇವೆಯೇ ಮೂಲ ಮಾರ್ಗ. ಅದನ್ನು ಚಾಚೂ ತಪ್ಪದೇ ಅನುಸರಿಸುತ್ತಿರುವ ಕೆ.ವಿ.ರವಿಶಂಕರ್ ನೂರು ಮಂದಿ ಬಡ ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಿದ್ದಾರೆ. ಅವರ ಸೇವೆ ಹಾಗೂ ವಿವೇಕಾನಂದ ಸೇವಾಶ್ರಮದ ಸೇವೆ ಶ್ಲಾಘನೀಯ ಎಂದರು. ಇದೇ ವೇಳೆ ಉಷಾಕಿರಣ್ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ.ಕೆ.ವಿ. ರವಿಶಂಕರ್ ಹಾಗೂ ಉಮಾ ರವಿಶಂಕರ್ ದಂಪತಿ, ಇವರಿಗೆ ಸಹಾಕರಾಗಿ ಸೇವೆ ಸಲ್ಲಿಸಿದ ಡಾ.ಹೆರಳೆ, ಡಾ. ಶಾಂತಾ, ಅರೆ ವೈದ್ಯಕೀಯ ಸಿಬ್ಬಂದಿ ನಾರಾಯಣ ಪ್ರಸಾದ್, ರಂಗಸ್ವಾಮಿ, ನಾಗರಾಜಶಾಸ್ತ್ರಿ, ಕಮಲಾಕರ್, ಪವನ್ಸಿಂಗ್, ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.
ಉಷಾಕಿರಣ್ ಕಣ್ಣಿನ ಆಸ್ಪತ್ರೆಯ ಸೇವೆಯನ್ನು ಮತ್ತಷ್ಟು ವಿಸ್ತರಿಸುವಂತೆ ಹಾರೈಸಿ ಮುಂಬೈನ ಜಿಕೆಆರ್ ಫೌಂಡೇಷನ್ನ ಅಧ್ಯಕ್ಷ ಜಿ.ಕೆ. ರಾಮಮೂರ್ತಿ ಅವರು 5 ಲಕ್ಷ ದೇಣಿಗೆ ನೀಡಿದರು.
ವಿಶ್ರಾಂತ ಪ್ರಾಧ್ಯಾಪಕ ಎನ್. ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟಿ ಡಾ.ಸಿ.ಆರ್. ತಿರುಮಲಾಚಾರ್ ಅತಿಥಿಯಾಗಿ ಭಾಗವಹಿಸಿದ್ದರು. ಬ್ರಹ್ಮಚಾರಿ ದಕ್ಷ ಚೈತನ್ಯ ಪ್ರಾರ್ಥಿಸಿದರು. ಎನ್. ಸೇತೂರಾಂ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement