ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಶ್ವಕರ್ಮ ಸಮುದಾಯ ಭವನಕ್ಕೆ ನಿವೇಶನ ಮಂಜೂರು: ಶಾಸಕ ಮಹೇಶ್

Srinivasa Murthy VN
Updated On : 22 Sept 2013, 11:52 am

ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 22
ವಿಶ್ವಕರ್ಮ ಸಮಾಜದ ಸಮುದಾಯ ಭವನ ನಿರ್ಮಿಸಲು ಅವಶ್ಯವಿರುವ ನಿವೇಶನವನ್ನು ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರದಿಂದ ಮಂಜೂರು ಮಾಡಿಸಿ 1 ಕೋಟಿ ಅನುದಾನ ನೀಡುವುದಾಗಿ ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪಟ್ಟಣದ ಕಾಳಿಕಾಂಭ ಕಮಟೇಶ್ವರಿ ದೇವಸ್ಥಾನ ಆವರಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಎಲ್ಲಾ ವರ್ಗದವರಿಗೂ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಎಲ್ಲಾ ಸಮಾಜದವರಂತೆ ನೀವು ಸಮುದಾಯ ಭವನ ನಿರ್ಮಾಣ ಮಾಡಲು ವೈಯಕ್ತಿಕವಾಗಿ ಆರ್ಥಿಕ ಸಹಕಾರ ನೀಡುವುದರ ಜತೆಗೆ ವಿವಿಧ ಜನಪ್ರತಿನಿಧಿಗಳಿಂದ 1 ಕೋಟಿ ಹೆಚ್ಚು ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಮಾತನಾಡಿ, ರಾಜ್ಯದಲ್ಲಿ ಸುಮಾರು 35 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಚುನಾವಣಾ ಪೂರ್ವದಲ್ಲಿ ಹೇಳಿದಂತೆ ವಿಶ್ವಕರ್ಮ ನಿಗಮ ಮಂಡಳಿ ಸ್ಥಾಪಿಸಿ 10 ಕೋಟಿ ಬಿಡುಗಡೆ ಮಾಡಿದ್ದಾರೆ. ಇದರಿಂದ ಕಾಯಕ ವೃತ್ತಿ ಮಾಡುವವರಿಗೆ ಸಾಲ- ಸೌಲಭ್ಯ ದೊರೆಯಲಿದ್ದು ಸರ್ಕಾರದ ಸವಲತ್ತು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಸಲಹೆ ನೀಡಿದರು.
ಕಾಂಗ್ರೆಸ್ ಸದಾ ಹಿಂದುಳಿದ ವರ್ಗಗಳ ಪರವಾಗಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಮಾಜದವರಿಗೆ ಆದ್ಯತೆ ನೀಡುತ್ತಿದೆ. ಸಂಸದ ಎಚ್. ವಿಶ್ವನಾಥ್ ಮಾರ್ಗದರ್ಶನದಲ್ಲಿ ಪಟ್ಟಣ ಪುರಸಭೆಗೆ ಅಧ್ಯಕ್ಷರನ್ನು ಮಾಡಲಾಗಿತ್ತು. ಜತೆಗೆ ಕಾಳಿಕಾಂಭ ದೇವಸ್ಥಾನ ನಿರ್ಮಿಸಲು ನಿವೇಶನ ಮತ್ತು ಆರ್ಥಿಕ ಸಹಾಯವನ್ನು ಪಕ್ಷದ ವತಿಯಿಂದ ನೀಡಿರುವುದಾಗಿ ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸಮಾಜದ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಿತ್ ವಿ.ದೇವರಹಟ್ಟಿ, ಪುರಸಭಾ ಸದಸ್ಯ ಕೆ.ಬಿ.ಸುಬ್ರಮಣ್ಯ, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಎಸ್. ರೇವಣ್ಣ, ವೇದಬ್ರಹ್ಮಶರ್ಮ, ಉದ್ಯಮಿ ಉಲ್ಲಾಸ್, ವೀರಭದ್ರಚಾರ್, ಶಿವಮೂರ್ತಿ, ರಾಜಾಚಾರ್, ಹಲಗಚಾರ್, ಎನ್. ರವೀಶ್, ಪ್ರಕಾಶ್, ಪುಟ್ಟಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement